ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಮ್ಮನವರ ವಿಸರ್ಜನಾ ಕಾರ್ಯ ಮಂಗಳವಾರ ನಡೆಯಲಿದೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಗೌರಮ್ಮನವರ ವಿಸರ್ಜನಾ ಕಾರ್ಯದ ಅಂಗವಾಗಿ ಸೋಮವಾರ ಅನ್ನಸಂತರ್ಪಣೆ ನಡೆಸಲಾಯಿತು. |
ವಿಸರ್ಜನಾ ಕಾರ್ಯದ ಅಂಗವಾಗಿ ಗೌರಮ್ಮ ಹಾಗೂ ಗ್ರಾಮದೇವತೆ ಕಾಳಮ್ಮದೇವಿಯ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನದೊಂದಿಗೆ ನಡೆಯಲಿದೆ. ಗಂಗಾಪ್ರವೇಶದ ಅಂಗವಾಗಿ ಸೋಮವಾರದಂದು ಗ್ರಾಮದ ಚನ್ನಬಸವೇಶ್ವರ ಹಾಗೂ ಕಾಳಿಕಾಂಭ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು. ನೂರಾರು ಮಂದಿ ಭಕ್ತರು ದೇವಾಲಯದಲ್ಲಿಗೆ ಆಗಮಿಸಿ ಗೌರಮ್ಮನವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಚನ್ನಬಸವಯ್ಯ,ಗಂಗಣ್ಣ,ಭದ್ರೇಶ್,ಕೇಶವಮೂರ್ತಿ, ಕಡ್ಲೆಉಂಡೆರೇಣುಕಣ್ಣ, ರಾಜಶೇಖರ್, ಶಿವಕುಮಾರ್, ಕೊಟ್ರೇಶ್, ಸಿದ್ದೇಶ್,ಚರಣ್,ಪ್ರವೀಣ್,ಸತೀಶ್ ಸೇರಿದಂತೆ ಯುವಕ ಮಂಡಳಿಯವರು, ಸುತ್ತಮುತ್ತಲ ಹಳ್ಳಿಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ