ಗ್ರಾಮದ ಹಾಗೂ ಸಂಬಂಧಪಟ್ಟ ವಾರ್ಡಿನ ಬೇಕುಬೇಡಗಳಿಗೆ ಸ್ಪಂದಿಸಿ ಅಭಿವೃದ್ದಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಜನತೆ ನಿಮ್ಮನ್ನು ನಂಬಿ ಚುನಾಯಿಸಿದ್ದು, ಅವರ ನಂಬಿಕೆಯನ್ನು ಹುಸಿ ಮಾಡದೆ ನಡೆದುಕೊಂಡು ೫ ವರ್ಷದ ಬಳಿಕ ಸನ್ಮಾನಕ್ಕೆ ಬಾಜನರಾಗಿ ಎಂದು ಸಮಾಜಸೇವಕ ಕೊರಟಗೆರೆಯ ಸಂಪಂಗಿಕೃಷ್ಣಯ್ಯ ತಿಳಿಸಿದರು.
ಹುಳಿಯಾರಿನ ಗ್ರಾ.ಪಂ.ನ ೧ ನೇ ಬ್ಲಾಕ್ ನಿಂದ ಆಯ್ಕೆಯಾದ ಎಲ್.ಆರ್.ಚಂದ್ರಶೇಖರ್ ಹಾಗೂ ಎಂ.ಗಣೇಶ್ ಅವರನ್ನು ಆರ್ಯವೈಶ್ಯ ಮಂಡಳಿವತಿಯಿಂದ ಅಭಿನಂದಿಸಲಾಯಿತು. |
ಪಟ್ಟಣದ ಆರ್ಯವೈಶ್ಯ ಸಮಾಜದಿಂದ ಇಲ್ಲಿನ ಗ್ರಾ.ಪಂ. ಚುನಾವಣೆಯಲ್ಲಿ ಒಂದನೇ ಬ್ಲಾಕ್ ನ ಸದಸ್ಯರಾಗಿ ಆಯ್ಕೆಯಾದ ಎಲ್.ಆರ್.ಚಂದ್ರಶೇಖರ್ ಹಾಗೂ ಎಂ.ಗಣೇಶ್ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮದ ಸ್ವಚ್ಚತೆಯನ್ನು ಪಂಚಾಯ್ತಿಯವರು ಮಾಡಬೇಕಿದ್ದು ಅದಕ್ಕೆ ಸದಸ್ಯರುಗಳು ಕೂಡ ತಂತಮ್ಮ ಬ್ಲಾಕ್ ಗಳಲ್ಲಿ ಸಮಸ್ಯೆಗಳನ್ನು ಅರಿತು ಅವುಗಳನ್ನು ಯಾವರೀತಿ ಬಗೆಹರಿಸಬೇಕು ಎಂಬುದರ ಕಡೆ ಗಮನಹರಿಸಿ ಎಂದರು. ಆರ್ಯವೈಶ್ಯ ಸಮುದಾಯದಿಂದ ತಮ್ಮನ್ನು ಅಭಿನಂದಿಸಿದ್ದು ಆ ಅಭಿಮಾನವನ್ನು ಮುನ್ನೆಡೆಸಿಕೊಂಡು ಹೋಗಿ ಎಂದರು. ಜಿಲ್ಲೆಯಲ್ಲೇ ಹೆಸರಾಗಿರುವ ಹುಳಿಯಾರು ಪಂಚಾಯ್ತಿಯನ್ನು ಆದರ್ಶ ಪಂಚಾಯ್ತಿಯಾಗಿ ಮಾಡಬೇಕೆಂದರು.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಸ್.ನಟರಾಜ್ ಗುಪ್ತ ಅಧ್ಯಕ್ಷತೆವಹಿಸಿದ್ದು, ರಾಜ್ಯ ಆರ್ಯವೈಶ್ಯ ಮಹಾಸಭಾದ ತುಮಕೂರು ಜಿಲ್ಲಾಸಮಿತಿಯ ಅಧ್ಯಕ್ಷ ಬಾಗೇಪಲ್ಲಿ ಎಸ್.ನಟರಾಜ್, ನಿರ್ದೇಶಕರಾದ ಹೆಚ್.ವಿ.ಗೋವಿಂರಾಜು ,ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಶ್ಮಿಕಾಂತ್ ಸೇರಿದಂತೆ ಆರ್ಯವೈಶ್ಯ ಮಂಡಳಿ,ಕನ್ನಿಕಾಪರಮೇಶ್ವರಿ ಸಹಕಾರ ಸಂಘ, ಆರ್ಯವೈಶ್ಯ ಮಹಿಳಾ ಸಂಘ,ವಾಸವಿಯುವಜನ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ