ಹುಳಿಯಾರು:ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿದ್ದು ೩೦ ಜಿಲ್ಲೆಗಳ ೧೬೦ ತಾಲ್ಲೂಕುಗಳು ಬರಪೀಡೀತ ಪ್ರದೇಶವೆಂದು ಘೋಷಣೆಯಾಗಿದ್ದು ಈ ಹಿನ್ನಲೆಯಲ್ಲಿ ರಾಸುಗಳಿಗೆ ಕೊಟ್ಟಂತೆಯೇ ಕುರಿಮೇಕೆಗಳಿಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಮೇವು ನೀರು ಒದಗಿಸಲು ಅವಕಾಶವಿರುವುದರಿಂದ ಇದರ ಅನುಕೂಲವನ್ನು ಕುರಿಗಾಹಿಗಳಿಗೆ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಒತ್ತಾಯಿಸಿದ್ದಾರೆ.
ತಾಲ್ಲೂಕಿನಾದ್ಯಂತ ಮೇವು ಮತ್ತು ನೀರಿನ ಕೊರತೆಯಿಂದ ಕುರಿ ಮೇಕೆಗಳು ಸಾವನ್ನಪ್ಪಿರುವ ನಿದರ್ಶನಗಳಿವೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಮೇವು ,ನೀರು ಮತ್ತು ಪೌಷ್ಟಿಕ ಆಹಾರವಾದ ಹುರುಳಿ,ಹಿಂಡಿ ಇತ್ಯಾದಿಗಳನ್ನು ಪೂರೈಸಲು ದಿನವೊಂದಕ್ಕೆ ಪ್ರತಿ ಕುರಿಮೇಕೆಗೆ ೩೫ ರೂ ವೆಚ್ಚ ಭರಿಸಲು ಅವಕಾಶವಿದ್ದು ಈ ಬಗ್ಗೆ ಸರ್ಕಾರ ಜಿಲ್ಲಾಡಳಿತಕ್ಕೆ ಸಿದ್ಧತೆ ಮಾಡಿಕೊಳ್ಳವಂತೆ ಸೂಚನೆ ನೀಡಬೇಕೆಂದರು.
--------------------
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗಕ್ಕೆ ಈಗಾಗಲೇ ಸೂಕ್ತ ಸೂಚನೆ ನೀಡಿದ್ದು ಎನ್ ಡಿ ಆರ್ ಎಫ್ ಯೋಜನೆಯಡಿ ಅಗತ್ಯವಿರುವೆಡೆ ಗೋಶಾಲೆಯಂತೆ ಕುರಿ ಶಾಖೆಗಳನ್ನು ಆರಂಭಿಸಲು ಜಿಲ್ಲಾಡಳಿತ ತತ್ ಕ್ಷಣ ಮುಂದಾಗಬೇಕಿದೆ
----------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ