ಹುಳಿಯಾರು:ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ಸೋಮಜ್ಜನಪಾಳ್ಯ ಇವರಿಂದ ಹುಳಿಯಾರಿನ ಆಂಬೇಡ್ಕರ್ ಭವನದಲ್ಲಿ ಮಾ.೩ ರಂದು ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸುವ ಸಲುವಾಗಿ ಸಭೆ ಕರೆಯಲಾಗಿದೆ.
ತಾಲ್ಲೂಕಿನಲ್ಲಿ ಸತತ ಬರಗಾಲ ಕಾಡುತ್ತಿರುವುದರಿಂದ ಹಾಗೂ ಸರ್ಕಾರದ ನೋಟು ಬದಲಾವಣೆ ನೀತಿಯಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಾಗಿ ಕಟ್ಟಡ ಕಾರ್ಮಿಕರ ಮೇಲೂ ತನ್ನ ಛಾಯೆಯನ್ನು ಹರಡಿದೆ. ಇದರಿಂದ ಕಾರ್ಮಿಕರ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ತಲುಪಿದ್ದು ಈ ಬಜೆಟ್ ನಲ್ಲಿ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೋರಲು ಎಐಟಿಯುಸಿ ರಾಜ್ಯಪ್ರಧಾನ ಕಾರ್ಯದರ್ಶಿ ಗಿರೀಶ್ ಅಧ್ಯಕ್ಷತೆಯಲ್ಲಿ ಈ ಸಭೆ ಹಮ್ಮಿಕೊಳ್ಳಲಾಗಿದೆ.
ಅಶ್ವಥ್ ನಾರಾಯಣ್,ಶಿವಣ್ಣ,ನಾಗಣ್ಣ,ಸತ್ಯನಾರಾಯಣ್,ನಾಗರಾಜು,ಜಿಪಂ ಸದಸ್ಯ ಸಿದ್ಧರಾಮಯ್ಯ,ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಕಟ್ಟಡ ನಿರ್ಮಾಣದಲ್ಲಿನ ಗಾರೆ ಕೆಲಸದವರು,ಬಾರ್ ಬೆಂಡರ್,ವೆಲ್ಡಿಂಗ್,ಸೆಂಟ್ರಿಂಗ್,ಪ್ಲಂಬರ್ ,ಇಟ್ಟಿಗೆ ತಯಾರಿಕ ಘಟಕದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ