ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದಲ್ಲಿ ನೂತನವಾಗಿ ನಿಮಿ೯ಸಿರುವ ಶ್ರೀಕರಿಯಮ್ಮದೇವಿ ಮತ್ತು ಶ್ರೀಆಂಜನೇಯಸ್ವಾಮಿಯವರ ದೇವಾಲಯಗಳ ಪ್ರವೇಶಮಹೋತ್ಸವವು ಭಕ್ತಸ್ತೋಮದೊಂದಿಗೆ ವೈಭವದಿಂದ ನೆರವೇರಿತು.
ಚಿಕ್ಕಬಿದರೆ ಶ್ರೀಕರಿಯಮ್ಮದೇವಿ, ಕಲ್ಲಹಳ್ಳಿ ಶ್ರೀರಾಮದೇವರು, ದೊಡ್ಡಬಿದರೆ ಶ್ರೀ ಪಾತಲಿಂಗೇಶ್ವರ, ಶ್ರೀಲಕ್ಕಮ್ಮ ದೇವರುಗಳ ಆಗಮನದಿಂದ ಆರಂಭವಾದ ಪ್ರವೇಶಮಹೋತ್ಸವದಲ್ಲಿ ಪುಣ್ಯಾಹ, ಪಂಚಗವ್ಯ, ನಾಂದಿ ಮೊದಲ್ಗೊಂಡು ವಾಸ್ತು ಶಾಂತಿ, ನವಗ್ರಹ ಹೋಮ, ರಾಕ್ಷೊಘ್ನ ಹೋಮ, ಗಂಗಾಪ್ರಜೆ, ಗಣಪತಿ ಹೋಮ, ಮಹಾಲಕ್ಷ್ಮಿ ಹೋಮ, ದುಗಾ೯ಹೋಮ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ,ಅನ್ನಸಂತರ್ಪಣೆಯೊಂದಿಗೆ ಕೊನೆಗೊಂಡಿತು.ಸತ್ಯನಾರಾಯಣ್,ಹೆಚ್.ಕೆ.ಗುಂಡಣ್ಣ ಹಾಗೂ ಗಣೇಶ್ ಅವರ ಪೌರೋಹಿತ್ಯ ವಹಿಸಿದ್ದರು.
ದೇವಸ್ಥಾನ ಕಮಿಟಿಯ ಅಧ್ಯಕ್ಷ ಹೊಸಮನೆ ಸಣ್ಣನಿಂಗಯ್ಯ, ಖಜಾಂಜಿ ಸಿದ್ದಜ್ಜರನಿಂಗಜ್ಜ, ಡಿ.ಕೆ.ಮಂಜುನಾಥ್, ಅಯ್ಯಣ್ಣರಬಸವಣ್ಣ, ಮಹಾದೇವಪ್ಪ, ಗ್ರಾ.ಪಂ.ಸದಸ್ಯರುಗಳಾದ ಡಿ.ಜಿ.ಕುಮಾರ್, ಡಿ.ಪಿ.ಅರುಣ್ಕುಮಾರ್, ಭೈರಣ್ಣ, ಲಕ್ಷ್ಮಯ್ಯ ಸೇರಿದಂತೆ ಶ್ರೀ ಪಾತಲಿಂಗೇಶ್ವರ ಸ್ವಾಮಿ ಭಕ್ತಾಧಿಗಳು, ದೊಡ್ಡಬಿದರೆ, ಹಳೇಲಂಬಾಣಿ ತಾಂಡ್ಯ, ಹೊಸಲಂಬಾಣಿ ತಾಂಡ್ಯ, ಕೋಡಿಹಳ್ಳಿ, ದಾಸಣ್ಣನಹಟ್ಟಿ ಮತ್ತು ಆಜುಬಾಜಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ