ಪತಿ ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಕೆಲಸ ಮಾಡುತ್ತಿದ್ದರೆ ಅದೇ ಪಂಚಾಯ್ತಿಯಲ್ಲೀಗ ಪತ್ನಿಯೂ ಕೂಡ ನೂತನ ಸದಸ್ಯೆಯಾಗಿ ಆಯ್ಕೆಯಾಗಿರುವುದು ಆ ಕುಟುಂಬದ ಸಂತಸಕ್ಕೆ ಕಾರಣವಾಗಿದೆ.
ಪುಟ್ಟಮ್ಮ(ದುರ್ಗಮ್ಮ) . |
ಕಳೆದ ಅನೇಕ ವರ್ಷದಿಂದ ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆನಂದ್ ತಮ್ಮ ಕೆಲಸ ಕಾರ್ಯದಿಂದ ಹಾಗೂ ಸ್ನೇಹಶೀಲತೆಯಿಂದ ಜನಾನುರಾಗಿಯಾಗಿದ್ದು , ಅವರ ಪತ್ನಿ ಪುಟ್ಟಮ್ಮ(ಹೆಚ್.ಆರ್.ದುರ್ಗಮ್ಮ) ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಸಾಮಾನ್ಯ ಮಹಿಳೆ ಸ್ಥಾನದಿಂದ ಸ್ಪರ್ಧಿಸಿ ಗ್ರಾ.ಪಂ. ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ೬ ನೇ ಬ್ಲಾಕ್ ನಿಂದಲೇ ಸ್ಪರ್ಧಿದ್ದ ಪುಟ್ಟಮ್ಮ ತನ್ನ ಪ್ರತಿಸ್ಪರ್ಧಿರ್ಧಿಗಿಂತ ಕೇವಲ ೬ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಈ ಹಿಂದಿನ ಚುನಾವಣೆಯ ಅನುಭವದ ಬೆನ್ನಲ್ಲೇ ಈ ಬಾರಿಯೂ ಸಹ ಗ್ರಾ.ಪಂ.ಅದೇ ೬ ನೇ ಬ್ಲಾಕ್ ನಲ್ಲಿ ಸಾಮಾನ್ಯ ಮಹಿಳೆ ಮೀಸಲು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಬ್ಲಾಕ್ ನ ಮಹಿಳಾ ಮೀಸಲು ಒಂದು ಸ್ಥಾನಕ್ಕೆ ಪುಟ್ಟಮ್ಮ ಸೇರಿ ಒಟ್ಟು ೪ ಮಂದಿ ಸ್ಪರ್ಧಿಸಿದ್ದು ತೀವ್ರ ಪೈಪೋಟಿ ಸಹ ನಡೆದಿತ್ತಾದರೂ ಪುಟ್ಟಮ್ಮ ೧೬೯ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ತನ್ನ ಪತ್ನಿ ಕಳೆದ ೧೨ ವರ್ಷದಿಂದ ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗಿರುವ ಜನ ಬೆಂಬಲದಿಂದ ತಾವು ಗೆದ್ದಿದ್ದು, ತಮ್ಮ ಬ್ಲಾಕ್ ನಲ್ಲಿನ ಸಮಸ್ಯೆಗಳ ನಿವಾರಣೆ ಮಾಡುವ ಮೂಲಕ ತಮಗೆ ಮತಹಾಕಿದವರ ಸೇವೆ ಮಾಡುವುದಾಗಿ ಪುಟ್ಟಮ್ಮ ತಿಳಿಸುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ