ಹುಳಿಯಾರು ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಗಳು 2014-15 ನೇ ಸಾಲಿನ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಸಮಗ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಶಾಲೆಗೆ ಕೀರ್ತಿ ತಂದಿರುವುದಾಗಿ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ತಿಳಿಸಿದ್ದಾರೆ.
ಪ್ರತಿಭಾಕಾರಂಜಿಯಲ್ಲಿ ಸಮಗ್ರಪ್ರಶಸ್ತಿ ಪಡೆದ ಹುಳಿಯಾರಿನ ವಿದ್ಯಾವಾರಿಧಿ ಶಾಲಾ ಮಕ್ಕಳ ತಂಡದೊಂದಿಗೆ ಕಾರ್ಯದರ್ಶಿ ಕವಿತಾಕಿರಣ್ ಹಾಗೂ ಪ್ರಾಚಾರ್ಯ ರವಿ ಇದ್ದಾರೆ. |
ಎಲ್.ಪಿ.ಎಸ್ ಹಂತ ವಿಭಾಗದಲ್ಲಿ ಜಾನಪದ ನೃತ್ಯದಲ್ಲಿ ಧನ್ಯಶ್ರೀ ತಂಡ ಹಾಗೂ ದೇಶಭಕ್ತಿಗೀತೆ ಗಾಯನದಲ್ಲಿ ಲೇಖನ ತಂಡ ಪ್ರಥಮ ಸ್ಥಾನ ಹಾಗೂ ಸಂಸ್ಕೃತ ಧಾರ್ಮಿಕಪಠಣದಲ್ಲಿ ಪ್ರಕೃತಿ,ಚಿತ್ರಕಲೆಯಲ್ಲಿ ಸುಹಾಸ್ ಪ್ರಥಮಸ್ಥಾನ ಪಡೆದಿದ್ದಾರೆ. ಕನ್ನಡ ಕಂಠಪಾಠದಲ್ಲಿ ಚಿರಂತ್, ಇಂಗ್ಲಿಷ್ ಕಂಠಪಾಠದಲ್ಲಿ ಪ್ರಕೃತಿ,ಅರೇಬಿಕ್ ಧಾರ್ಮಿಕ ಪಠಣದಲ್ಲಿ ರುಖಿಯಾಸಾದತ್,ಛದ್ಮವೇಷ-ಹರಿಣಿ,ಕಧೆ ಹೇಳುವುದರಲ್ಲಿ ಮಹಾಲಕ್ಷ್ಮಿ,ಕೋಲಾಟದಲ್ಲಿ ವರ್ಷಿಣಿ ತಂಡ, ಕ್ವಿಜ್ ನಲ್ಲಿ ಸುಹಾಸ್ ತಂಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೆಚ್.ಪಿ.ಎಸ್. ಹಂತ ವಿಭಾಗದಲ್ಲಿ ಕಂಠಪಾಠ ಸ್ಪರ್ಧೆಯಲ್ಲಿ ಕನ್ನಡದಲ್ಲಿ ಸ್ಪಂದನ,ಇಂಗ್ಲಿಷ್ ನಲ್ಲಿ ದೀಪಶ್ರೀ,ಲಘು ಸಂಗೀತದಲ್ಲಿ ಸಾಹಿತ್ಯ ರಮೇಶ್,ಛದ್ಮವೇಷದಲ್ಲಿ ಹರ್ಮನ್, ಚಿತ್ರಕಲೆಯಲ್ಲಿ ಸಿದ್ದಲಿಂಗಮೂರ್ತಿ, ಕಧೆಹೇಳುವುದರಲ್ಲಿ ಪೂಜಾ, ಯೋಗಾಸನದಲ್ಲಿ ಚೇತನ್,ಜಾನಪದ ನೃತ್ಯದಲ್ಲಿ ಪೃಥ್ವಿ ತಂಡ,ದೇಶಭಕ್ತಿಗೀತೆ ಗಾಯನದಲ್ಲಿ ಸಾಹಿತ್ಯ ತಂಡ, ಕ್ವಿಜ್ ನಲ್ಲಿ ಸಯ್ಯದ್ ಸುಮೀರ್ ತಂಡ ಪ್ರಥಮ ಸ್ಥಾನಪಡೆದರೆ. ಹಿಂದಿಕಂಠಪಾಠದಲ್ಲಿ ಪೃಥ್ವಿಕ್, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಕುತೇಜತಲ್ ಕುಬ್ರಾ ದ್ವಿತೀಯ ಸ್ಥಾನಪಡೆದಿದ್ದಾರೆ.
ಪ್ರತಿಭಾಕಾರಂಜಿಯಲ್ಲಿ ಸಮಗ್ರಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಕಿರಣ್ ಕುಮಾರ್, ಪ್ರಾಚಾರ್ಯ ರವಿ,ಶಿಕ್ಷಕ ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ