ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಿಂದಾಗಿ ಸಮೃದ್ದವಾಗಿ ಬೆಳೆದಿದ್ದ ಹತ್ತಾರೂ ಎಕರೆ ಹೆಸರು ಗಿಡಕ್ಕೆ ಹಸಿರುಹುಳು ಬಿದ್ದಿದ್ದು ಹೆಸರುಗಿಡ ಎಲೆಗಳನ್ನು ಭಕ್ಷಿಸು ಗಿಡವನ್ನು ಸಂಪೂರ್ಣ ನಾಶಗೊಳಿಸುತ್ತಿದ್ದು ಆ ಹುಳುಗಳ ಹತೋಟಿಗಾಗಿ ಎಲ್ಲಾ ರೈತರು ಜೌಷಧಿ ಸಿಂಪರಣೆ ಮಾಡಬೇಕು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ.
ಹೋಬಳಿ ವ್ಯಾಪ್ತಿಯ ಕೋರಗೆರೆ,ಯಳನಡು, ತಿರುಮಲಾಪುರ, ದೊಡ್ಡಬಿದರೆ, ಕೆಂಕೆರೆ ಭಾಗದಲ್ಲಿ ಹಸಿರುಹುಳಕಾಟ ಹೆಚ್ಚಿರುವುದು ಕಂಡುಬಂದಿದೆ. ಹಸಿರು ಹುಳುಗಳ ಹತೋಟಿಗಾಗಿ ತಾಲ್ಲೋಕ್ ಹಾಗೂ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಜೌಷಧಿ ಲಭ್ಯವಿದ್ದು ರೈತರು ಆ ಜೌಷಧಿಯನ್ನು ಪಡೆದು ಹೆಸರು ಗಿಡಗಳೀಗೆ ಸಿಂಪಡಿಸುವಂತೆ ತಿಳಿಸಿದ್ದಾರೆ. ಎಲ್ಲಾ ರೈತರು ಏಕಕಾಲದಲ್ಲಿ ತಂತಮ್ಮ ಹೊಲಗಳಲ್ಲಿ ಔಷಧಿ ಸಿಂಪರಣೆ ಮಾಡುವುದರಿಂದ ಈ ಹುಳುಗಳನ್ನು ಬೇಗ ಹತೋಟಿಗೆ ತರಬಹುದಾಗಿದೆ ಎಂದಿದ್ದಾರೆ. ರೈತಸಂಪರ್ಕ ಕೇಂದ್ರದಲ್ಲಿ ದೊರೆಯುವ ಕ್ಲೊರೋಫೈರಿಫಾಸ್ ಮತ್ತು ಮಾನೊಕ್ರೋಟೋಫಾಸ್ ಜೌಷಧವನ್ನು ಪಡೆದು ಪ್ರತಿ ಲೀಟರ್ ನೀರಿಗೆ ೨ ಮಿಲಿಯಷ್ಟು ಮಿಶ್ರಣ ಮಾಡಿ ಬೆಳಗಿನ ಸಮಯದಲ್ಲಿ ಸಿಂಪರಣೆ ಮಾಡುವುದರಿಂದ ಹಸಿರುಹುಳುಗಳನ್ನು ನಾಶಪಡಿಸಬಹುದಾಗಿದ್ದು ರೈತರು ಶೀಘ್ರವೇ ರೈತಸಂಪರ್ಕಕೇಂದ್ರದಲ್ಲಿಗೆ ಬಂದು ಪಡೆಯುವಂತೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ