ಹುಳಿಯಾರು ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆ ಉದ್ಘಾಟನಾ ಸಭೆಯಲ್ಲಿ ತಹಸೀಲ್ದಾರ್ ಟಿ.ಸಿ.ಕಾಂತರಾಜು , ಸೈ.ಮುನೀರ್, ಚನ್ನಬಸವಯ್ಯ,ನಾಗರಾಜು,ನಾಗರತ್ನಮ್ಮ ಭಾಗವಹಿಸಿರುವುದು.
ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಾಲನೆ
-------------------------------------------
ತಾಲೂಕು ಆಡಳಿತ ವತಿಯಿಂದ ಹಂದನಕೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸಂಪೂರ್ಣ ಮಾಹಿತಿ ಪಡೆಯುವ ಮೂಲಕ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆ ಗಣತಿ ಕಾರ್ಯಕ್ಕೆ ತಹಸೀಲ್ದಾರ್ ಟಿ.ಸಿ.ಕಾಂತರಾಜು ಚಾಲನೆ ನೀಡಿದರು.
ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಾಲನೆ
-------------------------------------------
ತಾಲೂಕು ಆಡಳಿತ ವತಿಯಿಂದ ಹಂದನಕೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸಂಪೂರ್ಣ ಮಾಹಿತಿ ಪಡೆಯುವ ಮೂಲಕ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆ ಗಣತಿ ಕಾರ್ಯಕ್ಕೆ ತಹಸೀಲ್ದಾರ್ ಟಿ.ಸಿ.ಕಾಂತರಾಜು ಚಾಲನೆ ನೀಡಿದರು.
ಇದಕ್ಕೂ ಮನ್ನ ಗಣತಿ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭಯಲ್ಲಿ ಅವರು ಗಣತಿ ಕಾರ್ಯದ ಉದ್ದೇಶದ ಬಗ್ಗೆ ಮಾಹಿತಿ ನೀಡಿ ಮಾತನಾಡಿ ರಾಜ್ಯ ಸಕಾ೯ರ ಒದಗಿಸಿರುವ ಮೀಸಲಾತಿ ಸೌಲಭ್ಯವು ಪರಿಶಿಷ್ಠ ಜಾತಿಯ ಎಲ್ಲಾ ಕೋಮು, ಜಾತಿ, ವರ್ಗಗಳಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲದಿದ್ದರೆ ಇದಕ್ಕೆ ಶೈಕ್ಷಣಿಕ, ಆಥಿ೯ಕ, ಸಾಮಾಜಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಇರುವ ಕಾರಣಗಳು ಏನು? ಈ ತಾರತಮ್ಯವನ್ನು ನಿವಾರಿಸಲು ಕೈಗೊಳ್ಳಬೇಕಾದ ಮುಂದಿನ ಕ್ರಮಗಳು ಏನು ಎಂದು ಅರಿಯುವ ಸಲುವಾಗಿ ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಮೀಕ್ಷೆಯಲ್ಲಿ ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ, ಉದ್ಯೋಗ ಹಾಗೂ ಸಾಮಾಜಿಕ ಸ್ಥಿತಿಗತಿ ಇತ್ಯಾದಿಗಳ ವಿವರವನ್ನು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪಡೆಯಲಿದ್ದು ಪರಿಶಿಷ್ಠಜಾತಿ ಬಂಧುಗಳು ಕರಾರುವಾಕ್ಕಾದ, ನಿಖರವಾದ ಹಾಗೂ ಸತ್ಯಾಂಶವುಳ್ಳ ಮಾಹಿತಿಯನ್ನು ನೀಡುವಂತೆ ಹೇಳಿದರಲ್ಲದೆ ಆದಿದ್ರಾವಿಡ ಎಂದಿರುವ ಕಲಂನಲ್ಲಿ ಹೊಲಯ ಎಂದೂ, ಆದಿ ಕನಾ೯ಟಕ ಎಂದಿರುವ ಕಲಂನಲ್ಲಿ ಮಾದಿಗ ಎಂದು ನಮೂದಿಸುವಂತೆ ಸೂಚಿಸಿದರು.
ರಾಜ್ಯಾದ್ಯಂತ ಈ ಸಮೀಕ್ಷೆ ಹಮ್ಮಿಕೊಳ್ಳಲಾಗಿದ್ದು ಪರಿಶಿಷ್ಠಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಸಕಾ೯ರಕ್ಕೆ ವರದಿ ನೀಡುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಪರಿಶಿಷ್ಠ ಜಾತಿಯ ಅಭಿವೃದ್ಧಿಗಾಗಿ ಸಕಾ೯ರ ಯೋಜನೆಯನ್ನು ರೂಪಿಸಲು ಈ ಸಮೀಕ್ಷೆ ಅನುಕೂಲವಾಗಲಿದ್ದು ಪರಿಶಿಷ್ಠಜಾತಿ ಕುಟುಂಬಗಳು ಈ ಸಮೀಕ್ಷೆ ಕಾರ್ಯಕ್ಕೆ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ಸೈ.ಮುನೀರ್, ರಾಜ್ಯ ಮಾದಿಗ ದಂಡೋರದ ಜಂಟಿ ಕಾರ್ಯದಶಿ೯ ಬೇವಿನಹಳ್ಳಿ ಚನ್ನಬಸವಯ್ಯ, ಜಿಲ್ಲಾ ಮಹಿಳಾ ಮಾದಿಗ ದಂಡೋರದ ನಾಗರತ್ನಮ್ಮ, ರತ್ನಮ್ಮ, ನಾಗರಾಜು, ಉಪತಹಸೀಲ್ದಾರ್ ಯದುರಾಜ್, ಕಂದಾಯ ತನಿಖಾಧಿಕಾರಿ ಮಲ್ಲಿಕಾಜು೯ನಯ್ಯ, ಬಸವರಾಜು, ಕೃಷ್ಣಮೂತಿ೯, ಗುರುಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ