ಹುಳಿಯಾರು ಪಟ್ಟಣದ ಎಂಪಿಎಸ್ ಶಾಲಾವರಣದಲ್ಲಿ ಸೋಮವಾರ ನಡೆದ ಪ್ರಾಥಮಿಕಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಳ್ಗೊಂಡಿದ್ದ ವಿವಿಧ ಶಾಲೆಯ ಮಕ್ಕಳು ತಮ್ಮ ಕೈಚಳಕದಿಂದ ಸ್ಥಳದಲ್ಲೇ ಆಕೃತಿಗಳನ್ನು ಸಿದ್ದಮಾಡುತ್ತಿದ್ದು ಗಮನಸೆಳೆಯಿತು.
ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ನಡೆದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಆಕೃತಿರಚನೆಯಲ್ಲಿ ಮಗ್ನರಾಗಿರುವ ವಿದ್ಯಾರ್ಥಿಗಳು. |
ಹೋಬಳಿಯ ಕ್ಲಸ್ಟರ್ ಮಟ್ಟದ ಒಟ್ಟು 21 ಪ್ರಾಥಮಿಕ ಶಾಲೆಯ ಮಕ್ಕಳು ಪಾಲ್ಗೊಂಡಿದ್ದು ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೇರೆ ಬೇರೆ ಹಂತದಲ್ಲಿ ಸ್ಪರ್ಧೆಗಳನ್ನು ನಡೆಸಿದ್ದು, ಮಕ್ಕಳು ಜಾನಪದ ಸೊಗಡಿನ ಹಾಗೂ ಪೌರಾಣಿಕ ವ್ಯಕ್ತಿಗಳ ಆಕರ್ಷಕ ಉಡುಪುಗಳನ್ನು ಧರಿಸಿ ಉತ್ಸಾಹದಿಂದ ಪಾಲ್ಗೊಂಡು ತಮಗೆ ಗೊತ್ತುಪಡಿಸಿದ ಸ್ಪರ್ಧೆಗಳಲ್ಲಿ ಆಡುತ್ತಿದ್ದು ಕಂಡುಬಂತು. ಮಕ್ಕಳು ಜೇಡಿಮಣ್ಣಿನಲ್ಲಿ ತಯಾರಿಸಿದ ಗಣೇಶನ ವಿಗ್ರಹಳು, ಮೊಸಳೆ, ಹಾವು, ನವಿಲು, ವೀಣೆ ತಯಾರಿಸುವಲ್ಲಿ ತಲ್ಲೀನವಾಗಿದ್ದು ಇವರ ಕಲ್ಪನಾ ಶಕ್ತಿಗೆ ಒರೆಹಚ್ಚುವಂತಿತ್ತು. ಒಟ್ಟಾರೆ ಪ್ರತಿಭಾಕಾರಂಜಿ ಕಾರ್ಯಕ್ರಮ ಗ್ರಾಮೀಣ ಭಾಗದ ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿ ಕಂಡುಬಂತು. ಸ್ಥಳದಲ್ಲೇ ವಿವಿಧ ಕಲಾಕೃತಿಗಳ ತಯಾರಿ, ಚಿತ್ರ ಬಿಡಿಸುವುದು, ನೃತ್ಯ,ಏಕಪಾತ್ರಾಭಿನಯ, ಕೋಲಾಟ, ಪ್ರಬಂಧ ಸ್ಪರ್ಧೆ, ಪದ್ಯಗಳ ಗಾಯನ ಸೇರಿದಂತೆ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿಜೇತರಾದ ಮಕ್ಕಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಸಿಆರ್.ಪಿ.ಪ್ರೇಮಲೀಲಾ, ವಿಜಯ್ ಕುಮಾರಿ, ಎಂಪಿಎಸ್ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪ, ಎಚ್.ಪಿಜಿಎಸ್ ನ ಮುಖ್ಯಶಿಕ್ಷಕ ನಂದವಾಡಗಿ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ