ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿ ಮಂಗಳಯಾನ ಮಾಡಿದ್ದರ ಹಿನ್ನಲೆಯಲ್ಲಿ ಪಟ್ಟಣದ ವಾಸವಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಹುಳಿಯಾರಿನ ವಾಸವಿ ಶಾಲೆಯಲ್ಲಿ ಮುಖ್ಯಶಿಕ್ಷಕ ಮಹೇಶ್ ಮಕ್ಕಳಿಗೆ ಮಂಗಳಯಾನದ ಯಶಸ್ಸಿನ ಬಗ್ಗೆ ತಿಳಿಸಿ, ಸಂಭ್ರಮಾಚರಣೆ ಮಾಡಿದರು. |
ಮುಖ್ಯ ಶಿಕ್ಷಕ ಮಹೇಶ್ ಮಾತನಾಡಿ ಮಂಗಳಯಾನವನ್ನು ಯಶಸ್ವಿಗೊಳಿಸಿದ್ದು ನಮ್ಮ ವಿಜ್ಞಾನಿಗಳ ಐತಿಹಾಸಿಕ ಸಾಧನೆಯಾಗಿದ್ದು ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಇವರ ಈ ಸಾಧನೆ ಶ್ಲಾಘನೀಯ ಎಂದರು. ಇಂತಹ ಮಹತ್ವದ ಕಾರ್ಯಕ್ಕೆ ಕೈಹಾಕಿ ಅದನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದ ಇಸ್ರೋದ ಸಾಧನೆ ಅವಿಸ್ಮರಣೀಯ ಎಂದರು. ಮಂಗಳಯಾನಕ್ಕೆ ವಿಜ್ಞಾನಿಗಳು ಪಟ್ಟ ಪರಿಶ್ರಮ ಎಂತಹದ್ದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರಲ್ಲದೆ ಇಂತಹ ವಿಜ್ಞಾನಿಗಳಂತೆ ಇಂದಿನ ವಿದ್ಯಾರ್ಥಿಗಳು ಹೊರಹುಮ್ಮಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಲಕ್ಷ್ಮಿಕಾಂತ್, ಕಾರ್ಯದರ್ಶಿ ರಾಮನಾಥ್,ನಿರ್ದೇಶಕರಾದ ಬಿ.ವಿ.ಶ್ರೀನಿವಾಸ್, ಚಂದ್ರಶೇಖರ್, ಮುಖ್ಯ ಶಿಕ್ಷಕ ರಮೇಶ್ ಸೇರಿದಂತೆ ಇತರ ಶಿಕ್ಷಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ