ಹುಳಿಯಾರು ಜನತೆಗೆ ನಿರಾಸೆ ಮೂಡಿಸಿದ ಬಜೆಟ್
49 ತಾಲ್ಲೂಕ್ ಕೇಂದ್ರದ ಪಟ್ಟಿಯಲ್ಲೂ ಹುಳಿಯಾರು ಹೆಸರಿಲ್ಲ
ಕನ್ನಡಪ್ರಭ ವಾರ್ತೆ,ಹುಳಿಯಾರು:ಈ ಬಾರಿಯ ಬಜೆಟ್ ನಲ್ಲಾದರೂ ಹುಳಿಯಾರನ್ನು ತಾಲ್ಲೂಕ್ ಕೇಂದ್ರವನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಬಹುದೆಂದು ನಿರೀಕ್ಷಿಸಿದ್ದ ಹುಳಿಯಾರು ಜನತೆಗೆ ಬಜೆಟ್ ನಿರಾಸೆ ಮೂಡಿಸಿದೆ.
ರಾಜ್ಯದಲ್ಲಿ ಹೊಸದಾಗಿ 49 ತಾಲೂಕು ರಚನೆಗೆ ಸರ್ಕಾರ ಬದ್ಧವಾಗಿದ್ದು, ಹಣಕಾಸು ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 2017-18ನೇ ಸಾಲಿನ ಬಜೆಟ್ ಭಾಷಣದ ವೇಳೆ ಘೋಷಿಸಿದ್ದಾರೆ. 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳು ರಚನೆಯಾಗಲಿದ್ದು, ತುಮಕೂರು ಜಿಲ್ಲೆಯಲ್ಲಿ ತಾಲ್ಲೂಕಾಗಿ ಘೋಷಣೆಯಾಗಬೇಕಿದ್ದ ಹುಳಿಯಾರು ಹಾಗೂ ಹುಲಿಯೂರುದುರ್ಗದ ಬಗ್ಗೆ ಪ್ರಸ್ತಾಪನೆ ಇಲ್ಲದಿರುವುದು ಬಹುಕಾಲದ ಬೇಡಿಕೆಗೆ ಕೊನೆಗೂ ಮಾನ್ಯತೆ ಇಲ್ಲದಂತಾಗಿದೆ.
ತುಮಕೂರು ಜಿಲ್ಲೆಗೆ ಹೈಟೆಕ್ ಆಸ್ಪತ್ರೆ, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ ಹೊರತು ಪಡಿಸಿದರೆ ಮತ್ಯಾವ ಪ್ರಸ್ತಾಪನೆ ಆಗಿಲ್ಲ.ವಿ.ಶ್ರೀನಿವಾಸ್ ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದ ಕಾಲದಲ್ಲಿ ಹೊಸ ತಾಲೂಕು ರಚನೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದು ಆಗಿನ ಪಟ್ಟಿಯಲ್ಲಿ ಹುಳಿಯಾರು ಹಾಗೂ ಹುಲಿಯೂರುದುರ್ಗ ಸೇರ್ಪಡೆಗೊಂಡಿತ್ತು. ಸದನದಲ್ಲೂ ಇದಕ್ಕೆ ಅಂಗೀಕಾರ ಸಿಕ್ಕಿತ್ತು. ಈಗ ಬಜೆಟ್ ನಲ್ಲಿ ಮಾತ್ರ ಘೋಷಣೆಯಾಗದೆ ನಿರಾಸೆಗೆ ಕಾರಣವಾಗಿದೆ.
ಹುಳಿಯಾರು ತಾಲ್ಲೂಕು ಕೇಂದ್ರ ಆಗಬಹುದೆಂದು ಬಹು ನಿರೀಕ್ಷೆಯಲ್ಲಿದ ಜನತೆಗೆ ಈ ಭಾರಿಯ ಬಜೆಟ್ ಬಲು ನಿರಾಸೆಮೂಡಿಸಿದೆ.ಹೋಬಳಿ ಕೇದ್ರವಾಗಿರುವ ಹುಳಿಯಾರು ಸಧ್ಯ ತಾಲ್ಲೂಕು ಕೇಂದ್ರವನ್ನು ಮೀರಿ ಬೆಳೆದಿದ್ದು ಜನಸಂಖ್ಯಾ ಆಧಾರದ ಮೇಲೆ ಎಂದೋ ತಾಲ್ಲೂಕ್ ಆಗಬೇಕಿತ್ತು.ಇದಕ್ಕಾಗಿ ಹೋರಾಟ,ಪ್ರತಿಭಟನೆ ,ಬಂದ್ ಲೆಖ್ಖ ಇಲ್ಲದಷ್ಟು ನಡೆದಿತ್ತು.ದಶಕಗಳ ಕಾಲ ಕಾನೂನು ಸಚಿವ ಜಯಚಂದ್ರ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು ತಾಲ್ಲೂಕ್ ಕೇಂದ್ರ ಮಾಡಲು ಅವರು ಸೇರಿದಂತೆ ಶ್ರಮಿಸಿದವರು ಅದೆಷ್ಟು ಮಂದಿಯೋ. ಯಾರೆಲ್ಲಾ, ಎಷ್ಟೆಲ್ಲಾ ಕಸರತ್ತು ಮಾಡಿದರು ಕೂಡ ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾದ ತಾಲ್ಲೂಕ್ ಕೇದ್ರಗಳ ಪಟ್ಟಿಯಲ್ಲಿ ಹುಳಿಯಾರು ಹೆಸರಿಲ್ಲದಿರುವುದು ಈ ಭಾಗದ ಜನರ ಬೇಸರಕ್ಕೆ ಕಾರಣವಾಗಿದೆ.
------------------------------
ಅರ್ಹತೆ ಆಧಾರದ ಮೇಲೆ ತಾಲ್ಲೂಕ್ ಕೇಂದ್ರವಾಗಬೇಕಿದ್ದ ಹುಳಿಯಾರನ್ನು ಪರಿಗಣಸದಿರುವುದರ ಹಿಂದೆ ಯಾರ ಹಿತಾಸಕ್ತಿ ಅಡಿಗಿದೆಯೋ ಗೊತ್ತಿಲ್ಲ. ಸರ್ಕಾರ ಕೂಡಲೇ ಹುಳಿಯಾರನ್ನು ತಾಲ್ಲೂಕು ಕೇಂದ್ರವಾಗಿ ಪರಿವರ್ತಿಸದಿದ್ದಲ್ಲಿ ಜಿಲ್ಲಾ ರೈತಸಂಘಟನೆಯಿಂದ ಹೋರಾಟ ಮಾಡಿಯೇ ಸಿದ್ಧ:ಹೊಸಹಳ್ಳಿ ಚಂದ್ರಣ್ಣ ,ಜಿಲ್ಲಾಧ್ಯಕ್ಷರು, ಜಿಲ್ಲಾ ರೈತಸಂಘ
--------------
ತಾಲ್ಲೂಕ್ ಕೇಂದ್ರವಾಗದಿರಲು ಕಾರಣವಾದರೂ ಏನು.ಹತ್ತು ಹಲವಾರು ಬಾರಿ ಹುಳಿಯಾರು ತಾಲ್ಲೂಕ್ ಕೇಂದ್ರ ಮಾಡುವ ಕುರಿತು ಸರ್ಕಾರದೊಂದಿಗೆ ಪತ್ರವ್ಯವಹಾರ ನಡೆಸಲಾಗಿತ್ತು. ಈ ಹೋಬಳಿ ಕೇಂದ್ರವು ಈಗಾಗಲೆ ತಾಲ್ಲೂಕು ಮಟ್ಟಕ್ಕಿಂತ ದೊಡ್ಡದಾಗಿ ಬೆಳೆದು ನಿಂತಿದೆ. ಜಿಲ್ಲಾ ಉಸ್ತುವರಿ ಸಚಿವ ಟಿ.ಬಿ.ಜಯಚಂದ್ರರವರು ತಮ್ಮ ರಾಜಕೀಯ ಜೀವನದ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಹುಳಿಯಾರನ್ನು ತಾಲ್ಲೂಕ್ ಕೇಂದ್ರವನ್ನಾಗಿಸಲು ಸಹಕರಿಸಲಿ: ಹೆಚ್.ಎನ್.ಕುಮಾರ್,ತಾಪಂ ಸದಸ್ಯ,ಹುಳಿಯಾರು ಕ್ಷೇತ್ರ
---------------------
ಕೆಲವು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗಾಗಿ ಈ ಹಿಂದೆ ತಾಲ್ಲೂಕು ಕೇಂದ್ರವಾಗಿದ್ದ ಹುಳಿಯಾರನ್ನು ಬದಲಿಸಿ ಚಿಕ್ಕನಾಯಕನಹಳ್ಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾರ್ಪಡಿಸಿದ್ದಾರೆ.ಹುಳಿಯಾರು ಶೈಕ್ಷಣಿಕವಾಗಿ, ಭೌಗೋಳಿಕವಾಗಿ, ತಾಲ್ಲೂಕು ಕೇಂದ್ರವಾಗುವ ಅರ್ಹತೆ ಇದ್ದರೂ ಸಹಾ ಕೆಲವರು ಉದ್ದೇಶಪೂರ್ವಕವಾಗಿಯೇ ಇದನ್ನು ತಪ್ಪಿಸುತ್ತಿದ್ದಾರೆ: ಗೌಡಿ,ಕಿರುತೆರೆ ಕಲಾವಿದ
-----------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ