ಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಧ್ಯೇಯದೊಂದಿಗೆ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆ,ಕೃಷಿ ಮಾರುಕಟ್ಟೆ,ಲೀಡ್ ಬ್ಯಾಂಕ್ ಹಾಗೂ ಆರಕ್ಷಕ ಇಲಾಖೆಯ ಸಹಭಾಗಿತ್ವದಲ್ಲಿ ಅಯೋಜಿಸಿರುವ " ಕೃಷಿ ಅಭಿಯಾನ-೨೦೧೫-೧೬" ಕಾರ್ಯಕ್ರಮವು ಗುರುವಾರದಂದು ದೊಡ್ಡಬಿದರೆಯಿಂದ ಪ್ರಾರಂಭಗೊಂಡಿತು.
ಕಂದಿಕೆರೆ ಹೋಬಳಿಯಾದ್ಯಂತ ಕೃಷಿ ಅಭಿಯಾನವನ್ನು ಮುಗಿಸಿದ ಕೃಷಿ ಮಾಹಿತಿ ಸಂಚಾರಿ ವಾಹನವು ಗುರುವಾರ ಹುಳಿಯಾರು ಹೋಬಳಿ ದೊಡ್ಡಬಿದರೆಗೆ ಆಗಮಿಸಿದ್ದು ಜಿ.ಪಂ.ಸದಸ್ಯೆ ಮಂಜುಳಾ ಗವಿರಂಗಯ್ಯ ಅಭಿಯಾನಕ್ಕೆ ಚಾಲನೆ ನೀಡಿದರು. ದೊಡ್ಡಬಿದರೆಯಿಂದ ಪ್ರಾರಂಭಗೊಂಡ ಅಭಿಯಾನದ ಯಾತ್ರೆ ಬರಕನಹಾಳ್,ಯಳನಡು,ಕೋರಗೆರೆ, ತಿರುಮಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ರೈತರಿಗೆ ಮಾಹಿತಿ ನೀಡಲಾಯಿತು.
ಅಭಿಯಾನದ ನಿರ್ವಹಣೆ ಹೊತ್ತಿದ್ದ ಕೃಷಿ ಅಧಿಕಾರಿ ಕರಿಬಸವಯ್ಯ ಮಾತನಾಡಿ, ರೈತರು ತಮ್ಮ ಜಮೀನಿನ ಮಣ್ಣಿನ ಗುಣ, ಫಲವತ್ತತೆಗೆ ಅನುಗುಣವಾಗಿ ಬಿತ್ತನೆ ಮಾಡಿದಾಗ ಹೆಚ್ಚು ಇಳುವರಿ ಸಾಧ್ಯ ಎಂದು ತಿಳಿಸಿದರು. ಕೃಷಿ ಇಲಾಖೆಯಿಂದ ರೈತರಿಗೆ ಅನೇಕ ಯೋಜನೆಗಳಿರುವುದರ ಜೊತೆಗೆ ಸಬ್ಸಿಡಿ ದರದಲ್ಲಿ ಗೊಬ್ಬರ,ಕೀಟನಾಶಕ, ಯಂತ್ರೋಪಕರಣಗಳನ್ನು ನೀಡುತ್ತಿದ್ದು ರೈತರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಈ ವೇಳೆ ಸಹಾಯಕ ಕೃಷಿ ಅಧಿಕಾರಿ ಶಿವಣ್ಣ, ರಂಗನಾಥ್, ರೈತ ಅನುವುಗಾರರು ಸೇರಿದಂತೆ ಇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಇಂದು(ತಾ.೧೯) ಶುಕ್ರವಾರ ದಸೂಡಿ,ಗಾಣಧಾಳು,ಹೊಯ್ಸಳಕಟ್ಟೆ,ಕೆಂಕೆರೆ ಗ್ರಾಮ ಪಂಚಾಯ್ತಿಯಲ್ಲಿ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು ಕೃಷಿ ಮಾಹಿತಿ ಸಂಚಾರಿ ವಾಹನ ಆಗಮಿಸಲಿದ್ದು ರೈತರು ತಮ್ಮ ಸಮಸ್ಯೆಗಳನ್ನು ತಿಳಿಸಿ ಮಾಹಿತಿ ಪಡೆಯಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ