ತುಮಕೂರು ವಿಶ್ವ ವಿದ್ಯಾನಿಲಯ ಪದವಿ ಹಂತದ ಪರೀಕ್ಷಾ ಶುಲ್ಕವನ್ನು ಏಕಾಏಕಿ ಹೆಚ್ಚಳಮಾಡಿರುವುದನ್ನು ಖಂಡಿಸಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳನ್ನು ತೊರೆದು ಮಂಗಳವಾರ ಪ್ರತಿಭಟಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರಿಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು. |
ಬಿಎ,ಬಿಕಾಂ ಸೇರಿದಂತೆ ಇನ್ನಿತರ ಕೋರ್ಸ್ ಗಳ ಪರೀಕ್ಷೆಗಳ ಶುಲ್ಕವಾಗಿ ಎಲ್ಲರೂ 1220 ಕಟ್ಟಬೇಕು ಎಂದು ತಿಳಿಸಿದ್ದೆ ಪ್ರತಿಭಟನೆಗೆ ಕಾರಣಾವಾಯಿತು. ಈ ಹಿಂದೆ ಆದಾಯ ಪ್ರಮಾಣಪತ್ರ ನೀಡಿದವರು 220ರೂ , ಆದಾಯ ಪ್ರಮಾಣಪತ್ರವಿಲ್ಲದವರು 1220ರೂ ಕಟ್ಟುತ್ತಿದ್ದು ಇದೀಗ ಎಲ್ಲರೂ 1220ರೂ ಕಟ್ಟಬೇಕು ಎಂದು ತಿಳಿಸಿರುವುದು ಗ್ರಾಮೀಣಭಾಗದ ಬಡ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾನಿಲಯ ಅವೈಜ್ಞಾನಿಕವಾಗಿ ಪರಿಕ್ಷಾ ಶುಲ್ಕ ಹೆಚ್ಚಳ ಮಾಡಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಕುಲಸಚಿವರು ಪರೀಕ್ಷಾ ಶುಲ್ಕವನ್ನು ಈ ಹಿಂದಿನಂತೆ ಮುಂದುವರಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದರು. ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡದೆ ಹೋದರೆ ನಾವ್ಯಾರು ಪರಿಕ್ಷಾ ಶುಲ್ಕ ಕಟ್ಟದೆ ಪುನ: ಮತ್ತೊಮ್ಮೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲೆ ಡಿ.ದೇವಿರಮ್ಮ ಮಾತನಾಡಿ, ವಿಶ್ವವಿದ್ಯಾನಿಲಯದ ಆದೇಶದನ್ವಯ ಶುಲ್ಕಕಟ್ಟುವಂತೆ ತಿಳಿಸಿದ್ದು, ಆದಾಯ ಪ್ರಮಾಣ ಪತ್ರ ನೀಡಿದವರಿಗೆ ಆ ಹಣ ವಿದ್ಯಾರ್ಥಿ ವೇತನದ ಮೂಲಕ ವಾಪಸ್ಸ್ ಬರುತ್ತದೆ ಎಂದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸುವುದಾಗಿ ಭರವಸೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ