ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದವತಿಯಿಂದ ಮನೆಮನೆಗಳಲ್ಲಿ ನಡೆಯುತ್ತಿರುವ ಪಾಕ್ಷಿಕ ಕನ್ನಡ ಕವಿಕಾವ್ಯಗೋಷ್ಠಿ ಕಾರ್ಯಕ್ರಮವು ಕೋಡಿಹಳ್ಳಿಯಲ್ಲಿ ನಿವೃತ್ತ ಮುಖ್ಯಶಿಕ್ಷಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆಯಿತು.
ನಿವೃತ್ತ ಉಪನ್ಯಾಸಕರಾದ ತ.ಶಿ.ಬಸವಮೂರ್ತಿ ಶರಣ ಸಾಹಿತ್ಯ ಕುರಿತು ನೀಡಿದ ಉಪನ್ಯಾಸದಲ್ಲಿ ಶಿವಶರಣರ ಅನುಭವಾಮೃತವಾದ ಕಾಯಕ ತತ್ವ, ದಾಸೋಹ ತತ್ವ, ಸರ್ವಸಮಾನತೆ, ಸ್ತ್ರೀಸ್ವಾತಂತ್ರ್ಯ ಮುಂತಾದ ಅಂಶಗಳುಳ್ಳ ವಚನಗಳನ್ನು ಉಲ್ಲೇಖಿಸಿ ತಿಳಿಸಿದರು.
"ಕಳಬೇಡ, ಕುಲಬೇಡ" ಎಂಬ ವಚನದ ಮೂಲಕ ವಿಶ್ವಗುರು ಬಸವಣ್ಣನವರು ಈಡಿ ವಿಶ್ವಕ್ಕೆ ಅನ್ವಯಿಸುವ ಸಂವಿಧಾನವನ್ನು ರೂಪಿಸಿಕೊಟ್ಟಿದ್ದಾರೆಂದರು.
ಕರಿಯಪ್ಪ ಮತ್ತು ಸಂಗಡಿಗರಿಂದ ಗುರುಭಜನೆ ನಡೆಯಿತು. ಸಾಲ್ಕಟ್ಟೆಯ ಮುಖ್ಯ ಗುರುಗಳಾದ ಟಿ.ನಾರಾಯಣ್ಣಪ್ಪನವರು ಜನಪದ ಸಾಹಿತ್ಯ ಮತ್ತು ಸರ್ವಜ್ಞನ ವಚನಗಳನ್ನು ಕುರಿತಂತೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎಸ್.ಈಶ್ವರಯ್ಯನವರು ಹೋಬಳಿ ಕಸಾಪ ವತಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವ ಕನ್ನಡನುಡಿ ಸೇವೆಯನ್ನು ಶ್ಲಾಘಿಸಿದರು.ಕುಮಾರಿ ಸಿಂಚನ ಮತ್ತು ಜನನಿ ಸಂಗಡಿಗರು ಪ್ರಾರ್ಥಿಸಿ ಸಿದ್ದರಾಮಯ್ಯನವರು ಸ್ವಾಗತಿಸಿ, ರವಿಶ್ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ