ಹುಳಿಯಾರು: ಹೋಬಳಿ ಕಾರೇಹಳ್ಳಿಯ ಗೋ ಶಾಲೆಯಲ್ಲಿ ಹಸುವೊಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ಸರ್ಕಾರ ರೈತನಿಗೆ ಪರಿಹಾರ ಕೊಡ ಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಕಾರೇಹಳ್ಳಿಯಲ್ಲಿ ಜರುಗಿದೆ.
ಸಾವನ್ನಪ್ಪಿದ ಹಸು ಹೋಬಳಿಯ ದಬ್ಬಗುಂಟೆ ಗ್ರಾಮದ ನಾಗರಾಜು ಎಂಬುವವರಿಗೆ ಸೇರಿದಾಗಿದ್ದು ಈ ಹಸು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ನರಳುತಿತ್ತು ಎನ್ನಲಾಗಿದೆ.
ಹುಳಿಯಾರು ಪಶು ವೈದ್ಯ ರಂಗನಾಥ್ ಚಿಕಿತ್ಸೆ ನೀಡಿದ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಗೋಶಾಲೆಯಲ್ಲೇ ಹಸು ಕೊನೆ ಉಸಿರೆಳೆದಿದೆ. ಹಸು ಮಾಲೀಕ ನಾಗರಾಜು ಸೇರಿದಂತೆ ಕೆಲವರು ಹಸು ಸಾವನ್ನಪ್ಪಿದ್ದು ಸರ್ಕಾರ ಪರಿಹಾರ ಕೊಡಬೇಕೆಂದು ಪ್ರತಿಭಟನೆ ನಡೆಸಿದರು.
ಗೋ ಶಾಲೆಯಲ್ಲಿನ ಕಳಪೆ ಗುಣಮಟ್ಟದ ಮೇವು ತಿಂದು ಹಸು ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದು ಪರಿಹಾರ ಕೊಡಬೇಕು ಎಂದು ಪಟ್ಟು ಹಿಡಿದರು.
ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ ಮಾತನಾಡಿ ಗೋಶಾಲೆಯಲ್ಲಿ ಗುಣಮಟ್ಟದ ಮೇವು ನೀಡುತ್ತಿದ್ದು ಗೋಶಾಲೆಯ ಮೇವು ತಿಂದ ಯಾವುದೇ ರಾಸುಗಳಿಗೆ ಆರೋಗ್ಯದಲ್ಲಿ ಏರುಪೇರಾಗಿರುವ ನಿದರ್ಶನವಿಲ್ಲ. ಮೊದಲೆ ಅನಾರೋಗ್ಯಕ್ಕೆ ತುತ್ತಾಗಿದ್ದ ಹಸು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಪ್ರಕೃತಿ ವಿಕೋಪದಿಂದ ಹಸು ಮರಣ ಹೂಂದಿದ್ದರೆ ಮಾತ್ರ ಪರಿಹಾರ ನೀಡಬಹುದೆ ವಿನಹ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಿದರು.
ಗೋಶಾಲೆ ರೈತರಾದ ಅಂಬಾರಪುರ ಶ್ರೀರಂಗಪ್ಪ, ಗೋವಿಂದರಾಜ್, ಬಸವರಾಜು, ಕಾರೇಹಳ್ಳಿ ನಾಗೋಜಿರಾವ್, ಸೋಮಜ್ಜನ ಪಾಳ್ಯ ಧರಣೇಶ್, ಯಗಚಿಹಳ್ಳಿ ರಂಗನಾಥ್, ಮಂಜುನಾಥ್, ನರಸಿಂಹಮೂರ್ತಿ, ವಿಶ್ವನಾಥ್, ನಟರಾಜ್, ಶಿವಪ್ರಸನ್ನ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ