ಹುಳಿಯಾರು:ಗ್ರಾಮೀಣ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ವಾಸವಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿದ್ದು ಮುಂದಿನ ದಿನಗಳಲ್ಲಿ ಐಟಿಐ ಹಾಗೂ ನರ್ಸಿಂಗ್ ತರಬೇತಿ ಶಾಲೆಯನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ವಾಸವಿ ವಿದ್ಯಾಶಾಲೆಯಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ಸಂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ೪೮ ವರ್ಷಗಳ ಹಿಂದೇ ಜಿಲ್ಲೆಯಲ್ಲಿ ಎರಡನೆಯದಾಗಿ ಚಿಕ್ಕದಾಗಿ ಪ್ರಾರಂಭವಾಗಿದ್ದ ವಾಸವಿ ವಿದ್ಯಾಸಂಸ್ಥೆ ಇಂದು ಬೃಹತ್ತಾಗಿ ಬೆಳೆದಿದ್ದು ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿವಿಧೆಡೆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಶಾಲೆಯ ಕೀರ್ತಿ ಪತಾಕೆ ಹರಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಆರ್.ಎಲ್.ರಮೇಶ್ ಬಾಬು ಮಾತನಾಡಿ ಇಂದು ಪ್ರಪಂಚ ಅಂಗೈಯಷ್ಟು ಕಿರಿದಾಗಿದ್ದು ಎಲ್ಲಡೆ ವಿದ್ಯೆ ಹಾಗೂ ಬುದ್ದಿಗೆ ಮನ್ನಣೆಯಿದೆ.ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಗಮನಹರಿಸಿ ಅವರನ್ನು ಓದು ಸೇರಿದಂತೆ ಕ್ರೀಡೆ,ಕಲೆ,ರಾಜಕೀಯ ಹೀಗೆ ಅನೇಕ ರಂಗಗಳಲ್ಲಿ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹಿಸಿ ಮುಂದೆ ತರುವ ಮೂಲಕ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕೆಂದರು.
ಟಿ.ಆರ್.ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಸ್ವಾಗತಿಸಿ, ಸುಧಾ ನಿರೂಪಿಸಿ,ನಾಗರಾಜು ವಂದಿಸಿದರು.ಪ್ರಕಾಶ್ ಶಾಲಾ ವರದಿ ವಾಚಿಸಿದರು.
ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗಿತು.ಕಳೆದ ಭಾರಿಯ ಎಸೆಸ್ಸಲ್ಸಿಯಲ್ಲಿ ಅಧಿಕ ಅಂಕ ಪಡೆದಿದ್ದ ಮಕ್ಕಳಿಗೆ ಪುರಸ್ಕರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ರಾಮನಾಥ್,ಮುಖ್ಯ ಶಿಕ್ಷಕ ರಮೇಶ್,ಮಹೇಶ್, ನಿರ್ದೇಶಕ ಬಿ.ವಿ.ಶ್ರೀನಿವಾಸ ಮೂರ್ತಿ,ಗುರುಮೂರ್ತಿ,ಪ್ರಭಾವತಮ್ಮ,ಲಕ್ಷ್ಮೀ ರಾಜ್,ವಿಜಯಲಕ್ಷ್ಮೀ,ರೂಪ ಚಂದ್ರಶೇಖರ್,ಶಿಲ್ಪಾ ಬಾಲಾಜಿ,ಚಂದನ ರವೀಂದ್ರ,ಆಶಾ ಬದರೀಶ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ