ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಲಂಬಾಣಿ ಸಂಸ್ಕೃತಿ ಅಖಂಡ ಭಾರತೀಯ ಸಂಸ್ಕೃತಿಯಾಗಿದೆ :

ಲಂಬಾಣಿ ಸಮುದಾಯದವರು ಭಾರತದ ಎಲ್ಲೆಡೆಯಿದ್ದು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದುವ ಮೂಲಕ ಪುರಾತನ ಕಾಲದಿಂದಲೂ ತಮ್ಮ ಸಂಸ್ಕೃತಿಯನ್ನು ಇಂದಿನವರೆಗೆ ಅನುಸರಿಸಿಕೊಂಡು ಬರುತ್ತಿದ್ದು ನಮ್ಮ ಲಂಬಾಣಿ ಸಂಸ್ಕೃತಿ ಅಖಂಡ ಭಾರತದ ಸಂಸ್ಕೃತಿಯಾಗಿದೆ ಎಂದು ಮಾಯಕೊಂಡ ಶಾಸಕ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ.ಶಿವಮೂರ್ತಿ ನಾಯಕ್ ಅಭಿಮತ ವ್ಯಕ್ತಪಡಿಸಿದರು.           ಹುಳಿಯಾರಿನ ಕೋಡೀಪಾಳ್ಯದ ಕಂಕಾಳಿ ದೇವಾಲಯ ಕಂಕಾಳಿ ಮತ್ತು ಶ್ರೀ ತುಳಜಾ ಭವಾನಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಹುಳಿಯಾರು ಹೋಬಳಿ ಕೋಡಿಪಾಳ್ಯದಲ್ಲಿ ಕಂಕಾಳಿ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ.ಶಿವಮೂರ್ತಿ ನಾಯಕ್ ಮಾಧ್ಯಮದವರೊಂದಿಗೆ ಮಾತನಾಡಿದರು.        ಲಂಬಾಣಿ(ಬಂಜಾರ) ಜನಾಂಗದವರು ಹಿಂದಿನಿಂದಲೂ ಸಹ ತಮ್ಮದೇ ಆದ ವಿಶಿಷ್ಟ ಉಡುಗೆತೊಡುಗೆ ಹಾಗೂ ಭಾಷೆಯನ್ನು ಹೊಂದಿದ್ದು ಇಂದಿಗೂ ಅದನ್ನೇ ಅನುಸರಿಸಿಕೊಂಡು ಸಾಗುತ್ತಿದ್ದಾರೆ. ನಮ್ಮ ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೋಯ್ಯುವ ಕೆಲಸವನ್ನು ಮಾಡಬೇಕಿದೆ ಎಂದರು. ಲಂಬಾಣಿ ಸಮುದಾಯದ ನಾವುಗಳು ಮೂಲ ನಿವಾಸಿಗಳೇ ಆಗಿದ್ದರೂ ಸಹ ಇಂದು ನಮ್ಮ ಹಕ್ಕುಗಳು ನಮಗೆ ದೊರೆಯದಂ...

ಕೋಡಿಪಾಳ್ಯದಲ್ಲಿ ಮೇ ೩ ರಿಂದ ಕಂಕಾಳಿನೂತನ ಮತ್ತು ತುಳುಜಾ ಭವಾನಿ ದೇವಾಲಯದ ಉದ್ಘಾಟನೆ

ನಾಗಾಸಾಧುಗಳ ಉಪಸ್ಥಿತಿ:ಖ್ಯಾತ ಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ ಹುಳಿಯಾರು :ಪಟ್ಟಣದ ಕೋಡಿಪಾಳ್ಯದಲ್ಲಿ ಶ್ರೀ ಮಾತಾ ಚಾರಿಟಲ್ ಟ್ರಸ್ಟ್ ವತಿಯಿಂದ ನೂತನವಾಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಕಂಕಾಳಿ ಮಾತೆ, ಶ್ರೀ ತುಳಜಾ ಭವಾನಿ, ಶ್ರೀ ಮರಿಯಮ್ಮ, ಶ್ರೀ ಬಲಮುರಿ ಗಣಪತಿ, ಶ್ರೀ ನವಗ್ರಹ ದೇವತೆಗಳು ಹಾಗೂ ಶ್ರೀ ಅನಂತ ಪದ್ಮನಾಭ ಸ್ವಾಮಿ ಮೂರ್ತಿಗಳ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಸಹಸ್ರ ಕುಂಭಾಭಿಷೇಕ ಮಹೋತ್ಸವವು ಮೇ ೩ ರಿಂದ ೫ರವರೆಗೆ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಗಂಗಾಧರ್ ತಿಳಿಸಿದರು.            ನೂತನ ದೇವಾಲಯ ಆವರಣದಲ್ಲಿನ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಲೋಕಾರ್ಪಣೆ ಕುರಿತಂತೆ ಮಾತನಾಡಿದ ಅವರು ಮೇ ೩,೪ ಹಾಗೂ ೫ ರಂದು ದೇವಾಲಯಗಳ ಪ್ರಾರಂಭೋತ್ಸವವನ್ನು ಆಗಮ ಶಾಸ್ತ್ರದಂತೆ ನಡೆಸಲಾಗುವುದು ಎಂದರು.ಈ ನೂತನ ದೇವಾಲಯವನ್ನು ಸುಮಾರು ೩೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ೫ ಎಕರೆ ಜಾಗದಲ್ಲಿ ದೇವಾಲಯ ಸೇರಿದಂತೆ,ಸೇವಾಲಾಲ್ ಸಾಂಸ್ಕೃತಿಕ ಸದನ, ಪಿರಮಿಡ್ ಆಕಾರದ ೨೦೦ ಮಂದಿ ಧ್ಯಾನ ಮಾಡಬಹುದಾದ ಧ್ಯಾನ ಮಂದಿರವನ್ನು ಕೂಡಾ ನಿರ್ಮಿಸಲಾಗಿದ್ದು ಪ್ರತಿಷ್ಟಾಪನೆಗೆ ಹಿಮಾಲಯದಲ್ಲಿ ತಪಸ್ಸು ನಿರತರಾಗಿರುವ ನಾಗಸಾಧುಗಳು ಆಗಮಿಸಲಿದ್ದಾರೆ ಎಂದರು.ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆ...

ಹುಳಿಯಾರಿನಲ್ಲಿ ಅದುರಿದ ಭೂಮಿ:ಭಯಭೀತರಾದ ಜನ

ಹುಳಿಯಾರು ಸೇರಿದಂತೆ ಗಡಿಭಾಗದ ಹೊಸದುರ್ಗ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ ಅಲ್ಪ ತೀವ್ರತೆಯ ಭೂ ಕಂಪವಾಗಿದ್ದು,ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲಾಗಿದೆ. ಮೇಲನಹಳ್ಳಿಯ ಗ್ರಾಮದಲ್ಲಿ ಮನೆಯಿಂದ ಭಯಭೀತರಾಗಿ ಆಚೆ ಓಡಿಬಂದ ಜನ ಭೂಕಂಪನದ ಬಗ್ಗೆ ಚರ್ಚಿಸುತ್ತಿರುವುದು. ಇಂದು ಮುಂಜಾನೆ ೬.೪೦ರ ಸಮಯದಲ್ಲಿ ಹುಳಿಯಾರು ಮತ್ತಿತರ ಕೆಲ ಗ್ರಾಮಗಳಲ್ಲಿ ಐದಾರು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ್ದು ಮನೆಯಲ್ಲಿದ್ದವರು ಇದರ ತೀವ್ರತೆಗೆ ಭಯಭೀತರಾಗಿ ಆಚೆ ಓಡಿಬಂದಿದ್ದಾರೆ. ಮನೆಯಲ್ಲಿ ಮಲಗಿದ್ದವರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ,ಗಾಬರಿಯಿಂದ ಏನಾಗಿದೆ ಎತ್ತಾಗಿದೆ ಎಂದು ತಿಳಿಯದೆ ಆಚೆ ಓಡಿಬಂದಿದ್ದಾರೆ.ಒಳಗಿದ್ದವರನ್ನು ಕೂಗಿ ಕರೆದಿದ್ದಾರೆ.ಭೂಕಂಪನದ ತೀವ್ರತೆ ಮಹಡಿ ಮೇಲಿದ್ದವರಿಗೆ ಹೆಚ್ಚಿಗೆ ಅನುಭವಕ್ಕೆ ಬಂದಿದ್ದು ಇಳಿದು ಓಡಿದ್ದಷ್ಟೆ ಗೊತ್ತು ಎನ್ನುತ್ತಾರೆ.ಕೆಲವೇ ಸೆಂಕೆಂಡುಗಳಷ್ಟು ಕಾಲದ ಕಂಪನವಾದ್ದರಿಂದ ಕೆಲವರಿಗೆ ಏನಾಯಿತೆಂದು ತಿಳಿಯದೆ ಆತಂಕದಲ್ಲಿದ್ದರು.ಅಕ್ಕಪಕ್ಕದವರ ಜೊತೆ ತಾವು ಅನುಭಸಿದ್ದನ್ನು ಹೇಳಿಕೊಂಡು ಮುಂದೇನು ಎಂದು ಅವರಿವರಿಗೆ ಫೋನ್ ಮಾಡುತ್ತಿದ್ದ ದೃಶ್ಯ ಕಂಡುಬಂತು.ಒಟ್ಟಾರೆ ಎಲ್ಲೆಡೆಯೂ ಭೂಕಂಪನದ್ದೆ ಮಾತಾಗಿದ್ದು .ಭೂಕಂಪನದಿಂದಾಗಿ ಹೋಬಳಿಯಲ್ಲಿ ಯಾವುದೇ ಸಾವು ನೋವು,ಮತ್ತಿತರ ಅವಘಡಗಳು ಸಂಭವಿಸಿರುವುದು ವರದಿಯಾಗಿಲ್ಲ.           ...

ಹುಳಿಯಾರು:ಪ್ರಥಮ ದಿನದಂದು ಸುಗಮವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ

ಹುಳಿಯಾರು: ಪಟ್ಟಣದ ಟಿ.ಆರ್.ಎಸ್.ಆರ್ ಪ್ರೌಢಶಾಲೆ , ಕನಕದಾಸ ಪ್ರೌಢಶಾಲೆ ಹಾಗೂ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಸೇರಿದಂತೆ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಆರಂಭವಾದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಟ್ಟು ೬೨೮ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆದರು.ಪ್ರಾರಂಭಿಕ ಹಂತದ ಕೆಲವೊಂದು ಗೊಂದಲಗಳನ್ನು ಬಿಟ್ಟರೆ ಪರೀಕ್ಷೆ ಯಾವುದೇ ಸಮಸ್ಯೆಯಿಲ್ಲದಂತೆ ಸುಗಮವಾಗಿ ನಡೆಯಿತು. ಹುಳಿಯಾರಿನ ಟಿ.ಆರ್.ಎಸ್.ಆರ್ ಪ್ರೌಢಶಾಲೆಗೆ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು.           ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರುಗಳೊಂದಿಗೆ ಮುಂಚಿತವಾಗಿಯೇ ಆಗಮಿಸಿ ತಮ್ಮ ಕೊಠಡಿ ಸಂಖ್ಯೆಯನ್ನು ಗಮನ ಮಾಡುತ್ತಿದ್ದ ದೃಶ್ಯ ಎಲ್ಲಾ ಕೇಂದ್ರಗಳಲ್ಲೂ ಕಂಡುಬಂತು.           ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಬೆ.9.೦೦ರಿಂದ 9.30 ಸಮಯದೊಳಗೆ ಕೊಠಡಿಗೆ ಹಾಜರಾಗಬೇಕಾಗಿತ್ತು.ಆದರೆ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇದರ ಅರಿವಿಲ್ಲದೆ ಎಂಟುಗಂಟೆಯಿಂದಲೇ ವಿದ್ಯಾರ್ಥಿಗಳಿಗೆ ಕೊಠಡಿಪ್ರವೇಶಕ್ಕೆ ಅವಕಾಶ ಮಾಡಲಾಗಿತ್ತ...

ಹುಳಿಯಾರು: ಯುಗಾದಿಗೆ ಸಿದ್ಧತೆ ಬಲು ಜೋರು

ಹುಳಿಯಾರು: ಬೆಲೆ ಏರಿಕೆ ನಡುವೆಯೂ ಪಟ್ಟಣದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆದಿದ್ದು ಹಬ್ಬದ ಗೌಜು, ಗದ್ದಲದ ಮಧ್ಯೆ ಮಂಗಳವಾರ ನಡೆದ ಹಬ್ಬದ ಸಂತೆಯಲ್ಲಿ ಅಗತ್ಯ ವಸ್ತುಗಳಖರೀದಿ ಭರಾಟೆ ಜೋರಾಗಿ ಸಾಗಿತ್ತು. ಹುಳಿಯಾರಿನಲ್ಲಿ ನಡೆದ ಹಬ್ಬದ ಸಂತೆಯಲ್ಲಿ ಯುಗಾದಿ ಹಬ್ಬಕ್ಕೆ ಬೇಕಾದ ದಿನಸಿ ಕೊಳ್ಳಲು ಮುಗಿಬಿದ್ದ ಜನತೆ          ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸಹ ಹಬ್ಬಕ್ಕೆ ಬೇಕಾದ ದಿನಸಿ,ತರಕಾರಿ,ಹೂವು,ಹಣ್ಣು ಮೊದಲಾದವುಗಳನ್ನು ಕೊಳ್ಳಲು ಸಾಕಷ್ಟು ಜನ ಜಮಾಯಿಸಿದ್ದು ಸಂತೆ ಜನರಿಂದ ಗಿಜಗುಡುತಿತ್ತು.         ಪಟ್ಟಣದ ಗಾಂಧಿಪೇಟೆ,  ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಸಂತೆ ಸೇರಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನರೇ ಕಾಣಿಸುತ್ತಿದ್ದರು. ಸಂತೆಯಲ್ಲಿನ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳ ಬಳಿ ಹೆಚ್ಚು ಜನ ಜಮಾಯಿಸಿದ್ದರಲ್ಲದೆ, ತರಕಾರಿ ಅಂಗಡಿ, ಹಣ್ಣು, ಹೂ ಅಂಗಡಿಗಳಲ್ಲೂ ಸಹ ಮಾರಾಟ ಜೋರಾಗಿತ್ತು. ಯುಗಾದಿ ಹಬ್ಬದಂದು ಹೊಸಬಟ್ಟೆ ತೊಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿದ್ದು ಕಡೇಪಕ್ಷ ಹಬ್ಬದ ದಿನ ಉಡುದಾರವನ್ನಾದರೂ ತೊಡಬೇಕೆನ್ನುವ ಆಚರಣಿಯಿಂದಾಗಿ ಉಡುದಾರ ಮಾರುವವರಿಗೂ ಬೇಡಿಕೆ ಹೆಚ್ಚಾಗಿತ್ತು. ಯುಗಾದಿ ಉಡುದಾರ : ಹಬ್ಬದ ಅಂಗವಾಗಿ ಉಡುದಾರದ ವ್ಯಾಪಾರ ತಕ್ಕಮಟ್ಟಿಗಿದ್ದು, ಕೆ...

ಹುಳಿಯಾರು:ಯುಗಾದಿ ಹಬ್ಬಕ್ಕೆ ಜೂಜಾಟ ನಿಷೇಧ

ಹುಳಿಯಾರು : ಯುಗಾದಿ ಹಬ್ಬದಂದು ಜೂಜಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಅಕ್ರಮವಾಗಿ ಜೂಜಾಡುವವರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದೆಂದು ಹುಳಿಯಾರು ಪಿಎಸ್‌ಐ ಪ್ರವೀಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      ಹುಳಿಯಾರು ಸೇರಿದಂತೆ ಹೊಯ್ಸಳಕಟ್ಟೆ,ದಸೂಡಿ,ಕೆಂಕೆರೆ,ಹೊಸಳ್ಳಿ,ನಂದಿಹಳ್ಳಿ, ಸೂರಗೊಂಡನಹಳ್ಳಿ. ದೊಡ್ಡಬಿದರೆ,ತಿಮ್ಲಾಪುರ ಸೇರಿದಂತೆ ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದಲ್ಲಿ ಜೂಜಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.         ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡುವುದನ್ನು ನಿಷೇಧಿಸಿದ್ದು ಈ ಸಂಬಂಧ ಯಾವುದೇ ರೀತಿಯ ಜೂಜಾಟ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು/ ಮಧ್ಯವರ್ತಿಗಳ ಮೇಲು ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಅಲ್ಲದೆ ಇದಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.         ಈಗಾಗಲೇ ಮುಂಜಾಗ್ರತೆ ...

ಕುರಿ, ಮೇಕೆಗೂ ಗೋಶಾಲೆಯಲ್ಲಿ ಮೇವು ಒದಗಿಸಲು ಮುಂದಾಗಿ:ಸಾಸಲು ಸತೀಶ್

ಹುಳಿಯಾರು: ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿದ್ದು ೩೦ ಜಿಲ್ಲೆಗಳ ೧೬೦ ತಾಲ್ಲೂಕುಗಳು ಬರಪೀಡೀತ ಪ್ರದೇಶವೆಂದು ಘೋಷಣೆಯಾಗಿದ್ದು ಈ ಹಿನ್ನಲೆಯಲ್ಲಿ ರಾಸುಗಳಿಗೆ ಕೊಟ್ಟಂತೆಯೇ ಕುರಿಮೇಕೆಗಳಿಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಮೇವು ನೀರು ಒದಗಿಸಲು ಅವಕಾಶವಿರುವುದರಿಂದ ಇದರ ಅನುಕೂಲವನ್ನು ಕುರಿಗಾಹಿಗಳಿಗೆ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಒತ್ತಾಯಿಸಿದ್ದಾರೆ.            ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಬಿಸಿಲ ತಾಪದಿಂದ ಜನ ತತ್ತರಿಸುತ್ತಿದ್ದು ತೀವ್ರ ಮಳೆ ಕೊರತೆ ಹಿನ್ನಲೆಯಲ್ಲಿ ದನಕರುಗಳು,ಕುರಿಮೇಕೆಗಳಿಗೆ ಮೇವಿಲ್ಲದಂತಾಗಿದೆ.ಜಿಲ್ಲಾಡಳಿತದವತಿಯಿಂದ ದನಗಳಿಗೆ ಈಗಾಗಲೇ ತಿಂಗಳ ಹಿಂದೆಯೇ ಗೋಶಾಲೆ ತೆರೆದು ಮೇವು ನೀರನ್ನು ಒದಗಿಸುತ್ತಿದೆ.ಅದೇ ಗೋಶಾಲೆಗಳಲ್ಲಿ ಇದೀಗ ಕುರಿ ಮೇಕೆಗಳಿಗೂ ಮೇವು ನೀಡುವ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.           ತಾಲ್ಲೂಕಿನಾದ್ಯಂತ ಮೇವು ಮತ್ತು ನೀರಿನ ಕೊರತೆಯಿಂದ ಕುರಿ ಮೇಕೆಗಳು ಸಾವನ್ನಪ್ಪಿರುವ ನಿದರ್ಶನಗಳಿವೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಮೇವು ,ನೀರು ಮತ್ತು ಪೌಷ್ಟಿಕ ಆಹಾರವಾದ ಹುರುಳಿ,ಹಿಂಡಿ ಇತ್ಯಾದಿಗಳನ್ನು ಪೂರೈಸಲು ದಿನವೊಂದಕ್ಕೆ ಪ್ರತಿ ಕುರಿಮೇಕೆಗೆ ೩೫ ...