ಗ್ರಾಮ ಪಂಚಾಯ್ತಿಯ ೩೯ ಸದಸ್ಯರ ಆಯ್ಕೆಗಾಗಿ ಒಟ್ಟು ೧೬೨ ಮಂದಿ ಅಭ್ಯರ್ಥಿಗಳು ಕಣದಲಿದ್ದು , ಮತಚಲಾಯಿಸಲು ಮತಕೇಂದ್ರಲ್ಲಿಗೆ ಬರುವ ಮತದಾರರಲ್ಲಿ ಮತಯಾಚಿಸಲು ಮತಕೇಂದ್ರದ ಸುತ್ತ ಅಭ್ಯರ್ಥಿಗಳ ಹಾಗೂ ಅವರ ಬೆಂಬಲಿಗರ ಬಾರಿ ಗುಂಪು ಸೇರಿ,ಮತಯಾಚನೆಗೆ ನಾನಾಕಸರತ್ತು ನಡೆಸಿದರು.
ಹುಳಿಯಾರಿನ ಮತಕೇಂದ್ರದ ಸುತ್ತಮತ್ತ ಸೇರಿದ್ದ ಅಭ್ಯರ್ಥಿಗಳ ಹಾಗೂ ಬೆಂಬಲಿಗಲ ದಂಡು. |
ಪಟ್ಟಣದ ಪ್ರತಿ ಬ್ಲಾಕ್ ನಲ್ಲೂ ಪ್ರಬಲ ಪೈಪೋಟಿ ಉಂಟಾಗಿ ಅಭ್ಯರ್ಥಿಗಳು ಮತದಾನ ಪ್ರಾರಂಭಕ್ಕೂ ಮುಂಚಿತವಾಗಿಯೇ ಮತಕೇಂದ್ರದ ಬಳಿ ಆಗಮಿಸಿದ್ದು ಮತದಾರು ಆಗಮಿಸುವುದನ್ನು ಕಾಯ್ದು ತಮ್ಮ ಗುರ್ತಿಗೆ ಮತಹಾಕಿ ಎಂದು ಹೇಳುತ್ತಿದ್ದರು. ಎಂಪಿಎಸ್ ಶಾಲೆಯ ಮತಕೇಂದ್ರದಲ್ಲಿ ಮೂರುಕಡೆ ನಿಂತಿದ್ದ ಅಭ್ಯರ್ಥಿಗಳು ಕೈಯ್ಯಲ್ಲಿ ಕರಪತ್ರ ಹಿಡಿದು ತಮ್ಮ ಚಿಹ್ನೆಗಳನ್ನು ಮತದಾರಿಗೆ ತೋರಿಸುತ್ತಿದ್ದರಲ್ಲದೆ , ಕೈ ಮುಗಿದು ನಮಗೆ ತಪ್ಪದೇ ಓಟು ಕೊಡಿ ಎಂದು ಕೇಳಿಕೊಳ್ಳುತ್ತಿದ್ದು ಸಾಮಾನ್ಯವಾಗಿತ್ತು.
ಮಹಿಳಾ ಅಭ್ಯರ್ಥಿಗಳ ಪರವಾಗಿ ಅವರ ಪತಿರಾಯರು ಹಾಗೂ ಗಂಡನ ಪರವಾಗಿ ಮಡದಿ, ಮಕ್ಕಳು ಮತಕೇಂದ್ರದ ಹತ್ತಿರ ನಿಂತು ಮತಯಾಚಿಸಿದರು. ಅಭ್ಯರ್ಥಿಗಳ ಬೆಂಬಲಿಗರು ಸಹ ಅವರೊಂದಿಗಿದ್ದು ಆಗಮಿಸಿದ ಮತದಾರಿಗೆ ಅವರ ಓಟರ್ ಲಿಸ್ಟ್ ನ ಕ್ರಮ ಸಂಖ್ಯೆಯನ್ನು ಬರೆದುಕೊಟ್ಟು ತಮಗೆ ಓಟು ಕೊಡಿ ಎಂದು ಕೇಳುತ್ತಿದ್ದರು. ಅಂಗವಿಕಲರು, ವಯಸ್ಸಾದವರು ಹಾಗೂ ದೂರದ ಮನೆಯವರಲ್ಲಿಗೆ ಕಾರು, ಆಟೋ , ಬೈಕ್ ಕಳುಹಿಸಿ ಕರೆದುಕೊಂಡು ಬಂದು ಮತಹಾಕಿಸಿದರು.
ಕಳೆದ ಚುನಾವಣೆಗಳಲ್ಲಿ ಎಂಪಿಎಸ್ ಶಾಲೆಯ ಕಾಂಪೌಡ್ ಪಕ್ಕದಲ್ಲೇ ನಿಂತು ಮತಯಾಚನೆ ಮಾಡುವ ಕಾರ್ಯ ನಡೆಯುತ್ತಿದ್ದು ಶಾಂತಿಗೆ ಭಂಗತಂದಿದ್ದನು ಅರಿತ ಅರಿತ ಪೋಲಿಸ್ ನವರು ಬದಲಾವಣೆ ಮಾಡಿದ್ದರು. ಪೋಲಿಸ್ ಠಾಣೆಯ ತಿರುವಿನಿಂದ ರಾಜ್ ಕುಮಾರ್ ರಸ್ತೆ ಕೆಲ ದೂರದವರೆಗೆ ಯಾವುದೇ ಅಂಗಡಿಗಳನ್ನು ತೆರೆಯದಂತೆ ಹಾಗೂ ಈ ಜಾಗದಲ್ಲಿ ಯಾರು ಮತಯಾಚಿಸದಂತೆ ಬ್ಯಾರಿ ಕ್ಯಾಡ್ ಗಳನ್ನು ಇಟ್ಟು ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಕೆಲ ಅಭ್ಯರ್ಥಿಗಳು ಬಿ.ಎಚ್.ರಸ್ತೆ ಅಕ್ಕಪಕ್ಕ ನಿಂತು ಮತಯಾಚಿಸಿದರೆ, ಇನ್ನೂ ಕೆಲ ಅಭ್ಯರ್ಥಿಗಳು ಅಂಬೇಡ್ಕರ್ ಭವನ ಮುಂದಿನ ಆವರಣದಲ್ಲಿ ನಿಂತು ಮತಯಾಚನೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ