ಹುಳಿಯಾರು ಹೋಬಳಿ ಕೆಂಕೆರೆ ಮಜುರೆ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಹೊರಕೆರೆ ರಂಗನಾಥಸ್ವಾಮಿಯ ಏಕಾದಶಿ ಆಚರಣೆ ವಿವಿಧ ಪೂಜಾಕೈಂಕರ್ಯಗಳೊಂದಿಗೆ ಶ್ರದ್ದಾಭಕ್ತಿಯಿಂದ ನಡೆಯಿತು.
ಹುಳಿಯಾರು ಹೋಬಳಿ ದಮ್ಮಡಿಹಟ್ಟಿಯಲ್ಲಿ ಏಕಾದಶಿ ಆಚರಣೆ ಅಂಗವಾಗಿ ನಡೆದ ದೇವರುಗಳ ಮೆರವಣಿಗೆ. |
ಕುರಿಹಟ್ಟಿಯ ಆಂಜನೇಯಸ್ವಾಮಿಯ ದೇವಾಲಯದಿಂದ ದಾಸಪ್ಪಗಳ ಸಮೇತ ದೊಡ್ಡಬಿದರೆ ಪಾತಲಿಂಗೇಶ್ವರಸ್ವಾಮಿ ವೀರಗಾಸೆ ಕುಣಿತದೊಂದಿಗೆ ಗ್ರಾಮದೇವತೆ ಕೆಂಕೆರೆ ಕಾಳಮ್ಮ ಹಾಗೂ ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿಯ ಮೆರವಣಿಗೆ ನಡೆಸಲಾಯಿತು. ನಂತರ ದೇವಾಲಯದ ಆವರಣದಲ್ಲಿ ತುಪ್ಪದಪೂಜೆ, ಎಡೆಪೂಜೆ,ಮಂಗಳಾರತಿ ನಡೆದು ಪನಿವಾರ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸೋಮವಾರ ಬೆಳಿಗ್ಗೆ ದೊಡ್ಡಮಣೇವು ಹಾಕುವ ಕಾರ್ಯ ನಡೆದು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಈ ವೇಳೆ ದೇವಾಲಯ ಸಮಿತಿಯವರು, ಕೆಂಕೆರೆ,ಹುಳಿಯಾರು,ಕಂಪನಹಳ್ಳಿ ಸುತ್ತಮುತ್ತಲ ಭಕ್ತಾಧಿಗಳು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ