ಛಾಯಾಗ್ರಾಹಕ ತನ್ನ ಕಲ್ಪನೆಗನುಣವಾಗಿ ತೆಗೆಯುವ ಛಾಯಾಚಿತ್ರದ ಹಿಂದೆ ಸಾವಿರಾರು ಪದಗಳಿರುತ್ತವೆ .ವೀಕ್ಷಿಸಿದವರು ಅವರವರ ಮನೋಭಿಲಾಷೆಗೆ ತಕ್ಕಂತೆ ಅರ್ಥಯಿಸಿಕೊಳ್ಳುತ್ತಾರೆ. ಒಂದು ಪುಟದಲ್ಲಿ ಹೇಳುವುದನ್ನು ಕೇವಲ ಒಂದು ಪೋಟೋದಲ್ಲಿ ಅರ್ಥೈಸಬಹುದು ಎಂದು ಛಾಯಾಗ್ರಾಹಕ ದಂಡಿನಶಿವರ ತಿಮ್ಮೇಗೌಡ ತಿಳಿಸಿದರು.
ಹುಳಿಯಾರು ಹೋಬಳಿ ಛಾಯಾಚಿತ್ರ ಗ್ರಾಹಕರ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ 175 ನೇ ವರ್ಷದ ಛಾಯಾಚಿತ್ರಗ್ರಾಹಕರ ದಿನದ ಅಂಗವಾಗಿ ಪಟ್ಟಣದ ಗಣಪತಿ ದೇವಾಲಯದಲ್ಲಿ ಅಯೋಜಿಸಿದ್ದ ಮಕ್ಕಳ ಭಾವಚಿತ್ರ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರಿನಲ್ಲಿ ನಡೆದ ಮಕ್ಕಳ ಭಾವಚಿತ್ರ ಸ್ಪರ್ಧೆ ಉದ್ಘಾಟಿಸಿದ ಛಾಯಾಗ್ರಾಹಕ ದಂಡಿನಶಿವರ ತಿಮ್ಮೇಗೌಡ ಮಾತನಾಡುತ್ತಿರುವುದು. |
ಛಾಯಾಚಿತ್ರ ತೆಗೆಯಲು ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನವಿದ್ದು ಸುಲಭವಾಗಿ ಚಿತ್ರಗಳನ್ನು ಚಿತ್ರಿಸಬಹುದಾಗಿದೆ. ಆದರೆ ಕಳೆದ ಕೆಲ ವರ್ಷ ಹಿಂದಕ್ಕೆ ನಾವು ತಿರುಗಿ ನೋಡಿದರೆ ಅಂದು ಕಪ್ಪು-ಬಿಳುಪು ಪೋಟೋ ಪ್ರಿಂಟ್ ಹಾಕುವುದು ಸಹ ಸಾಹಸದ ಕೆಲಸವಾಗಿತ್ತು ಅಂದಿನ ಛಾಯಾಗ್ರಾಹಕರ ಉತೃಷ್ಟ ಸೃಜನಶೀಲತೆಯನ್ನು ಮೆಚ್ಚಲೇಬೇಕು ಎಂದರು. ನಾವು ಅಳಿದರೂ ಸಹ ನಾವು ತೆಗೆದ ಪೋಟೋಗಳು ಉಳಿಯುತ್ತದಲ್ಲದೆ , ಇದರಿಂದ ನಮ್ಮ ಹೆಸರು ಸಹ ಉಳಿಯುತ್ತದೆ ಆ ನಿಟ್ಟಿನಲ್ಲಿ ಛಾಯಾಗ್ರಾಹಕರು ಸದಾ ಉತ್ತಮ ಚಿತ್ರಗಳನ್ನು ಚಿತ್ರಿಸಿಸುವಲ್ಲಿ ಮುಂದಾಗಿ ಎಂದು ಕಿವಿಮಾತು ಹೇಳಿದರು. ಇಡಿ ಜಿಲ್ಲೆಯಲ್ಲಿ ಗಮನಿಸಿದರೆ ಹಿರಿಯ ಛಾಯಾಗ್ರಾಹಕರು ಹುಳಿಯಾರಿನಲ್ಲಿರುವುದು ಶ್ಲಾಘನೀಯ ಎಂದರು.
ಈ ಬಾರಿ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಂಡಿನಶಿವರದ ಚೇತನ್ ಕುಮಾರ್ ಮಾತನಾಡಿ, ನಾವು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿಂದಿನ ಕಾಲದವರು ಚಿತ್ರಿಸಿದ ಚಿತ್ರಗಳನ್ನು ನೋಡಿ ಅಂದಿನ ಜೀವನದ ಬಗ್ಗೆ ತಿಳಿಯುವ ರೀತಿ ಇಂದು ಚಿತ್ರಿಸುವ ಚಿತ್ರಗಳು ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶಕವಾಗಲಿದೆ . ಛಾಯಾಚಿತ್ರದಲ್ಲಿ ವ್ಯಕ್ತವಾಗುವ ಭಾವನೆ ಎಲ್ಲಾ ಭಾಷಿಕರಿಗೂ ಅರ್ಥವಾಗುವಂತದ್ದಾಗಿದ್ದು , ಅದನ್ನು ಯಾರೂ ಅರ್ಥೈಸುವ ಅವಶ್ಯಕತೆಯಿಲ್ಲ ಎಂದರು.
ಸಂಘದ ಅಧ್ಯಕ್ಷ ರಾಜುಬಡಗಿ ಅಧ್ಯಕ್ಷತೆವಹಿಸಿದ್ದು, ತಾಂಡಾವಾಚಾರ್,ದುರ್ಗರಾಜ್, ಚಂದ್ರಶೇಖರ್,ಸುದರ್ಶನ್, ಈಶ್ವರ್,ರವಿ,ಯತೀಶ್, ಮೋಹನ್,ಕೆಂಕೆರೆಮಂಜು, ರಘು, ಓಂಕಾರ್ , ಮಹೇಶ್, ಶಿವು ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವನ್ಯಪ್ರಾಣಿ ಛಾಯಾಗ್ರಾಹ ಹಾಗೂ ರಾಜ್ಯಪ್ರಶಸ್ತಿ ವಿಜೇತ ಸೀಗೇಬಾಗಿ ವರದರಾಜ್ ಅವರನ್ನು ಸನ್ಮಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ