ಹುಳಿಯಾರು:ಪಟ್ಟಣದ ಕೋಡಿಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಜಗನ್ಮಾತೆ ಕಂಕಾಳಿ ಹಾಗೂ ಏಳು ಶಕ್ತಿ ಪೀಠಗಳಲ್ಲಿ ಒಂದಾಗಿರುವ ತುಳುಜಾ ಭವಾನಿ ಮಾತೆಯರ ದೇವಸ್ಥಾನ ಮತ್ತು ೬೧ ಅಡಿಎತ್ತರದ ಭಾರತದಲ್ಲಿಯೇ ಪ್ರಥಮವಾದ ಅನಂತಪದ್ಮನಾಭನ ಮೂರ್ತಿಯು ಮುಕ್ತಾಯ ಹಂತದಲ್ಲಿದ್ದು ಇದರ ಲೋಕಾರ್ಪಣೆಗೆ ರಾಷ್ಟ್ರಪತಿಗಳು ಸೇರಿದಂತೆ ಪ್ರತಿಷ್ಟಿತ ಗಣ್ಯರು ಆಗಮಿಸಲಿದ್ದು ಈ ಸ್ಥಳ ಪವಿತ್ರಾ ಯಾತ್ರಾಸ್ಥಳವಾಗಿ ರೂಪುಗೊಳ್ಳಲಿದೆ ಎಂದು ದೇವಾಲಯದ ಪ್ರಧಾನ ಟ್ರಸ್ಟಿ ಗಂಗಾಧರ ಆಶಯ ವ್ಯಕ್ತಪಡಿಸಿದರು.
ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಗಮಿಸಿದ ವಿವಿಧ ದೇವರುಗಳ ಬೃಹತ್ ಶಿಲಾಮೂರ್ತಿಗಳ ಜಲಾಧಿವಾಸದ ನಿಮ್ಮಿತ್ತವಾಗಿ ನಡೆದ ಕಾರ್ಯಕ್ರಮದಲ್ಲ್ಲಿ ಮಾತನಾಡಿದ ಅವರು ಮೇ ೩ರಂದು ಪ್ರತಿಷ್ಟಾಪನಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು ಮನುಕುಲದ ಅಧಿದೇವತೆ ಕಂಕಾಳಿ ಹಾಗು ತುಳುಜಾ ಭವಾನಿ ಮಾತೆಯರನ್ನು ಒಂದೇ ಪೀಠದಲ್ಲಿ ಪ್ರತಿಷ್ಟಾಪಿಸಲಾಗುವುದರ ಜೊತೆಗೆ ಪಿರಮಿಡ್ ಧ್ಯಾನಮಂದಿರ, ಸೇವಾಲಾಲ್ ಸಾಂಸ್ಕೃತಿಕ ಸದನ,ಶ್ರೀ ಮಾತಾ ಯಾತ್ರಿ ನಿವಾಸ,ಬಲಮುರಿ ಗಣಪತಿ ದೇವಸ್ಥಾನ,ಮರಿಯಮ್ಮ ದೇವಿ ದೇವಸ್ಥಾನವನ್ನು ಸಹ ಅಂದು ಲೋಕಾರ್ಪಣೆ ಮಾಡಲಾಗುವುದು ಎಂದರು.
ಮುಂದುವರಿದು ಮಾತನಾಡಿದ ಅವರು ದೇವಾಲಯಗಳ ಶಿಲಾಮೂರ್ತಿಯನ್ನು ಶಿಲ್ಪಕಲಾಕೃತಿಗಳಿಗೆ ಹೆಸರಾದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದ ಶಿಲ್ಪಿಗಳಿಂದಲೇ ಸುಂದರವಾಗಿ ಕೆತ್ತಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಲಾರಿಯಲ್ಲಿ ಅಗಮಿಸಿದ ಶಿಲಾಮೂರ್ತಿಗಳನ್ನು ಕ್ರೇನ್ ಮುಖಾಂತರ ಇಳಿಸಿಕೊಳ್ಳಲಾಯಿತು.ಜಗನ್ಮಾತೆ ಕಂಕಾಳಿ ,ತುಳುಜಾ ಭವಾನಿ,ಬಲಮುರಿ ಗಣಪತಿ,ಮರಿಯಮ್ಮ ದೇವಿ,ದ್ವಾರಪಾಲಕಿಯರು,ಅನಂತಪದ್ಮನಾಭ ದೇವರುಗಳ ಮೂರ್ತಿಯನ್ನು ಭಕ್ತರ ಜಯಘೋಷದೊಂದಿಗೆ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ಕಾರ್ಯಗಳಲ್ಲಿ ಒಂದಾದ ೪೮ ದಿನಗಳ ಜಲಾಧಿವಾಸಕ್ಕಾಗಿ ಈ ಎಲ್ಲಾ ಮೂರ್ತಿಗಳನ್ನು ಇದಕ್ಕೆಂದೆ ನಿರ್ಮಿಸಲಾದ ತೊಟ್ಟಿಯಲ್ಲಿಟ್ಟು ಅರ್ಚಕ ವೆಂಕಟೇಶ್ ಭಾರದ್ವಾಜ್ ಪೂಜೆ ಸಲ್ಲಿಸಿದ ನಂತರ ಜಲದಲ್ಲಿ ಮುಳುಗಿಸಲಾಯಿತು.
ಈ ಸಂದರ್ಭದಲ್ಲಿ ಶಿಲ್ಪಿ ನರೇಂದ್ರ ಶರ್ಮ ವಿಶ್ವಕರ್ಮ,ದೇವಾಲಯದ ಟ್ರಸ್ಟ್ ನ ಉಪಾಧ್ಯಕ್ಷ ಜಯರಾಂ ನಾಯಕ್,ಕಾರ್ಯದರ್ಶಿ ಉಮೇಶ್ ನಾಯಕ್, ಬ್ಯಾಂಕ್ ಮರುಳಪ್ಪ, ಹುಳಿಯಾರು ಗ್ರಾಪಂ ಉಪಾಧ್ಯಕ್ಷ ಗಣೇಶ್,ಆರ್ಯವೈಶ್ಯ ಮಂಡಳಿಯ ನಟರಾಜ್ ಗುಪ್ತಾ,ದುರ್ಗಾಪರಮೇಶ್ವರಿ ದೇವಾಲಯದ ಕನ್ವೀನರ್ ಹು.ಕೃ.ವಿಶ್ವನಾಥ್,ಹುಳಿಯಾರಮ್ಮ ದೇವಾಲಯದ ಕಾರ್ಯದರ್ಶಿ ದುರ್ಗಪ್ಪ,ಆಂಜನೇಯ ಸ್ವಾಮಿ ದೇವಾಲಯದ ಅಧ್ಯಕ್ಷ ಟಿ.ಎಸ್.ರಾಮನಾಥ್,ಕಾರ್ಯದರ್ಶಿ ಧನಂಜಯ ಮೂರ್ತಿ,ಹಿಂದೂಜಾಗರಣ ವೇದಿಕೆಯ ಬಡಗಿರಾಮಣ್ಣ, ರೈತಸಂಘದ ಕೆಂಕೆರೆ ಸತೀಶ್,ಕೆಂಕೆರೆ ಗ್ರಾಮಪಂಚಾಯ್ತಿ ಸದಸ್ಯ ನಾಗಣ್ಣ,ಮೀಸೆ ರಂಗಪ್ಪ,ಕೆಇಬಿ ಉಮೇಶ್ ನಾಯ್ಕ್ ಹಾಗೂ ಮೂರ್ತಿ ಮೊದಲಾದವರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ