ಹುಳಿಯಾರು ಸಮೀಪದ ಕೆ.ಸಿ.ಪಾಳ್ಯದಲ್ಲಿ ಭಾರಿ ಮಳೆಗಾಳಿಯಿಂದ ವಿದ್ಯುತ್ ಕಂಬಗಳು ಧರೆಗುರುಳಿದರೆ ಆರೇಳು ಮನೆಗಳ ಹೆಂಚುಗಳು ಹಾರಿಹೋಗಿದ್ದಲ್ಲದೆ ಸುಮಾರು ತೆಂಗಿನ ಮರ ಸೇರಿದಂತೆ ಅನೇಕ ಬಗೆಯ ಮರಗಳು ನೆಲಕ್ಕುರುಳಿದೆ.
ಶನಿವಾರ ಸಂಜೆ ಮಳೆ ಸಹಿತ ಭಾರಿ ಬಿರುಗಾಳಿ ಬೀಸಿದ್ದು ಸೋಮಜ್ಜನ ಪಾಳ್ಯದಿಂದ ಕೆ.ಸಿಪಾಳ್ಯಕ್ಕೆ ವಿದ್ಯುತ್ ಸಂಪರ್ಕ ಒದಗಿಸಿದ್ದ ಐದಾರು ವಿದ್ಯತ್ ಕಂಬಗಳು ಬಿದ್ದು ವೈರ್ ಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ದಿನಗಳಿಂದ ಅಲ್ಲಿನ ನಿವಾಸಿಗಳು ಕತ್ತಲಲ್ಲಿ ಕಾಲಕಳೆಯುವಂತಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ