ತುಮಕೂರಿನ ಆರ್.ವೆಂಕಟರಾವ್ ಮರಾಠಾ ಹಾಸ್ಟೆಲ್ ಟ್ರಸ್ಟ್ ,ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್,ಬೆಂಗಳೂರಿನ ಪಂಚಮುಖಿ ಯುವವೇದಿಕೆ, ತಾಲ್ಲೂಕು ಮರಾಠಾ ಪರಿಷತ್, ಲಯನ್ಸ್ ಕ್ಲಬ್, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ , ಜಿಲ್ಲಾ ಆಂಧತ್ವ ನಿವಾರಣ ಸಂಸ್ಥೆ, ಮೋದಿ ಆಸ್ಪತ್ರೆ ಹಾಗೂ ಹುಳಿಯಾರು ಗ್ರಾ.ಪಂ. ಸಹಯೋಗದಲ್ಲಿ ಪಟ್ಟಣದ ಎಂಪಿಎಸ್ ಶಾಲೆಯಲ್ಲಿ ಭಾನುವಾರ ಅಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ೪೫೦ಕ್ಕೂ ಹೆಚ್ಚು ಮಂದಿಯ ತಪಾಸಣೆ ನಡೆಸಲಾಯಿತು.
ಹುಳಿಯಾರಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವೈದ್ಯರು ಹಾಗೂ ಸಂಘಸಂಸ್ಥೆಯ ಪದಾಧಿಕಾರಿಗಳು. |
ಮರಾಠಾ ಹಾಸ್ಟೆಲ್ ಟ್ರಸ್ಟ್ ಅಧ್ಯಕ್ಷ ವೆಂಕಟರಾವ್ ಚೌಹಾಣ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಜೀವನದಲ್ಲಿ ಹಣ,ಸಂಪತ್ತು ಗಳಿಕೆಗಿಂತ ಉತ್ತಮ ಆರೋಗ್ಯ ಹೊಂದಿರುವವರೇ ನಿಜವಾದ ಶ್ರೀಮಂತರು. ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು ಎಂದರು. ಟ್ರಸ್ಟ್ ನಿಂದ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಸಾರ್ವಜನಿಕರು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಶಿಬಿರದಲ್ಲಿ ಕಣ್ಣಿನ ತಪಾಸಣೆ,ಹೃದಯ ಸಂಬಂಧಿ ತಪಾಸಣೆ, ಗರ್ಭಕೋಶದ ತೊಂದರೆ,ಮೂತ್ರಕೋಶದಲ್ಲಿ ಕಲ್ಲಿನ ಪರೀಕ್ಷೆ,ನರರೋಗ ಪರೀಕ್ಷೆ,ಪೈಲ್ಸ್,ಹರ್ನಿಯಾ,ಕಿವಿ,ಮೂಗು,ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ, ಮೂಳೆರೋಗ ಪರೀಕ್ಷೆ ಹಾಗೂ ಉಚಿತ ಔಷಧಿ ಸಹ ವಿತರಿಸಲಾಯಿತು. ಶಸ್ತ್ರ ಚಿಕಿತ್ಸೆ ಅಗತ್ಯವಿದ್ದ ೩೧ ಮಂದಿಗೆ ಬೆಂಗಳೂರಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು.
ಮರಾಠಾ ಟ್ರಸ್ಟ್ ನ ಜನಾರ್ಧನ್ ಸೊನಾಲಿ,ನಾಗೇಶ್ ರಾವ್, ರಾಮಚಂದ್ರ ಚೌಹಾಣ್, ನಾಗೇಶ್ ರಾವ್ ವನ್ಸೆ, ಗಂಗಾಧರರಾವ್ ಕರ್ ಮೋರೆ,ಅಮರ್, ಲಯನ್ಸನ ಡಾ.ಶ್ಯಾಂಸುಂದರ್, ದಾನಿಗಳಾದ ಬ್ಯಾಂಕ್ ಮರುಳಯ್ಯ,ರೋಟರಿ ಅಧ್ಯಕ್ಷ ರವೀಶ್, ಮಂಜುನಾಥ ಗುಪ್ತಾ, ಹುಳಿಯಾರು ಗ್ರಾ.ಪಂ.ಸದಸ್ಯರಾದ ಶಿವಾಜಿರಾವ್, ಸುಭದ್ರಬಾಯಿ,ಚಂದ್ರಶೇಖರರಾವ್, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ