ಕಳೆದ 4 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹುಳಿಯಾರಿನ ಸ್ವಾತಂತ್ರ್ಯ ಹೋರಾಟಗಾರ ಟಿ.ಎಲ್.ಬಾಲಸುಂದರರಾಜಶೆಟ್ಟಿ(80) ಅವರು ಶುಕ್ರವಾರ ಮುಂಜಾನೆ ಹುಳಿಯಾರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಕರೆಗೆ ಓಗೊಟ್ಟು ಅನೇಕ ಚಳುವಳಿಯಲ್ಲಿ ಭಾಗವಹಿಸಿ ಕಾರಾಗೃಹ ಸೆರೆವಾಸ ಅನುಭವಿಸಿದ್ದರು. ಅಲ್ಲಿಂದ ಐದಾರು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಇವರು ಕನ್ನಿಕಾಪರಮೇಶ್ವರಿ ಸಹಕಾರ ಸಂಘದಲ್ಲಿ 20 ವರ್ಷಗಳ ಕಾಲ ಕಾರ್ಯದಶಿ೯ಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದಶಿ೯ಯಾಗಿ, ಆರ್ಯವೈಶ್ಯ ಮಂಡಳಿ ನಿದೇ೯ಶಕರಾಗಿ ಹಾಗೂ ಸೇವಾದಳದಲ್ಲಿಯೂ ಸಹ ಸೇವೆ ಸಲ್ಲಿಸಿದ್ದರು.
ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಸಕಾ೯ರದ ಪರವಾಗಿ ಅಂತಿಮ ದರ್ಶನ ಪಡೆದು ಕುಟುಂಬವರ್ಗದವರಿಗೆ ಸಾಂತ್ವಾನ ಹೇಳಿ ಅಂತ್ಯ ಸಂಸ್ಕಾರಕ್ಕೆ 2 ಸಾವಿರ ರು. ನೀಡಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಉಪತಹಸೀಲ್ದಾರ್ ಅಂಜಿನಪ್ಪ, ಕಂದಾಯ ತನಿಖಾಧಿಕಾರಿ ಬಸವರಾಜು, ಎಎಸ್ಐ ಸಿದ್ಧರಾಮಯ್ಯ, ಗ್ರಾಮ ಲೆಕ್ಕಿಗ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಗಂಗಾಧರ್, ಆರ್ಯವೈಶ್ಯ ಮಂಡಳಿ ಅದ್ಯಕ್ಷ ಟಿ.ಆರ್.ರಂಗನಾಥ್, ಕಾರ್ಯದಶಿ೯ ಎಲ್.ಆರ್.ಚಂದ್ರಶೇಖರ್, ಎಂ.ಎಸ್.ನಟರಾಜ್ ಸೇರಿದಂತೆ ಆರ್ಯವೈಶ್ಯ ಬಾಂಧವರು, ಸ್ವಾತಂತ್ರ್ಯ ಹೋರಾಟಗಾರರು ಅಂತಿಮ ದರ್ಶನ ಪಡೆದರು.
ಮೃತರು ಪತ್ನಿ, 3 ಮಂದಿ ಮಕ್ಕಳು ಹಾಗೂ 4 ಮಂದಿ ಮೊಮ್ಮಕ್ಕಳಲ್ಲದೆ ಅಪಾರ ಬಂಧು ವರ್ಗ ಮತ್ತು ಸ್ನೇಹಿತವರ್ಗವನ್ನು ಅಗಲಿದ್ದಾರೆ. ಮೃತರ ಅಚಿತ್ಯ ಸಂಸ್ಕಾರವನ್ನು ಆರ್ಯವೈಶ್ಯ ಮಂಡಳಿಯ ಸಕಲಗೌರವದೊಂದಿಗೆ ಇಲ್ಲಿನ ಮುಕ್ತಿಧಾಮದಲ್ಲಿ ಶುಕ್ರವಾರ ಸಂಜೆ ನೆರವೇರಿಸಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ