ಒತ್ತಾಯ: ಸಂವಿಧಾನ ರಚಿಸಿದ ರಾಷ್ಟ್ರನಾಯಕನನ್ನು ಶೌಚಾಲಯದಲ್ಲಿ ಇಟ್ಟು ಅಕ್ಷಮ್ಯ ಅಪರಾಧ ಎಸಗಿರುವ ದುರುಳರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಭವನ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ತಕ್ಷಣ ಅಮಾನತುಗೊಳಿಸಿ ತನಿಖೆ ನಡೆಸಬೇಕು. ಭವನವನ್ನು ಮರು ನವೀಕರಿಸಿ ಅಂಬೇಡ್ಕರ್ ಪುತ್ಥಳಿಯನ್ನು ನಿಮಾ೯ಣ ಮಾಡಬೇಕು ಹಾಗೂ ತಾಲೂಕಿನ ಎಲ್ಲಾ ಅಂಬೇಡ್ಕರ್ ಭವನಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಅಂಬೇಡ್ಕರ್ ಭವನದಿಂದ ಹೊರಡುವ ಪ್ರತಿಭಟನಾ ಮೆರವಣಿಗೆಗೆ ಅಂಬೇಡ್ಕರ್ ಅಭಿಮಾನಿಗಳು, ದಲಿತ ಬಂಧುಗಳು, ಪ್ರಗತಿಪರ ಚಿಂತಕರು, ರೈತ ಬಂಧುಗಳು, ಸ್ತ್ರಿಶಕ್ತಿ-ಸ್ವಸಹಾಯ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ತಾಲೂಕಿನ ದಲಿತ ಸಂಘಟನೆಗಳ ಮುಖ್ಯಸ್ಥರು ಕೋರಿದ್ದಾರೆ.
------------------------------------------------
ತಾಲೂಕು ಆಡಳಿತದಿಂದ ಈ ಘಟನೆಗೆ ಸಂಬಂಧಿಸಿದಂತೆ ದಲಿತ ಸಂಘಟನೆಗಳ ಮುಖ್ಯಸ್ಥರು ಹಾಗೂ ಸಿಪಿಐ, ಇಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಈಗಾಗಲೇ ಸಭೆಯನ್ನು ನಡೆಸಿದ್ದು ಅವರ ಬೇಡಿಕೆಗಳಂತೆ ಅಂಬೇಡ್ಕರ್ ಭಾವಚಿತ್ರವನ್ನು ಪುನಃ ಅನಾವರಣ ಮಾಡಲಾಗುವುದು. ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು ಅಂಬೇಡ್ಕರ್ ಭವನ ದುರಸ್ಥಿಗೆ ಸಂಬಂಧ ಪಟ್ಟ ಇಲಾಖೆಗೆ ವಹಿಸಿದ್ದು ಇನ್ನು ಮುಂದೆ ಇದರ ಉಸ್ಥುವಾರಿಯನ್ನು ಗ್ರಾಮ ಪಂಚಾಯ್ತಿ ಪಿಡಿಒ ಅವರು ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.
ದಲಿತ ಸಂಘಟನೆಯ ಕಾರ್ಯಕರ್ತರ ಬೇಡಿಕೆಯಂತೆ ಘಟನೆ ತಿಳಿದ ತತ್ಕ್ಷಣವೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿಗಳನ್ನು ಘಟನೆ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ. ಅಲ್ಲದೆ, ಮರುದಿನ ಸಭೆ ನಡೆಸಿ ಇವರ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಲಾಗಿದೆ. ಹೀಗಿರುವಾಗ ಮತ್ತೆ ಪ್ರತಿಭಟನೆಯ ಹಾದಿ ತುಳಿಯುವುದು ಒಳ್ಳೆಯ ಬೆಳವಣಿಗೆಯಲ್ಲದ ಕಾರಣ ಕೂಡಲೆ ಪ್ರತಿಭಟನೆಯ ಕರೆಯನ್ನು ಹಿಂಪಡಿಯುವಂತೆ ದಲಿತ ಮುಖಂಡರನ್ನು ತಹಸೀಲ್ದಾರ್ ಕೋರಿದ್ದಾರೆ.
ಪ್ರತಿಭಟನೆಗೆ ಬೆಂಬಲ ಇಲ್ಲ:ಮಾದಿಗ ದಂಡೋರ
-------------------------------------------------
ಹುಳಿಯಾರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೊವನ್ನು ಕಿಡಿಗೇಡಿಗಳು ಅಲ್ಲಿನ ಶೌಚಾಲಯದಲ್ಲಿಟ್ಟು ಅಪಮಾನ ಮಾಡಿರುವುದಕ್ಕೆ ಸಂಭಂದಿಸಿದಂತೆ ಕನಾ೯ಟಕ ದಲಿತ ಸಂಘರ್ಷ ಸಮಿತಿ ಆ.26 ರ ಗುರುವಾರದಂದು ಹುಳಿಯಾರಿನಲ್ಲಿ ಕರೆಯಲಾಗಿರುವ ಧರಣಿ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಮಾದಿಗ ದಂಡೋರ ಸಮಿತಿಯ ಬೆಂಬಲ ಇಲ್ಲ ಎಂದು ರಾಜ್ಯ ಮಾದಿಗ ದಂಡೋರ ಸಮಿತಿಯ ಜಂಟಿ ಕಾರ್ಯದಶಿ೯ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 3 ದಶಕಗಳಿಂದ ತಾಲೂಕಿನ ಆಗುಹೋಗುಗಳನ್ನು ಗಮನಿಸುತ್ತಾ ಬಂದಿದ್ದು ತಾಲೂಕಿನ ಜನತೆಗೆ ಅಂಬೇಡ್ಕರ್ ಬಗ್ಗೆ ಗೌರವ ಭಾವನೆಯಿದ್ದು ಶೌಚಾಲಯದಲ್ಲಿ ಪೋಟೊ ಇಡುವಂತಹ ನೀಚತನಕ್ಕೆ ಯಾರೂ ಮುಂದಾಗುವುದಿಲ್ಲ. ಅಲ್ಲದೆ ಹಿಂದೆಂದೂ ಈ ರೀತಿಯ ಕೃತ್ಯ ನಡೆದ ನಿದರ್ಶನವಿಲ್ಲ. ಜನಸಾಮಾನ್ಯರಿಗೂ ದಲಿತ ಸಮುದಾಯದ ಬಗ್ಗೆ ಅಭಿಮಾನವಿದ್ದು ಗೌರವಯುತವಾಗಿ ಕಂಡುಕೊಳ್ಳುತ್ತಿದ್ದಾರೆ.
ಅಲ್ಲಿನ ಘಟನೆಗಳನ್ನು ಅವಲೋಕಿಸಿದಾಗ ಇದು ಜನಸಾಮಾನ್ಯರ ಕೃತ್ಯವಲ್ಲ. ಇದೊಂದು ಕೆಲ ಪ್ರಚಾರ ಪ್ರಿಯರ ಉದ್ದೇಶಪೂರ್ವಕ ಕೃತ್ಯವಾಗಿದ್ದು ಇದರ ಹಿಂದೆ ತಾಲೂಕು ಆಡಳಿತಕ್ಕೆ ಮಸಿ ಬಳಿಯುವ ಹುನ್ನಾರ ಎದ್ದು ಕಾಣುತ್ತದೆ. ಹಾಗಾಗಿ ಇದಕ್ಕೆ ಹೆಚ್ಚು ಒತ್ತು ಕೊಡುವುದು ಬೇಡ ಎಂದರು. ಅಲ್ಲದೆ, ತಾಲೂಕು ಆಡಳಿತ ಈಗಾಗಲೇ ಕ್ರಮ ಕೈಗೊಂಡಿರುವಾಗ ಪ್ರತಿಭಟನೆ ಹಮ್ಮಿಕೊಳ್ಳುವ ಔಚಿತ್ಯ ಏನು ಎಂದು ಪ್ರಶ್ನಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ