ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ನೇಹ ಮನೋವಿಕಾಸ ಕೇಂದ್ರ ಹಾಗೂ ಸ್ಪಂದನ ನರ್ಸಿಂಗ್ ಹೋಂ, ತಾಲೂಕು ವೈದ್ಯರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆ.29 ರ ಭಾನುವಾರ ಹುಳಿಯಾರಿನ ಸ್ಪಂದನ ನರ್ಸಿಂಗ್ ಹೋಂ ಆವರಣದಲ್ಲಿ ಉಚಿತ ನರ ಮತ್ತು ಮನೋರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಿದೆ.
ಸ್ನೇಹ ಮನೋವಿಕಾಸ ಕೇಂದ್ರದ ನರ ಮತ್ತು ಮನೋವೈದ್ಯರಾದ ಡಾ.ಲೋಕೇಶ್ ಬಾಬು ಅವರು ಉದ್ಘಾಟಿಸುವ ಈ ಶಿಬಿರದ ಅಧ್ಯಕ್ಷತೆಯನ್ನು ತಾಲೂಕು ವೈದ್ಯರ ಸಂಘದ ಅಧ್ಯಕ್ಷ ವೈ.ಜಿ.ಸಿದ್ಧರಾಮಯ್ಯ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ನಾಗರಾಜು, ಡಾ.ಶ್ರೀನಿವಾಸ್, ಜಿ.ಮಂಜುನಾಥಗುಪ್ತ, ರವೀಶ್ ಅವರು ಭಾಗವಹಿಸುವರು.
ಬಹು ದಿನದ ವಾಸಿಯಾಗದ ತಲೆ, ಬೆನ್ನು, ಎದೆ, ಮೈಕೈ ನೋವು, ನರಸೆಳೆತ, ತಲೆ ತಿರುಗು, ಕೈನಡುಗುವುದು, ಅಂಗೈ ಹೆಚ್ಚಾಗಿ ಬೆವರುವುದು, ಸುಮ್ಮನೆ ಹೆದರಿಕೆ, ಗಾಬರಿಯಾಗುವುದು, ನಿದ್ದೆ ಇಲ್ಲದಿರುವುದು, ಅತಿಯಾದ ಯೋಚನೆ, ಸದಾ ಚಿಂತೆ ಕಾಡುವುದು, ಮೂಛೆ೯ ಬಂದು ಬೀಳುವುದು ಹೀಗೆ ಅನೇಕ ತೊಂದರೆಯಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ