ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಧ್ಯಕ್ಷರ ಗದ್ದುಗೆಗೆ ಕಸರತ್ತು:ಗ್ರಾಪಂ ಸದಸ್ಯರಿಗೆ ಪ್ರವಾಸ ಭಾಗ್ಯ

                      ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷಗಳ ಹುದ್ದೆಗೆ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದೆ ತಡ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಬೆಂಬಲ ನೀಡಲಿರುವ ಚುನಾಯಿತ ಸದಸ್ಯರುಗಳನ್ನು ಒಗ್ಗೂಡಿಸಿಕೊಂಡು ಪ್ರವಾಸದ ನೆಪದಲ್ಲಿ ಅಜ್ಞಾತ ಸ್ಥಳದ ಹಾದಿ ಹಿಡಿದಿದ್ದಾರೆ.                            ಹುಳಿಯಾರು ಗ್ರಾ.ಪಂ. ಬರೋಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿದೆ. ಪಂಚಾಯ್ತಿಯ ಒಟ್ಟು ೩೯ ಸದಸ್ಯರ ಪೈಕಿ ಪುರುಷ ಸದಸ್ಯರು ೧೯ ಮಂದಿಯಿದ್ದರೆ, ಮಹಿಳಾ ಸದಸ್ಯರು ೨೦ ಮಂದಿಯಿದ್ದಾರೆ. ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೊಲಿದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ದಕ್ಕಿದೆ.                         ಅಧ್ಯಕ್ಷ ಸ್ಥಾನ ಈ ಬಾರಿ ಸಾಮನ್ಯಕ್ಕೆ ಬರಬಹುದೆಂಬ ನಿರೀಕ್ಷೆಯಲ್ಲಿ ಸಾಕಷ್ಟು ಪುರುಷ ಸದಸ್ಯರುಗಳು ತೆರೆಮರೆಯ ಕಸರತ್ತು ನಡೆಸಿದ್ದರು.ಪಕ್ಷದ ಚಿಹ್ನೆ ಮೂಲಕ ಗೆಲ್ಲದಿದ್ದರೂ ಪಕ್ಷದ ಬೆಂಬಲದಿಂದ ಗೆದಿದ್ದ ಅಭ್ಯರ್ಥಿಗಳು ತಮ್ಮದೆ ಆದ ಲೆಕ್ಕಾಚಾರದಲ್ಲಿ ತೊಡಗಿಕೊಂಡು ಬಹುಮತ ಸಾಬ...

ಯಾವುದೇ ಒತ್ತಡಗಳಿಗೂ ಮಣಿದಿಲ್ಲ- ಜಿಲ್ಲಾಧಿಕಾರಿ

ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ನಡೆದ ಗ್ರಾಮಪಂಚಾಯಿತಿ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲು ನಿಗದಿ ಪ್ರಕ್ರಿಯೆ ಯಾವುದೇ ಒತ್ತಡಗಳಿಗೂ ಮಣಿದಿಲ್ಲ- ಜಿಲ್ಲಾಧಿಕಾರಿ ----------------------------------               ತಾಲೂಕಿನ ೨೮ ಗ್ರಾಮಪಂಚಾಯತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಚಿಕ್ಕನಾಯಕನಹಳ್ಳಿಯ ಎಸ್‌ಎಲ್‌ಎನ್ ಚಿತ್ರಮಂದಿರದಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ನಡೆಯಿತು.                                 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮಾತನಾಡಿದ ಇಂದಿನ ಆಯ್ಕೆ ಪ್ರಕ್ರಿಯೆಯು ಯಾವುದೇ ಒತ್ತಡ ಮತ್ತು ಶಿಫಾರಸುಗಳಿಗೆ ಒಳಗಾಗಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಅನ್ಯಾಯವಾಗಬಹುದೆಂಬ ಆತಂಕ ಯಾರಿಗೂ ಬೇಡ. ಎಲ್ಲರಿಗೂ ಅಧಿಕಾರದ ಆಸೆ ಇರುತ್ತದಾದರೂ ದೊರಕುವುದಿಲ್ಲ. ಕೆಲವರಿಗೆ ಅದೃಷ್ಟ ಹಾಗೂ ಸಂವಿಧಾನದ ಕಾನೂನು ಮೂಲಕ ಅವಕಾಶಗಳು ಸಿಗುತ್ತವೆ. ತಾಲೂಕಿನ ಗ್ರಾಮಪಂಚಾಯತಿಗಳ ಅಧ್ಯಕ್ಷರು -ಉಪಾಧ್ಯಕ್ಷರ ಮೀಸಲು ನಿಗದಿ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ, ತಹಸೀಲ್ದಾರ್ ಕಾಮಾಕ್ಷಮ್ಮ ಮುಂತಾದವರಿದ್ದರು.       ...

ಚಿ.ನಾ.ಹಳ್ಳಿ ತಾಲ್ಲೂಕಿನ ಎಲ್ಲಾ ಗ್ರಾಪಂ ಅಧ್ಯಕ್ಷ -ಉಪಾಧ್ಯಕ್ಷರುಗಳ ಆಯ್ಕೆ

ಚಿಕ್ಕನಾಯಕನಹಳ್ಳಿ: ತಾಲೂಕಿನ ೨೮ ಗ್ರಾಮಪಂಚಾಯಿತಿಗಳ ಅಧ್ಯಕ್ಷ , ಉಪಾಧ್ಯಕ್ಷರ ಮೀಸಲು ನಿಗದಿ ಆಯ್ಕೆ ಪ್ರಕ್ರಿಯೆ ನಡೆದು, ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ. ೧.ದಸೂಡಿ- ಅಧ್ಯಕ್ಷರು ಪರಿಶಿಷ್ಟ ಜಾತಿ (ಮ),ಉಪಾಧ್ಯಕ್ಷ ಸಾಮಾನ್ಯ, ೨.ಹೊಯ್ಸಲಕಟ್ಟೆ- ಅಧ್ಯಕ್ಷ ಸಾಮಾನ್ಯ (ಮ),ಉಪಾಧ್ಯಕ್ಷ ಪರಿಶಿಷ್ಟ ಜಾತಿ(ಮ) ೩.ಗಾಣದಾಳು -ಅಧ್ಯಕ್ಷರು ಪ.ಜಾ.(ಮ), ಉಪಾಧ್ಯಕ್ಷರು ಸಾಮಾನ್ಯ . ೪.ಕೆಂಕೆರೆ- ಅಧ್ಯಕ್ಷರು ಬಿಸಿಎಂ ,(ಬಿ) (ಮ),ಉಪಾಧ್ಯಕ್ಷರು ಸಾಮಾನ್ಯ ೫. ಹುಳಿಯಾರು-ಅಧ್ಯಕ್ಷರು ಸಾಮಾನ್ಯ(ಮ) ,ಉಪಾಧ್ಯಕ್ಷರು ಪ.ಜಾ. ೬.ಯಳನಡು-ಅಧ್ಯಕ್ಷರು ಸಾಮಾನ್ಯ, ಉಪಾಧ್ಯಕ್ಷರು ಸಾಮಾನ್ಯ (ಮ) ೭.ಕೋರಗೆರೆ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಪಂ.(ಮ) ೮.ದೊಡ್ಡಎಣ್ಣೇಗೆರೆ- ಅಧ್ಯಕ್ಷರು ಸಾಮಾನ್ಯ (ಮ) ಉಪಾಧ್ಯಕ್ಷರು ಪ.ಜಾ . ೯.ಹಂದನಕೆರೆ- ಅಧ್ಯಕ್ಷರು ಪ.ಜಾ. ,ಉಪಾಧ್ಯಕ್ಷರು ಬಿಸಿಎಂ,(ಎ) (ಮ). ೧೦.ಚೌಳಕಟ್ಟೆ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಪ.ಪಂ.(ಮ) ೧೧ ತಿಮ್ಲಾಪುರ- ಅಧ್ಯಕ್ಷರು ಸಾಮಾನ್ಯ,ಉಪಾಧ್ಯಕ್ಷರು ಬಿಸಿಎಂ,ಎ . ೧೨.ದೊಡ್ಡಬಿದರೆ- ಅಧ್ಯಕ್ಷರು ಸಾಮಾನ್ಯ(ಮ) ಉಪಾಧ್ಯಕ್ಷರು ಸಾಮಾನ್ಯ ೧೩.ಬರಕನಾಳು. ಅಧ್ಯಕ್ಷರು ಪ.ಜಾ,ಉಪಾಧ್ಯಕ್ಷರು ಸಾಮಾನ್ಯ(ಮ) . ೧೪.ತಿಮ್ಮನಹಳ್ಳಿ-ಅಧ್ಯಕ್ಷರು ಸಾಮಾನ್ಯ(ಮ) ಉಪಾಧ್ಯಕ್ಷರು ಪ.ಜಾ.(ಮ) . ೧೫.ರಾಮನಹಳ್ಳಿ- ಅಧ್ಯಕ್ಷರು ಪ.ಜಾ.(ಮ) ಉಪಾಧ್ಯಕ್ಷರು ಸಾಮಾನ್ಯ ೧೬.ಕಂದಿಕೆರ- ಅ...

ಹುಳಿಯಾರು : ಸಾಮಾನ್ಯ ಮಹಿಳೆಗೊಲಿದ ಅಧ್ಯಕ್ಷಗಿರಿ

 ಬರೋಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಳಿಯಾರು ಗ್ರಾ.ಪಂ. ನೂತನ ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೊಲಿದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ದಕ್ಕಿದೆ. ಹುಳಿಯಾರು ಗ್ರಾ.ಪಂ.ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿರುವ ಪಟ್ಟಿ. ಹುಳಿಯಾರು ಗ್ರಾ.ಪಂ. ಚುನಾವಣೆ ಪ್ರಾರಂಭದಿಂದಲೂ ಎಲ್ಲಾ ವಿಚಾರದಲ್ಲೂ ಎಲ್ಲರಲ್ಲೂ ಕುತೂಹಲವನ್ನುಂಟು ಮಾಡಿತ್ತು. ಚುನಾವಣೆಗೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರ, ಮತದಾನ, ಫಲಿತಾಂಶ ಹಾಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಯಾವ ಮೀಸಲಾತಿ ಬರುತ್ತದೆಂದು ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸದಾ ಕಾತುರದಿಂದಿದ್ದರು. ಅಭ್ಯರ್ಥಿಗಳ, ಬೆಂಬಲಿಗರ ಹಾಗೂ ಸಾರ್ವಜನಿಕರ ಕಾತುರಕ್ಕೆ ಇದೀಗ ತೆರೆಬಿದ್ದಂತಾಗಿದೆ. ಪಂಚಾಯ್ತಿಯ ಒಟ್ಟು ೩೯ ಸದಸ್ಯರ ಪೈಕಿ ಪುರುಷ ಸದಸ್ಯರು ೧೯ ಮಂದಿಯಿದ್ದರೆ, ಮಹಿಳಾ ಸದಸ್ಯರು ೨೦ ಮಂದಿಯಿದ್ದಾರೆ. ಇದೀಗ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಬಂದಿದ್ದು ಪಂಚಾಯ್ತಿಯ ಒಟ್ಟು ೨೦ ಮಂದಿ ಮಹಿಳಾ ಸದಸ್ಯರ ಪೈಕಿ ಯಾರಿಗೆ ಅಧ್ಯಕ್ಷ ಗಾದಿ ಒಲಿಯಲಿದೆ ಎಂಬುದು ಮತ್ತೊಮ್ಮೆ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ರಾಜಕೀಯ ಪಕ್ಷಗಳು ಸಹ ತೆರೆಮರೆಯಲ್ಲಿ ತಮ್ಮ ಸದಸ್ಯ ಬಲವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಿದ್ದರೂ ಸಹ ಮಹಿಳೆಯರಲ್ಲಿ ಯ...

ಪತಿ ಪಂಚಾಯ್ತಿ ಬಿಲ್ ಕಲೆಕ್ಟರ್ : ಪತ್ನಿ ಗ್ರಾ.ಪಂ. ಸದಸ್ಯೆ

ಪತಿ ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಕೆಲಸ ಮಾಡುತ್ತಿದ್ದರೆ ಅದೇ ಪಂಚಾಯ್ತಿಯಲ್ಲೀಗ ಪತ್ನಿಯೂ ಕೂಡ ನೂತನ ಸದಸ್ಯೆಯಾಗಿ ಆಯ್ಕೆಯಾಗಿರುವುದು ಆ ಕುಟುಂಬದ ಸಂತಸಕ್ಕೆ ಕಾರಣವಾಗಿದೆ. ಪುಟ್ಟಮ್ಮ(ದುರ್ಗಮ್ಮ) . ಕಳೆದ ಅನೇಕ ವರ್ಷದಿಂದ ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆನಂದ್ ತಮ್ಮ ಕೆಲಸ ಕಾರ್ಯದಿಂದ ಹಾಗೂ ಸ್ನೇಹಶೀಲತೆಯಿಂದ ಜನಾನುರಾಗಿಯಾಗಿದ್ದು , ಅವರ ಪತ್ನಿ ಪುಟ್ಟಮ್ಮ(ಹೆಚ್.ಆರ್.ದುರ್ಗಮ್ಮ) ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಸಾಮಾನ್ಯ ಮಹಿಳೆ ಸ್ಥಾನದಿಂದ ಸ್ಪರ್ಧಿಸಿ ಗ್ರಾ.ಪಂ. ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ೬ ನೇ ಬ್ಲಾಕ್ ನಿಂದಲೇ ಸ್ಪರ್ಧಿದ್ದ ಪುಟ್ಟಮ್ಮ ತನ್ನ ಪ್ರತಿಸ್ಪರ್ಧಿರ್ಧಿಗಿಂತ ಕೇವಲ ೬ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಈ ಹಿಂದಿನ ಚುನಾವಣೆಯ ಅನುಭವದ ಬೆನ್ನಲ್ಲೇ ಈ ಬಾರಿಯೂ ಸಹ ಗ್ರಾ.ಪಂ.ಅದೇ ೬ ನೇ ಬ್ಲಾಕ್ ನಲ್ಲಿ ಸಾಮಾನ್ಯ ಮಹಿಳೆ ಮೀಸಲು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಬ್ಲಾಕ್ ನ ಮಹಿಳಾ ಮೀಸಲು ಒಂದು ಸ್ಥಾನಕ್ಕೆ ಪುಟ್ಟಮ್ಮ ಸೇರಿ ಒಟ್ಟು ೪ ಮಂದಿ ಸ್ಪರ್ಧಿಸಿದ್ದು ತೀವ್ರ ಪೈಪೋಟಿ ಸಹ ನಡೆದಿತ್ತಾದರೂ ಪುಟ್ಟಮ್ಮ ೧೬೯ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ತನ್ನ ಪತ್ನಿ ಕಳೆದ ೧೨ ವರ್ಷದಿಂದ ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗಿ...

ಮದ್ಯದಂಗಡಿ ಸನ್ನದುದಾರರು ಹಾಕಿದ್ದ ತಕರಾರು ಅರ್ಜಿ ವಜಾ ಅಬಕಾರಿ ಡಿಸಿಯವವರ ಆದೇಶ ಎತ್ತಿಹಿಡಿದ ಕೋರ್ಟ್

ಇಲ್ಲಿನ ಗ್ರಾಮದೇವತೆ ಶ್ರೀಹುಳಿಯಾರಮ್ಮ ಹಾಗೂ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸಮೀಪವಿರುವ ಹಾಗೂ ಅಕ್ಷೇಪಣಾರ್ಹ ಸ್ಥಳದಲ್ಲಿರುವ ಶ್ರಿರಂಗನಾಥ ಮದ್ಯದಂಗಡಿಯನ್ನು ತೆರವುಗೊಳಿಸುವ ವಿಚಾರವಾಗಿ ಮದ್ಯದಂಗಡಿ ಮಾಲೀಕ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಮಾನ್ಯ ಅಬಕಾರಿ ನ್ಯಾಯಾಲಯ ವಜಾಗೊಳಿಸಿದೆ. ಸನ್ನದುದಾರರು ಹಾಕಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿರುವ ಬಗ್ಗೆ ಅಬಕಾರಿ ನ್ಯಾಯಾಲಯ ನೀಡಿರುವ ಆದೇಶಪತ್ರ. ಪಟ್ಟಣದ ದಿ.ಟೌನ್ ಕೋಅಪರೇಟೀವ್ ಸೊಸೈಟಿಗೆ ಸೇರಿದ ಕಟ್ಟಡದಲ್ಲಿ ಎನ್.ಜಿ.ನಾಗರಾಜ್ ಅವರಿಗೆ ಸೇರಿದ ರಂಗನಾಥ ಲಿಕ್ಕರ್ ಶಾಪ್ ಇದೆ. ಈ ಮದ್ಯದಂಗಡಿ ಜನ ನಿಬಿಡ ಪ್ರದೇಶದಲ್ಲಿರುವುದಲ್ಲದೆ, ಇದರ ಸಮೀಪವೇ ಗ್ರಾಮದೇವತೆ ಹುಳಿಯಾರಮ್ಮ ದೇವಾಲಯ, ಶ್ರೀರಂಗನಾಥಸ್ವಾಮಿ ದೇವಾಲಯ, ಬೀರಲಿಂಗೇಶ್ವರಸ್ವಾಮಿ ದೇವಾಲಯ ಹಾಗೂ ಸರ್ಕಾರಿ ಆಸ್ಪತ್ರೆಯಿದ್ದು ನಿತ್ಯ ನೂರಾರು ಮಂದಿ ಸಂಚರಿಸುತ್ತಿರುತ್ತಾರೆ. ಈ ಮದ್ಯದಂಗಡಿಯಿಂದ ನಿತ್ಯ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ದೇವಾಲಯಕ್ಕೆ ಬರುವವರಿಗೆ ತೊಂದರೆಯಾಗುತ್ತಿದ್ದು ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಸೊಸೈಟಿಯವರು, ಪಟ್ಟಣದ ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಕಳೆದ ಕೆಲ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರು. ಸಾರ್ವಜನಿಕ ಒತ್ತಾಯದಂತೆ ಅಬಕಾರಿ ಡಿಸಿ ಮೋಹನ್ ಕುಮಾರ್ ಅವರ ಸಮಕ್ಷಮದಲ್ಲಿ ೨೦೧೪ರ ಆಗಸ್ಟ್ ನಲ್ಲಿ ಮದ್ಯದಂಗಡಿಯಿಂದ ವಿವಿಧ ದೇವಾಲಯ ...

ಗ್ರಾ.ಪಂ. ಅಧ್ಯಕ್ಷ/ ಉಪಾಧ್ಯಕ್ಷರ ಮೀಸಲಾತಿ ಯಾವ ವರ್ಗಕ್ಕೆ ಲಭಿಸುತ್ತದೆಂಬುದೇ ಎಲ್ಲರ ಕುತೂಹಲ

ಕಳೆದ ೨೦ ದಿನಗಳಿಂದ ಚುನಾವಣೆಯ ಹಣಾಹಣಿಯಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳು ಹಾಗೂ ಮತದಾರರು ಇದೀಗ ಚುನಾವಣೆ ಮುಗಿದು ಫಲಿತಾಂಶ ಬಂದಿದ್ದು, ಯಾರು ಅಧ್ಯಕ್ಷರಾಗುತ್ತಾರೆ, ಉಪಾಧ್ಯಕ್ಷರಾಗುತ್ತಾರೆ, ಯಾವ ವರ್ಗಕ್ಕೆ ಮೀಸಲಾತಿ ಬರುತ್ತದೆಂಬ ಲೆಕ್ಕಾಚಾರದಲಿ ತೊಡಗಿದ್ದಾರೆ. ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಇದೇ ೧೫ ರ ಒಳಗಾಗಿ ತಿಳಿಸುವುದಾಗಿ ಚುನಾವಣಾ ಅಯೋಗ ಹೇಳಿದ್ದು, ಯಾವ ವರ್ಗದವರಿಗೆ ಮೀಸಲಾತಿ ಬರುತ್ತದೆಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸದಸ್ಯರು ಹಾಗೂ ಜನರು ದಿನಗಣನೆ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳಿಂದ ಗುರ್ತಿಸಿಕೊಂಡು ಆಯ್ಕೆಯಾಗಿರುವ ಗ್ರಾ.ಪಂ.ಸದಸ್ಯರುಗಳು ತಮ್ಮತಮ್ಮಲ್ಲೇ ಗುಂಪುಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಪಕ್ಷದ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಹಾಗೂ ಗಟ್ಟಿ ಮಾಡಿಕೊಳ್ಳುವಳ್ಳಿ ಮುಂದಾಗಿದ್ದಾರೆ. ಕೆಲ ಸದಸ್ಯರು ತೆರೆಮರೆಯಲ್ಲಿ ತಮ್ಮ ರಾಜಕೀಯ ಪಕ್ಷದ ಮುಖಂಡರ ಭೇಟಿ ಮಾಡಿ ತಮ್ಮಲ್ಲಿರುವ ವರ್ಗದವರಿಗೆ ಮೀಸಲಾತಿ ಬರುವಂತೆ ಮಾಡಿ ಎಂದು ಒತ್ತಾಯ ಸಹ ಮಾಡುತ್ತಿದ್ದಾರೆ. ಕೆಲ ಸದಸ್ಯರು ಕಳೆದ ವರ್ಷಗಳ ಹಿಂದಿನ ಗ್ರಾಮ ಪಂಚಾಯ್ತಿಯ ಅಧ್ಯಕ್ಷಗಾದಿಯ ಮೀಸಲಾತಿಯನ್ನು ಗಮನಿಸಿ ಈ ಬಾರಿ ಇಂತಹ ವರ್ಗಕ್ಕೆ ಬಂದರು ಬರಬಹುದೆಂಬ ಲೆಕ್ಕಾಚಾರ ಸಹ ಹಾಕುತ್ತಿದ್ದಾರೆ. ಪಕ್ಷೇತರವಾಗಿ ಗೆದ್ದವರನ್ನು ಹಾಗೂ ತಮ್ಮ ಎದುರು ಪಕ್ಷದವರನ್ನು ತಮ್ಮತ್ತ ಸೆಳೆಯಲು ಕೆಲ ರಾಜಕೀಯ ಪಕ್ಷ...