ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಧನುಷ್ ರಂಗನಾಥ್ ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ( ಸತತ ೪ನೇ ಬಾರಿ) ಆಯ್ಕೆಯಾಗುವ ಮೂಲಕ ಸಾಧನೆಯ ಮತ್ತೊಂದು ಮೆಟ್ಟಿಲೇರಿದ್ದಾರೆ.
೨೦೦೦ ನೇ ಸಾಲಿನ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ೪ ನೇ ಬ್ಲಾಕ್ ನಿಂದ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ರಂಗನಾಥ್ ಪ್ರತಿ ಬಾರಿಯೂ ಅದೇ ಬ್ಲಾಕ್ ನಿಂದಲೇ ಸ್ಪರ್ಧಿಸಿ ಜಯ ಸಾಧಿಸುತ್ತಾ ಬಂದಿದ್ದಾರೆ. ಅಂತೆಯೇ ಈ ಬಾರಿಯೂ ಸಹ ೪ ನೇ ಬ್ಲಾಕ್ ನಿಂದಲೇ ಕಣಕ್ಕಿಳಿದು ೨೩೮ ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಜಯಶೀಲರಾಗಿ ಇತಿಹಾಸ ಬರೆದಿದ್ದಾರೆ. ಇವರು ಮೂರು ಬಾರಿ ಆಯ್ಕೆಯಾಗಿದ್ದರೂ ಸಹ ಒಮ್ಮೆಯೂ ಅಧ್ಯಕ್ಷರಾಗಲು ಮುಂದಾಗಿರಲಿಲ್ಲ. ಗ್ರಾ.ಪಂ.ಸದಸ್ಯರಾಗಿರುವುದಲ್ಲದೆ ಹುಳಿಯಾರು ಕೃಷಿಪತ್ತಿನ ಸಹಕಾರ ಸಂಘದಲ್ಲಿ ಸತತ ೨ ನೇಬಾರಿ ಸದಸ್ಯರಾಗಿಗೂ ಆಯ್ಕೆಯಾಗಿದ್ದಾರೆ.
ತಮ್ಮ ಬ್ಲಾಕ್ ನ ಮತದಾರರು ತಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸವೇ ನನ್ನ ಈ ಗೆಲುವಿಗೆ ಕಾರಣವಾಗಿದ್ದು, ಅವರ ನಂಬಿಕೆಗೆ ಪೂರಕವಾಗಿ ಹಾಗೂ ಗ್ರಾಮದ ಅಭಿವೃದ್ದಿಗೆ ಸಹಕಾರಿಯಾಗಿ ಕಾರ್ಯಗಳನ್ನು ಮಾಡಿಕೊಂಡು ಸಾಗುವುದಾಗಿ ಧನುಷ್ ರಂಗನಾಥ್ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ