ಸೆಕ್ಯೂರಿಟಿ ಗಾರ್ಡ್ ಸಾವಿನ ಹಿನ್ನಲೆ.
ಹುಳಿಯಾರಿನ ವಿದ್ಯಾವಾರಿಧಿ ಶಾಲೆ ಮುಂದೆ ಶವದ ಗಾಡಿಯೊಂದಿಗೆ ಪ್ರತಿಭಟನೆ.
ಹುಳಿಯಾರು: ಪಟ್ಟಣದ ವಿದ್ಯಾವಾರಿಧಿ ಶಾಲೆಯ ದುರ್ಘಟನೆಯಲ್ಲಿ ಐಸಿಯುನಲ್ಲಿದ್ದ ಚಿಕಿತ್ಸೆ ಪಡೆಯುತ್ತಿದ ಶಾಲೆಯ ಕಾವಲುಗಾರ ರಮೇಶ್ ಭಾನುವಾರ ಸಾವನ್ನಪ್ಪಿದ ಹಿನ್ನಲೆಯಲ್ಲಿ ಶಾಲೆಯ ನಿರ್ಲಕ್ಷ್ಯತೆಯಿಂದ ರಮೇಶ್ ಸಾವನ್ನಪ್ಪಿದ್ದು ಶಾಲಾ ಆಡಳಿತ ಮಂಡಳಿ ಪರಿಹಾರವನ್ನು ನೀಡಬೇಕು,ಇಲ್ಲದಿದ್ದಲ್ಲಿ ಹೆಣ ಸಾಗಿಸುವುದಿಲ್ಲವೆಂದು ಪಟ್ಟು ಹಿಡಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.
ಬುಧವಾರ ರಾತ್ರಿ ನಡೆದ ಘಟನೆಯಲ್ಲಿ ಶಾಲೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಹೊಸಳ್ಳಿ ವಾಸಿ ರಮೇಶ್ ಸಹ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥನಾಗಿ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಿಗ್ಗೆ ಹತ್ತು ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾನೆ.ತುಮಕೂರಿಗೆ ತೆರಳಿ ಮೃತದೇಹವನ್ನು ತರುತ್ತಿರುವ ವೇಳೆ ಸುದ್ದಿ ತಿಳಿದ ಗ್ರಾಮಸ್ಥರು ಶಾಲೆಯ ಬಳಿ ನೂರಾರು ಸಂಖ್ಯೆಯಲ್ಲಿ ಸಂಜೆ ಆರು ಗಂಟೆಯಿಂದಲೇ ಜಮಾಯಿಸಿ ಪರಿಹಾರಕ್ಕಾಗಿ ಒತ್ತಾಯಿಸಿದರು.
ಅಲ್ಲದೆ ರಸ್ತೆ ತಡೆ ಕೂಡ ನಡೆಸಲು ಮುಂದಾದಾಗ .ಸ್ಥಳದಲ್ಲಿದ್ದ ಪಿಎಸೈ ಪ್ರವೀಣ್ ಅದನ್ನು ತಡೆದಿದ್ದರಿಂದ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.
ನಂತರ ನೂರಾರು ಸಂಖ್ಯೆಯಲ್ಲಿದ್ದ ಪೋಲಿಸರು ರಸ್ತೆತಡೆಗಾಗಿ ಇಟ್ಟಿದ್ದ ಕಲ್ಲನ್ನು ತೆರವುಗೊಳಿಸಿ ವಾಹನ ಸಂಚರಿಸಲು ಅನುವು ಮಾಡಿಕೊಟ್ಟರು.
ಮೃತದೇಹವನ್ನು ತರುವ ವೇಳೆಯೇ ಪರಿಹಾರ ಧನ ಕೊಡುವ ವಿಚಾರವಾಗಿ ಮಾತುಕತೆ ನಡೆದು ಶಾಲೆಯವರು ಕೊಡುವುದಾಗಿ ತಿಳಿಸಿದ ಹಣ ಏನೇನು ಸಾಲದೆಂದು ಪಟ್ಟುಹಿಡಿದ ಸಂಬಂಧಿಗಳು ಹಾಗೂ ಗ್ರಾಮಸ್ಥರು ನಿಮ್ಮ ದುಡ್ಡೆ ನಮಗೆ ಬೇಡ,ನಮ್ಮ ಹುಡುಗನ ಪ್ರಾಣ ಕಳೆದಿರುವ ಕಿರಣ್ ಕುಮಾರ್ ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದು ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ಮೃತದೇಹವಿದ್ದ ಅಂಬ್ಯುಲೆನ್ಸ್ ಅನ್ನು ತಡೆದು ಶಾಲೆಯ ಮುಂದೆ ನಿಲ್ಲಿಸಿದ್ದಾರೆ.
ಇದೇ ವೇಳೆ ಶಾಲಾ ಆಡಳಿತಮಂಡಲಿ ಪರವಾಗಿ ಕೆಲವರು ಮೃತನ ಸಂಬಂಧಿಗಳೊಂದಿಗೆ ಮಾತುಕಥೆ ನಡೆಸಿ ನಾಲ್ಕ ಲಕ್ಷದವರೆಗೂ ಪರಿಹಾರಹಣ ಕೊಡಿಸುವುದಾಗಿ ತಿಳಿಸಿ ಪ್ರತಿಭಟನೆ ಮಾಡುವುದು ಬೇಡವೆಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕಾಗಮಿಸಿದ ರಾಜ್ಯ ಉಪ್ಪಾರ ಸಂಘದ ಉಪಾಧ್ಯಕ್ಷ ಹಾಗೂ ತಾಲ್ಲೂಕ್ ಉಪ್ಪಾರ ಸಂಘದ ಅಧ್ಯಕ್ಷರಾದ ಜಿಪಂ ಸದಸ್ಯ ಸೋಮನಹಳ್ಳಿ ಕಲ್ಲೇಶ್,ದೇವರು ಬಸವರಾಜು ಹಾಗೂ ಮಾಜಿ ತಾಪಂ ಸದಸ್ಯ ಜಯಣ್ಣ ತಾವೀಗಾಗಲೇ ಶಾಲೆಯವರೊಂದಿಗೆ ಮಾತನಾಡಿದ್ದು ಐದು ಲಕ್ಷ ಪರಿಹಾರವನ್ನು ಮೃತನ ಕುಟುಂಬದವರಿಗೆ ಕೊಡಲು ಒಪ್ಪಿಸಿದ್ದು ಗ್ರಾಮಸ್ಥರು ಪ್ರತಿಭಟನೆ ಬಿಟ್ಟು ಮುಂದಿನ ಕಾರ್ಯನೋಡುವಂತೆ ಮನವೊಲಿಸಲು ಮುಂದಾದರು.ಆದರೂ ಕೂಡ ಇದಕೊಪ್ಪದ ಗ್ರಾಮಸ್ಥರು ಇನ್ನು ಹೆಚ್ಚಿನ ಪರಿಹಾರ ಕೇಳಿದ ಹಿನ್ನಲೆಯಲ್ಲಿ ನಮ್ಮ ಮಾತಿಗೆ ಬೆಲೆ ಇಲ್ಲದ ಮೇಲೆ ನೀವೇನಾದರೂ ಮಾಡಿಕೊಳ್ಳಿ ಎಂದ ಕಲ್ಲೇಶ್ ಅಲ್ಲಿಂದ ವಾಪಸ್ಸಾದರು.
ಮೃತನ ಪತ್ನಿ ಕೆಂಚಮ್ಮ ನಿಗೆ ಕೆಲಸ ಹಾಗೂ ಮಕ್ಕಳಾದ ಅನಿತಾ ಹಾಗೂ ಲಕ್ಕಪ್ಪ ಅವರ ವಿದ್ಯಾಭಾಸದ ಹೊಣೆ ಹೊರಬೇಕೆಂದು ಒತ್ತಾಯಿಸಿರುವ ಪ್ರತಿಭಟನಕಾರರು ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಹೆಣ ಕದಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಸುಮಾರು ಹೊತ್ತು ಮಾತುಕಥೆ ನಡೆದು
ಸದ್ಯ ಶಾಲೆಯ ಪರವಾಗಿ ಕೊಡುವುದಾಗಿ ಹೇಳಿದ ಪರಿಹಾರದ ಮೊತ್ತಕ್ಕೆ ಒಪ್ಪಿದ ಪ್ರತಿಭಟನಕಾರರು ಧರಣಿ ಕೈ ಬಿಟ್ಟು ಶವವನ್ನು ಊರಿಗೆ ಕೊಂಡೊಯ್ದರು.
ಸದ್ಯ ಶಾಲೆಯ ಪರವಾಗಿ ಕೊಡುವುದಾಗಿ ಹೇಳಿದ ಪರಿಹಾರದ ಮೊತ್ತಕ್ಕೆ ಒಪ್ಪಿದ ಪ್ರತಿಭಟನಕಾರರು ಧರಣಿ ಕೈ ಬಿಟ್ಟು ಶವವನ್ನು ಊರಿಗೆ ಕೊಂಡೊಯ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ