ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಟಿ.ಬಿ.ಜಯಚಂದ್ರ ಅವರ 63ನೇ ಹುಟ್ಟು ಹಬ್ಬದ ಅಂಗವಾಗಿ

      ಶಾಸಕ ಟಿ.ಬಿ.ಜಯಚಂದ್ರ ಅವರ 63ನೇ ಹುಟ್ಟು ಹಬ್ಬದ ಅಂಗವಾಗಿ ಹುಳಿಯಾರಿನ ಕಾಂಗ್ರೇಸ್ ಕಾರ್ಯಕರ್ತರು ಎಂಪಿಎಸ್ ಶಾಲಾವರಣಾದಲ್ಲಿ ನಡೆದ ಕ್ರಿಡಾಕೂಟದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಗ್ಲೂಕೋಸ್ ಹಾಗೂ ಹಣ್ಣನ್ನು ವಿತರಿಸಿದರು.    ಹುಳಿಯಾರಿನ ಕಾಂಗ್ರೇಸ್ ಕಾರ್ಯಕರ್ತರು ಶಾಸಕ ಟಿ.ಬಿ.ಜಯಚಂದ್ರ ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು,ಬ್ರೇಡ್ ಹಾಗೂ ಹಣ್ಣು ವಿತರಿಸಿದರು.

ಜೋಡಿ ಲಕ್ಷ್ಮಿ

ಹುಳಿಯಾರಿನಲ್ಲಿ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಅನೇಕ ಮನೆಗಳಲ್ಲಿ ಲಕ್ಷ್ಮಿಯ ವಿಗ್ರಹವನ್ನು ಶೃಂಗರಿಸಿ ಪೂಜೆ ಸಲ್ಲಿಸಿದರು. ಭಕ್ತರೊಬ್ಬರ ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಜೋಡಿ ಲಕ್ಷ್ಮಿಯ ವಿಗ್ರಹ ನೋಡುಗರ ಗಮನ ಸೆಳೆಯಿತು.

ಸರ್ಕಾರದ ಸುವರ್ಣಭೂಮಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ:ತಾ.ಪಂ.ಅಧ್ಯಕ್ಷ ಸೀತಾರಾಂ

 ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆಯ ಸುವರ್ಣಭೂಮಿ ಯೋಜನೆಯಡಿ ಫಲಾನುಭವಿಗಳನ್ನು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ಅವರು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರು.ನೋಡೆಲ್ ಅಧಿಕಾರಿ ಆನಂದ್ ,ಜಿ.ಪಂ.ಸದಸ್ಯರಾದ ಮಂಜುಳಮ್ಮ,ನಿಂಗಮ್ಮ, ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ ಇದ್ದಾರೆ. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯವರು ನಡೆಸಿದ 2012-13 ನೇ ಸಾಲಿನ ಸುವರ್ಣಭೂಮಿ ಯೋಜನೆಯಡಿ ಲಾಟರಿ ಮೂಲಕ ಅರ್ಹಫಲಾನುಭವಿಗಳ ಆಯ್ಕೆಯ ಸಮಾರಂಭವನ್ನು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ಉದ್ಘಾಟಿಸಿದರು.ನೋಡೆಲ್ ಅಧಿಕಾರಿ ಆನಂದ್ ,ಜಿ.ಪಂ.ಸದಸ್ಯರಾದ ಮಂಜುಳಮ್ಮ,ನಿಂಗಮ್ಮ, ತಾ.ಪಂ.ಸದಸ್ಯರಾದ ನವೀನ್,ವಸಂತಯ್ಯ ಇದ್ದಾರೆ. ಸರ್ಕಾರದಿಂದ ರೈತರಿಗಾಗಿ ಅನೇಕ ಯೋಜನೆಗಳಿದ್ದು,ಅಂತಹ ಯೋಜನೆಗಳಲ್ಲಿ ಈ ರ್ಸುವರ್ಣಭೂಮಿ ಯೋಜನೆಯು ಸಹ ಒಂದಾಗಿದೆ ಇದರಿಂದ ಸಿಗುವಂತಹ ಹಣದ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕಿದೆ ಎಂದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಂ ತಿಳಿಸಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯವರು ನಡೆಸಿದ 2012-13 ನೇ ಸಾಲಿನ ಸುವರ್ಣಭೂಮಿ ಯೋಜನೆಯಡಿ ಲಾಟರಿ ಮೂಲಕ ಅರ್ಹಫಲಾನುಭವಿಗಳ ಆಯ್ಕೆಯ ಸಮಾರಂಭದ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು. ರಾಜ್ಯಾದಂತ ತೀವ್ರ ಬರಗಾಲ ತಲೆದೂರಿದ್ದು ರೈತರು ಒಂದು ಹೊತ್ತಿನ ಅನ್ನಕ್ಕೂ ಪರಿತಪಿಸುವಂತಾಗಿದೆ.ಅಲ್ಲದೆ ತಮ್ಮ ಜಾನುವಾರುಗಳಿಗ

ಪೋಟೊ ಕ್ಯಾಪ್ಷನ್

    ಹುಳಿಯಾರು ಹೋಬಳಿ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಸ್ಥಾನದ ಆವರಣದಲ್ಲಿನ ಗೋಶಾಲೆಯ ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಜಾನುವಾರುಗಳಿಗೆ ಮೇವು ನೀಡುವ ಮೂಲಕ ನೆರವೇರಿಸಿದರು.ಜಿ.ಪಂ.ಸದಸ್ಯರಾದ ಮಂಜುಳಾ,ನಿಂಗಮ್ಮರಾಮಯ್ಯ ಸೇರಿದಂತೆ ಇತರರು.    ಹುಳಿಯಾರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ಗಳ ವಿತರಣೆ ಮಾಡಲಾಯಿತು.ಶಾಲಾ ಮುಖ್ಯ ಶಿಕ್ಷಕರು,ಸಹಶಿಕ್ಷಕರು ಹಾಗೂ ಇತರರು ಇದ್ದಾರೆ.

ಗೋಶಾಲೆಯಲ್ಲಿ ರೈತರಿಗಾಗಿ ಕಲ್ಪಿಸಿರುವ ಊಟದ ವ್ಯವಸ್ಥೆಯ ಕೌಂಟರ್

ಹುಳಿಯಾರು ಹೋಬಳಿ ಕಾರೇಹಳ್ಳಿಯಲ್ಲಿ ಪ್ರಾರಂಭಗೊಂಡಿರುವ ಗೋಶಾಲೆಯಲ್ಲಿ ರೈತರಿಗಾಗಿ ಕಲ್ಪಿಸಿರುವ ಊಟದ ವ್ಯವಸ್ಥೆಯ ಕೌಂಟರನ್ನು ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಉದ್ಘಾಟಿಸಿದರು.ಡಿಸಿಸಿ ಬ್ಯಾಂಕ್ ನ ಅಧಿಕಾರಿಗಳಾದ ದಯಾನಂದ್,ಲಕ್ಷ್ಮಯ್ಯ,ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳು ಸೇರಿದಂತೆ ಇತರರು ಹಾಜರಿದ್ದರು.

ಹುಳಿಯಾರು ಹೋಬಳಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ

ಹುಳಿಯಾರು ಹೋಬಳಿ ರೋಟರಿ ಕ್ಲಬ್ ನ ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಈ.ರವೀಶ್ ಮತ್ತು ಏಜೆಂಟ್ ಗಂಗಣ್ಣ ಅವರ ಭಾವ ಚಿತ್ರ. ಹುಳಿಯಾರು: ಹೋಬಳಿ ರೋಟರಿ ಕ್ಲಬ್ ನ 2012-13 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ರೋಟರಿ ಬಾಲಭವನದಲ್ಲಿ ಭಾನುವಾರ ನಡೆಯಿತು.ಅಧ್ಯಕ್ಷರಾಗಿ ಈ.ರವೀಶ್,ಕಾರ್ಯದರ್ಶಿಯಾಗಿ ಏಜೆಂಟ್ ಗಂಗಣ್ಣ,ಖಜಾಂಜಿಯಾಗಿ ಟಿ.ಆರ್,ಲಕ್ಷ್ಮಿಕಾಂತ ಶ್ರೇಷ್ಠಿ,ಸಮುದಾಯ ಹಾಗೂ ಸಂಸ್ಥೆಯ ಸೇವಾ ನಿರ್ದೇಶಕರಾಗಿ ಜಿ.ಟಿ.ಮಂಜುನಾಥ ಗುಪ್ತಾ, ಎಚ್,ಎಸ್,ಶ್ರೀನಿವಾಸ್,ಯುವಜನಸೇವಾದ ನಿರ್ದೇಶಕಾಗಿ ಗಂಗಾಧರ್, ಜೆಂಟಿ ಕಾರ್ಯದರ್ಶಿಗಾಗಿ ತಿಮ್ಮಯ್ಯ,ಪೋಲಿಯೋ ಸೇವಾ ನಿರ್ದೇಶಕರಾಗಿ ಡಾ.ನಾಗರಾಜು,ಅಂತರಾಷ್ಟ್ರಿಯ ಸೇವಾ ನಿರ್ದೇಶಕಾರಾಗಿ ಗೋಪಿನಾಥ್,ಸಂಪಾದಕ ನಿರ್ದೇಶಕರಾಗಿ ಹನುಮಂತಯ್ಯ,ನಿರ್ವಹಣಾ ನಿರ್ದೇಶಕರಾಗಿ ಜಾಫರ್, ಹೆಚ್ಚುವರಿಯಾಗಿ ಆರ್.ಕೆ.ವಸಂತ್, ಎಚ್.ಡಿ. ದುರ್ಗರಾಜು, ಪ್ರಕಾಶ್ ನೇಮಕಗೊಂಡಿದ್ದಾರೆ.

ಇಂದು (ತಾ.21)ಕ್ರಿಕೆಟ್ ಪಂದ್ಯಾವಳಿ

ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಯುವನಿಕ ಕ್ರಿಡಾಂಗಣದಲ್ಲಿ ಶ್ರೀಚನ್ನಬಸವೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಇಂದು(ತಾ.21) ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಟೂರ್ನಿಯಲ್ಲಿ ಪ್ರಥಮ ಬಹುಮಾನ 6001 ರೂ ಮತ್ತು ಪಾರಿತೋಷಕ,2ನೇ ಬಹುವಾನ 3001 ರೂ ಮತ್ತು ಪಾರಿತೋಷಕವಿದ್ದು,ಟೂರ್ನಿಯ ಉದ್ಘಾಟನೆಯನ್ನು ತಾ.ಪಂ.ಸದಸ್ಯ ಕೆಂಕೆರೆ ನವೀನ್ ನೆರವೇರಿಸುವರು. ತಾ.ಪಂ.ಅಧ್ಯಕ್ಷ ಸೀತಾರಾಂ ಅಧ್ಯಕ್ಷತೆವಹಿಸಲಿದ್ದಾರೆ.ಗ್ರಾ.ಪಂ.ಅಧ್ಯಕ್ಷೆ ಚಂದ್ರಮ್ಮ,ಕೋಟ್ರೆಶ್ & ಕೋ ನ ವಿಶ್ವನಾಥ್,ಕೊಬ್ಬರಿ ವರ್ತಕ ದೇವರಾಜು,ಪಿಡಿಓ ಶಿವಕುಮಾರ್ ಹಾಗೂ ಗ್ರಾ.ಪಂ.ಸದಸ್ಯರು ಅತಿಥಿಗಳಾಗಿ ಆಗಮಿಸುವರು.ಟೂರ್ನಿಯ ಪ್ರವೇಶ ಶುಲ್ಕ 351ರೂ ಆಗಿದ್ದು,ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ,ಪ್ರತಿ ಪಂದ್ಯ ಐದು ಓವರ್ ಒಳಗೊಂಡಿದ್ದು,ವ್ಯವಸ್ಥಾಪಕ ಹಾಗೂ ಅಂಪೈರ್ ತೀರ್ಮಾನ ಅಂತಿಮವಾಗಿರುತ್ತದೆ.ಹೆಚ್ಚಿನ ವಿವರಕ್ಕೆ ಚೇತನ್(8971454791), ದಯಾನಂದ್(9743206005), ಸಚಿನ್(9611642521),ವಿನಯ್(8095271937),ಈಶ್ವರಮೂರ್ತಿ(9901397757) ಸಂಪರ್ಕಿಸಲು ಕೋರಲಾಗಿದೆ.

ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಹುಳಿಯಾರು ಹೋಬಳಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಆರ್.ಶ್ರೀನಿವಾಸ್ ಹುಳಿಯಾರು: ಹೋಬಳಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷ,ಉಪಾಧ್ಯಕ್ಷ,ಪದಾಧಿಕಾರಿಗಳು ಆಯ್ಕೆಯಾಗಿದ್ದು,ಅಂತೆ ಗೌರವಾಧ್ಯಕ್ಷರಾಗಿ ರಂಗಸ್ವಾಮಿ(ಕ್ಯಾಸೆಟ್),ದಯಾನಂದ್,ಅಧ್ಯಕ್ಷರಾಗಿ ಎಂ.ಆರ್.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಅಂಜನಮೂರ್ತಿ, ಎಚ್,ಎನ್,ಮಂಜುನಾಥ್,ಕಾರ್ಯದರ್ಶಿಯಾಗಿ ಎಂ.ಸಿದ್ದೇಶ್,ಎಚ್.ಡಿ.ಲಕ್ಷ್ಮಿಕಾಂತ್,ಖಜಾಂಚಿ ಮೆಡಿಕಲ್ ಚನ್ನಬಸವಯ್ಯ,ಪತ್ರಿಕಾ ಕಾರ್ಯದರ್ಶಿ ಎಚ್.ಕೆ.ಹರೀಶ್,ಸಹ ಕಾರ್ಯದರ್ಶಿ ಜಿ.ಮುರುಳಿ,ರಘು,ಸಂಘಟನಾ ಕಾರ್ಯದರ್ಶಿ ಎಚ್.ಸಿ.ನವೀನ್,ದಿವಾಕರ್,ಬಸವರಾಜು ನಾಯ್ಕ,ನಾಗರಾಜು, ಸಂಚಾಲಕರಾಗಿ ಕೆ.ಕುಮಾರ್,ಚನ್ನಕೇಶವ,ಚಿಕ್ಕೀರಪ್ಪ,ಪರಪ್ಪ,ವಿಜಯ್ ಸಿಂಗ್, ಸುದೀರ್ ಸಿಂಗ್,ದುರ್ಗರಾಜು,ಯತೀಶ್ ನೇಮಕವಾಗಿದ್ದಾರೆ.

ಪ್ರತಿಭಾಪುರಸ್ಕಾರ ಸಮಾರಂಭದ ಉದ್ಘಾಟನೆ

ಹುಳಿಯಾರು ಹೋಬಳಿಯ ಎಬಿವಿಪಿ ವತಿಯಿಂದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಸಮಾರಂಭದ ಉದ್ಘಾಟನೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್,ಉಪಪ್ರಾಂಶುಪಾಲರಾದ ಇಂದಿರಾ,ಉಪನ್ಯಾಸಕ ಶಿವರುದ್ರಯ್ಯ,ತಾಲ್ಲೂಕು ಕ.ಸಾ.ಪ.ದ ಅಧ್ಯಕ್ಷ ತ.ಶಿ.ಬಸವಮೂರ್ತಿ, ವಿದ್ಯಾವಾರಿಧಿಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್.ಎಬಿವಿಪಿ ಹೋಬಳಿ ಘಟಕದ ಅಧ್ಯಕ್ಷ ನರೇಂದ್ರಬಾಬು ಇದ್ದಾರೆ.

ಪೋಟೊ ಕ್ಯಾಪ್ಷನ್

   ಹುಳಿಯಾರಿನ ವಸಂತನಗರ ಬಡಾವಣೆಯಲ್ಲಿರುವ ಶಿಕ್ಷಕ ಬಿ.ಎಸ್.ಕರಿಯಪ್ಪ ಅವರ ನಿವಾಸದ ಕೈದೋಟದಲ್ಲಿ ಬೆಳೆಸಿದ್ದ ಬ್ರಹ್ಮಕಮಲ ಗಿಡದಲ್ಲಿ ಸುಮಾರು ನಾಲ್ಕೈದಕ್ಕೂ ಹೆಚ್ಚು ಬ್ರಹ್ಮಕಮಲಹೂ ಬಿಟ್ಟಿದ್ದು ನೋಡುಗರ ಗಮನ ಸೆಳೆದಿದೆ.   ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸುವರ್ಣ ಮಹೋತ್ಸವ ಕಾಮಗಾರಿಗಳ ಶಿಲಾನ್ಯಾಸ ಹಾಗೂ 2012-13 ನೇ ಸಾಲಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆ,ಪ್ರತಿಭಾ ಪುರಸ್ಕಾರ,ವೃತ್ತಿ ಮಾರ್ಗದರ್ಶಿ ಘಟಕ, ಇಕೋಕ್ಲಬ್ , ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನೆಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ತಾ.ಪಂ.ಅಧ್ಯಕ್ಷ ಸೀತಾರಾಂ,ಜಿ.ಪಂ.ಸದಸ್ಯೆ ನಿಂಗಮ್ಮ,ಪ್ರಾಚಾರ್ಯ ಕೆ.ರಂಗನಾಥ್ ಇತರರಿದ್ದಾರೆ.

ನಾಳೆ(ತಾ.11) ಎಬಿವಿಪಿಯಿಂದ ಪ್ರತಿಭಾಪುರಸ್ಕಾರ

ಹುಳಿಯಾರು: ಹೋಬಳಿ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದವರು 2011-12ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದವರಿಗೆ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾ.11ರ ಬುಧವಾರದಂದು ನಡೆಯುವ ರಾಷ್ಟ್ರೀಯ ವಿದ್ಯಾರ್ಥಿ ದಿನೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ ವಿತರಣಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಹೋಬಳಿಯ ಪ್ರತಿಯೊಂದು ಪ್ರೌಢಶಾಲೆ ಹಾಗೂ ಪಿಯು ಕಾಲೇಜಿಗೆ ಭೇಟಿ ನೀಡಿ, ಪ್ರತಿಯೊಂದು ಶಾಲೆಯಿಂದ ಹೆಚ್ಚು ಅಂಕ ಪಡೆದ ಒಬ್ಬಬ್ಬರನ್ನು ಆರಿಸಿದ್ದು,ಒಂದು ಶಾಲೆಯಲ್ಲಿ ಒಂದೇ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿದ್ದರೆ ಇಬ್ಬರಿಗೂ ಪ್ರತಿಭಾಪುರಸ್ಕಾರವನ್ನು ನೀಡಲಾಗುತ್ತಿದ್ದು ಮಕ್ಕಳು ಹಾಗೂ ಅವರ ಪೋಷಕರು ಕಾರ್ಯಕ್ರಮಕ್ಕೆ ಆಗಮಿಸಿಬೇಕೆಂದು ಪುರಸ್ಕಾರ ಸ್ವಿಕರಿಸಬೇಕೆಂದು ಎಬಿವಿಪಿಯ ಹೋಬಳಿ ಘಟಕದ ಅಧ್ಯಕ್ಷ ನರೇಂದ್ರಬಾಬು(9141942686.9964666372) ಪ್ರಕಟಣೆಯಲ್ಲಿ ಕೋರಿದ್ದಾರೆ.

ಜನತೆ ಹಾಗೂ ಅಧಿಕಾರಿಗಳ ನಡುವೆ ಸ್ಪಂದನಾ ಮನೋಭಾವ ಬೆಳೆಯಬೇಕು: ಶಾಸಕ ಸಿ.ಬಿ.ಎಸ್

ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಡಿದರು. ಪ್ರಸ್ತುತ ಸಮಾದಲ್ಲಿನ ಆಡಳಿತಯಂತ್ರ ಸುಗಮವಾಗಿ ಸಾಗಬೇಕಾದರೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಾಗ ಮಾತ್ರ ಸಾಧ್ಯ,ಜನತೆ ತಮ್ಮ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದು ಅವುಗಳ ಪರಿಹಾರಕ್ಕೆ ಆಗ್ರಹಿಸುವುದು ಸಹಜ ಆದರೆ ಸಮಸ್ಯೆಳಿಗೆ ಪರಿಹಾರ ಕಂಡುಕೊಳ್ಳಲು ಕೆಲಸಮಯ ತೆಗೆದು ಕೊಳ್ಳುತ್ತದೆ ಇದನ್ನು ತಿಳಿದ ಜನರು ಅಧಿಕಾರಿಗಳ ನಡುವೆ ಸ್ಪಂದನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿದರು. ಇಂದು ನಾವೆಲ್ಲಾ ಗಮನಿಸಿದಂತೆ ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸುವ ಬದಲು ತಮ್ಮತಮ್ಮಲ್ಲೇ ಕಿತ್ತಾಟವನ್ನು ಮಾಡುತ್ತಾ ಕುರ್ಚಿಯ ವ್ಯಾಮೋಹದಲ್ಲಿ ಸಿಲುಕಿದ್ದು,ರಾಜ್ಯ್ದ ಅಭಿವೃದ್ದಿಯನ್ನೇ ಮರೆತು ಕುಳಿತಿದೆ.ಈರೀತಿಯ ಬೆಳವಣಿಗೆ ಮುಂದುವರೆದರೆ ರಾಜ್ಯದ ಅಭಿವೃದ್ದಿಗೆ ತೊಡಕಾಗಿ ಪರಿಣಮಿಸುತ್ತದೆ ಎಂದರು. ತಾಲ್ಲೂಕಿನಾದ್ಯಂತ ಬರಗಾಲ ಅವರಿಸಿದ್ದು ಕುಡಿಯುವ ನೀರಿಗಾಗಿ ಬೋರ್ ವೆಲ್ ಗಳನ್ನು,ಜಾನುವಾರುಗಳಿಗೆ ಮೇವು,ನೀರಿನ ವ್ಯವಸ್ಥೆಗಾಗಿ ಗೋಶಾಲೆಗಳನ್ನು ತೆರೆಯುವ ಕಾರ್ಯಗಳು ನಡೆಯುತ್ತಿದ್ದು,ಜನರು ಸಹ ತಮ್ಮ ಪ್ರದೇಶಗಳ

ಅರಣ್ಯಗಳನ್ನು ಸುಸ್ಥಿರವಾಗಿ ಬೆಳೆಸುವ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ: ರಾಮಕೃಷ್ಣಪ್ಪ

  ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು. ನಮ್ಮ ಭಾರತ ನೈಸರ್ಗಿಕವಾಗಿ ಸಮೃದ್ದಿಯಿಂದ ಕೂಡಿದ ದೇಶ,ಹೇರಳವಾದ ಆರಣ್ಯ ಸಂಪತ್ತನ್ನು ಹೊಂದಿದಂತಹ ನಮ್ಮ ನಾಡಿನಲ್ಲಿ ಮೊದಲು ಶೇಕಡ ೩೦ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಅರಣ್ಯ ಇಂದು ಶೇ.೧೫ರಷ್ಟಾಗಿರುವುದರಿಂದ ಇಂದು ಮನುಷ್ಯನ ಬದುಕು ಅಪಾಯಕ್ಕಿಡಾಗಿದೆ. ಈ ತೊಂದರೆಯಿಂದ ಪಾರಾಗಬೇಕಾದರೆ ನಾವೆಲ್ಲರೂ ಆರಣ್ಯವನ್ನು ಸುಸ್ಥಿರವಾಗಿ ಬೆಳೆಸುವ ಕಲ್ಪನೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು. ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್,ಜಿಲ್ಲಾ ಹಾಗೂ ತಾಲ್ಲೂಕು ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ "ಸುಸ್ಥಿರ ಜೀವನೋಪಾಯಕ್ಕೆ ಆರಣ್ಯ' ಎಂಬ ವಿಷಯದ ವಿಷೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರ ನಾಶದಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತಿರುವುದಕ್ಕೆ ಹಲವಾರು ನಿದರ್ಶನಗಳಿದ್ದು.ಇದೇ ರೀತಿ ಪರಿಸರ ನಾಶವಾದರೆ ಮನುಕುಲವೇ ನಶಿಸಿ ಹೋಗುವ ಕಾಲ ಬರುವ ಸಾಧ್ಯತೆಗಳಿವೆ ಎ

ಇಂದು (ತಾ.9) ಸುವರ್ಣ ಮಹೋತ್ಸವ ಕಾಮಗಾರಿಗಳ ಶಿಲಾನ್ಯಾಸ

ಹುಳಿಯಾರು: ಹೋಬಳಿ ಬೋರನಕಣಿವೆ ಗ್ರಾಮದಲ್ಲಿ ಸುವರ್ಣ ಮಹೋತ್ಸವ ಕಾಮಗಾರಿಗಳ ಶಿಲಾನ್ಯಾಸ ಹಾಗೂ 2012-13 ನೇ ಸಾಲಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆ,ಪ್ರತಿಭಾ ಪುರಸ್ಕಾರ,ವೃತ್ತಿ ಮಾರ್ಗದರ್ಶಿ ಘಟಕ, ಇಕೋಕ್ಲಬ್ , ಸುವರ್ಣ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನೆಯು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಇಂದು (ತಾ.9) ಸೋಮವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಸಂಸತ್ ಸದಸ್ಯರಾದ ಜಿ.ಎಸ್.ಬಸವರಾಜು ಸಮಾರಂಭದ ಉದ್ಘಾಟನೆಯನ್ನು,ಶಾಸಕ ಸಿ.ಬಿ.ಸುರೇಶ್ ಬಾಬು ಸುವರ್ಣ ಮಹೋತ್ಸವ ಪ್ರವೇಶ ದ್ವಾರದ ಶಿಲಾನ್ಯಾಸವನ್ನು ಹಾಗೂ ಅಧ್ಯಕ್ಷತೆ ವಹಿಸಲಿದ್ದಾರೆ.ಸಭಾಂಗಣದ ಶಿಲಾನ್ಯಾಸವನ್ನು ಶಾಸಕ ಟಿ.ಬಿ.ಜಯಚಂದ್ರ ನೆರವೇರಿಸಲಿದ್ದು,ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯನ್ನು,ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ ಕುಮಾರ್ ಸುವರ್ಣ ಹಳೆಯ ವಿದ್ಯಾರ್ಥಿಗಳ ಒಕ್ಕೂಟ,ವೃತ್ತಿ ಮಾರ್ಗದರ್ಶಿ ಘಟಕದ ಉದ್ಘಾಟನೆನ್ನು,ಮಾಡುವರು.ತಾ.ಪಂ.ಅಧ್ಯಕ್ಷ ಸೀತಾರಾಂ ಇಕೋಕ್ಲಬ್ ನ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಪಂಚಾಯ್ತಿಯ ಆನಂದರವಿ, ಜಿಲ್ಲಾ ಪ.ಪೂ.ಶಿ.ಇ. ಉಪನಿರ್ದೇಶಕ ಕೆ.ಎಸ್.ರಂಗನಾಥ್,ಜಿಲ್ಲಾ ಸಾ.ಶಿ.ಇ. ಉಪನಿರ್ದೇಶಕ ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್,ಜಿ.ಪಂ.ಸದಸ್ಯೆ ನಿಂಗಮ್ಮ,ತಾ.ಪಂ.ಸದಸ್ಯರಾದ ವಸಂತಯ್ಯ,ಕವಿತಾ,ಹೊಯ್ಸಳಕಟ್ಟೆ ಗ್ರಾ.ಪ

ಹಿಂದೂ ಸಂಸ್ಕೃತಿ ಹಾಗೂ ಸಂಘಟನೆಗಳ ಮೇಲೆ ಪ್ರಹಾರ ನಡೆಯುತ್ತಿದೆ : ಪ್ರಮೋದ್ ಮುತಾಲಿಕ್

  ದಾವಣಗೆರೆಗೆ ತೆರಳುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮಾರ್ಗ ಮಧ್ಯೆ ಹುಳಿಯಾರಿನ ಹಿಂದೂಪರ ಸಂಘಟಕರೊಂದಿಗೆ ಮಾತನಡಿದು.ಜೊತೆಗೆ ಸಂಘಟಕರು ಅಭಿನಂದನೆ ಸಲ್ಲಿಸಿದರು. ಪಸ್ತುತದಲ್ಲಿ ನಾವು ಗಮನಿಸಿದಂತೆ ನಮ್ಮ ಅನೇಕ ಟಿ.ವಿ ಚಾನಲ್ ಗಳು ಹಾಗೂ ಚಲನಚಿತ್ರಗಳಲ್ಲಿ ನಮ್ಮ ಹಿಂದೂ ದೇವರುಗಳ ಪಾತ್ರಗಳನ್ನು ನಟಿಸುತ್ತಾ ಹಿಂದೂ ದೇವತೆಗಳ, ಸಂಸ್ಕೃತಿ ಹಾಗೂ ಸ್ವಾಮೀಜಿಗಳ ,ಸಂಘಟನೆಗಳ ಮೇಲೆ ದೃಶ್ಯ ಮಾಧ್ಯಮಗಳು ವ್ಯವಸ್ಥಿತ ಪ್ರಹಾರ ನಡೆಸುತ್ತಿದ್ದಾರೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು. ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಭೆಗೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಹುಳಿಯಾರಿನ ಹಿಂದೂ ಜಾಗರಣ ವೇದಿಕಕೆಯ ಹಾಗೂ ಶ್ರೀ ರಾಮ ಸೇನೆಯ ಸಂಘಟಕರೊಂದಿಗೆ ಕೆಲ ಕಾಲ ಮಾತನಾಡಿದರು. ಸಿನಿಮಾ ಮಾಧ್ಯಮಗಳಲ್ಲಿ,ಧಾರವಾಹಿಗಳಲ್ಲಿ,ನಾಟಕಗಳಲ್ಲಿ,ಅಸಭ್ಯ,ಆಶ್ಲೀಲ ಪಾತ್ರಗಳನ್ನು ಅಭಿನಯಿಸುತ್ತಿದ್ದಾರೆ ಹಾಗೂ ಸಂಭಾಷಣೆಯನ್ನು ಬಳಸುತ್ತಿದ್ದು ಸಮಾಜದ ಮೇಲೆ ದುಷ್ಪರಿಣಾಮ ಬೀರುತಿವೆ,ಇದು ಉತ್ತಮ ಬೆಳವಣಿಗೆಯಲ್ಲ ಎಂದರು.ದೃಶ್ಯ ಮಾಧ್ಯಮಗಳಲ್ಲಿ ಅಸಭ್ಯ,ಆಶ್ಲೀಲತೆಯನ್ನು ತೋರಿಸಿದರೆ ಅದು ಕಾನೂನು ಬಾಹಿರವಾಗುತ್ತದೆ.ಅದರೂ ಕೆಲ ಚಾಲನ್ ಗಳಲ್ಲಿ ಇಂತಹ ದೃಶ್ಯಗಳು ಹೆಗ್ಗಿಲ್ಲದೆ ಬಿತ್ತರವಾಗುತ್ತಿವೆ.ತಿರುಪತಿ ತಿರುಮಲ ಎಂಬ ಹಿಂದೂ ದೇವರ ಹೆಸರನ್ನು ಅಪಹಾಸ್ಯವನ್ನಾಗಿ ಮಾಡಿ ಕಾರ್ಯಕ್ರಮವನ್ನು ಪ್ರಸಾರ ಮ

ಜಾಥಾ

  ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದ ಸೈಕಲ್ ಜಾಥಾಕ್ಕೆ ಉಪಪ್ರಾಂಶುಪಾಲರಾದ ಡಿ.ಇಂದಿರಾ ಹಸಿರು ನೀಶಾನೆ ತೋರಿದರು.ಶಾಲಾ ಶಿಕ್ಷಕರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಯವರು ಹಾಜರಿದ್ದರು. ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ವ್ಯಾಪ್ತಿಯ ಜಿ.ಗೊಲ್ಲರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದ ಅಂಗವಾಗಿ ಊರಿನ ಬೀದಿಗಳಲ್ಲಿ ಜಾಥಾವನ್ನು ನಡೆಸಲಾಯಿತು.

ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಹೆಚ್ಚು : ಡಾ||ಸಿದ್ದರಾಮಯ್ಯ

ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ರಾಜಯೋಗ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದ ಉದ್ಘಾಟನೆಯನ್ನು ಹೋಬಳೀಯ ವೈದ್ಯರು ಹಾಗೂ ಪತ್ರಕರ್ತರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ವಿದ್ಯಾಲಯದ ರಾಜಯೋಗ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದಲ್ಲಿ ವಿದ್ಯಾಲಯದ ಗೀತಕ್ಕ ಪ್ರಾಸ್ತಾವಿಕ ನುಡಿನುಡಿದರು. ಇಂದು ನಮ್ಮ ದೇಶದಲ್ಲಿ ಸಾಕಷ್ಟು ವೈದ್ಯಕೀಯ ವಿದ್ಯಾಲಯಗಳಿದ್ದು,ಪ್ರತಿ ವರ್ಷ ಸಾವಿರಾರು ಮಂದಿ ವೈದ್ಯಕೀಯ ವಿಷಯದಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯ ವೃತ್ತಿಯನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಇಂದಿನ ಅನೇಕ ವೈದ್ಯರು ತಮ್ಮ ವೃತ್ತಿಯನ್ನು ನಗರ ಪ್ರದೇಶ ಹಾಗೂ ವಿದೇಶಗಳಲ್ಲಿ ಮಾಡಲು ಮುಂದಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ವೈದ್ಯ ವೃತ್ತಿ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ವೈದ್ಯರ ಕೊರತೆಯಿದೆ ಎಂದು ಸಿದ್ದಶ್ರೀ ಕ್ಲಿನಿಕ್ ನ ಡಾ|| ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ರಾಜಯೋಗ ಭವನದಲ್ಲಿ ಜುಲೈ ಒಂದರ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಪ್ರತಿಯೊಬ್ಬ ಮಾನವನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ,ಮೊದಲು ಆತನ ಆರೋಗ್ಯ ಉತ