ಹುಳಿಯಾರು:"ವಿದ್ಯಾರ್ಥಿ ಜೀವನವು ಒಂದು ಸುವರ್ಣ ಕಾಲವಾಗಿದ್ದು ಈ ಸಮಯದಲ್ಲಿ ದಕ್ಕುವ ಎಲ್ಲ ಅನುಭವಗಳು ಜೀವನವನ್ನೇ ಬದಲಾಯಿಸಬಲ್ಲವು. ಈ ನಿಟ್ಟಿನಲ್ಲಿ ಸದೃಢ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ತರ ಪ್ರಭಾವ ಬೀರುತ್ತದೆ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು " ಎಂದು ಹುಳಿಯಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು, ಕವಿ ಶಶಿಭೂಷಣ್ ಅವರು ಹೇಳಿದರು. ಅವರು ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಒಂದು ಹಾಗೂ ಎರಡು ಆಯೋಜಿಸಿದ ರಾಷ್ಟ್ರೀಯ ಎನ್.ಎಸ್.ಎಸ್ ದಿನಾಚರಣೆಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಂದುವರಿದು,ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಭ್ರಾತೃತ್ವ, ಸೌಹಾರ್ದತೆ,ದೇಶ ಭಕ್ತಿ ಅಲ್ಲದೆ ಗ್ರಾಮ ಜೀವನದ ಬಗ್ಗೆ ಕಳಕಳಿ, ಕೃಷಿಯ ಬಗ್ಗೆ ಒಲವು, ಸ್ವತಂತ್ರ ಚಿಂತನೆ ಬೆಳೆಯುತ್ತವೆ. ಅಲ್ಲದೆ ಮುಂದಿನ ಜೀವನಕ್ಕೆ ಅತ್ಯಗತ್ಯವಾದ ಧೈರ್ಯ, ಪ್ರಯತ್ನ ಶೀಲತೆ,ಸಮಸ್ಯೆಗಳನ್ನು ಎದುರಿಸುವ ಮನೋಭಾ...