ಹುಳಿಯಾರು ಪಟ್ಟಣದ ಎಂಪಿಎಸ್ ಶಾಲೆಯ ೨೮ನೇ ಮತಗಟ್ಟೆಯ ಕೊಠಡಿ ಶಿಥಿಲವಾಗಿದ್ದು, ತಾರಸಿಯ ಮೇಲೆ ನೀರು ನಿಂತು ಯಾವಾಗ ಕುಸಿಯುತ್ತದೆ ಎಂಬುದು ತಿಳಿಯದಾಗಿದೆ. ಇಂತಹ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವುದೇಗೆ ಎಂದು ಸೋಮವಾರ ಆಗಮಿಸಿದ ಚುನಾವಣಾ ಸಿಬ್ಬಂದಿ ಕೊಠಡಿಯೊಳಗೆ ಪ್ರವೇಶಿಸಲು ನಿರಾಕರಿಸಿದರು.
ಹುಳಿಯಾರಿನ ಎಂಪಿಎಸ್ ಶಾಲೆಯ ಮತಗಟ್ಟೆ ಸಂಖ್ಯೆ ೨೮ ರ ಕೊಠಡಿ ಶಿಥಿಲವಾಗಿರುವುದನ್ನು ಕಂಡು ಒಳಹೋಗಲು ಹಿಂದೇಟಾಕಿ ಹೊರಗೆ ನಿಂತಿರುವ ಸಿಬ್ಬಂದಿಗಳು. |
ಮತದಾನಕ್ಕೆ ಉತ್ತಮಕೊಠಡಿ ಹಾಗೂ ಸುತ್ತಮುತ್ತ ಉತ್ತಮ ಸ್ವಚ್ಚವಾಗಿರುವಂತ ಕೊಠಡಿಯನ್ನು ನೀಡಬೇಕಾದ ಚುನಾವಣಾ ಅಧಿಕಾರಿಗಳು ಎಲ್ಲೋ ಕುಳಿತು ಯಾವುದೋ ಒಂದು ಕೊಠಡಿಯನ್ನು ಮತಗಟ್ಟೆಯನ್ನಾಗಿ ಮಾಡಿದ್ದಾರೆ ಎಂದು ಸಿಬ್ಬಂದಿ ದೂರಿದರು. ಮತಗಟ್ಟೆ ಸಂಖ್ಯೆ ೨೮ರ ಸುತ್ತಮುತ್ತ ಸ್ವಚ್ಚವಾಗಿಲ್ಲ, ಕೊಠಡಿಯ ಮುಂಭಾಗದಲ್ಲಿ ರಾಶಿರಾಶಿ ಕಲ್ಲು ,ಕಸಕಡ್ಡಿ ಬಿದ್ದಿದೆ. ಕೊಠಡಿಯಲ್ಲಿದ್ದ ಡೆಸ್ಕ್ ಹಾಗೂ ಮೇಜುಗಳನ್ನು ಕೊಠಡಿಯ ಮುಂಭಾಗದಲ್ಲಿ ಬೇಕಾಬಿಟ್ಟಿಯಾಗಿ ಎಸೆದಿದ್ದು ಮತದಾರು ಬಂದು ನಿಲ್ಲಲ್ಲು ಸಹ ಸೂಕ್ತವಾಗಿಲ್ಲ. ಕೊಠಡಿ ತುಂಬೆಲ್ಲಾ ಎಲ್ಲಿನೋಡಿದರೂ ಧೂಳೇ ತುಂಬಿದೆ. ಮಹಿಳೆಯರಿಗಾಗಿ ಶೌಚಾಲಯವಿಲ್ಲ, ಮುಖತೊಳೆಯಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಈ ಬಗ್ಗೆ ತಹಸೀಲ್ದಾರ್ ಅವರು ಗಮನಹರಿಸಬೇಕಿದೆ ಎಂದು ಚುನಾವಣಾ ಸಿಬ್ಬಂದಿ ಒತ್ತಾಯಿಸಿದರು.
ಅಲ್ಲದೆ ತಹಸೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಿಬ್ಬಂದಿಗಳು ಮತಗಟ್ಟೆಯ ವಾಸ್ತವವನ್ನು ತಿಳಿಸಿದರು. ತಹಸೀಲ್ದಾರ್ ಅವರ ಸೂಚನೆಯಂತೆ ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಡಿಓ ಅವರು ಸ್ಥಳಕ್ಕಾಗಮಿಸಿ ಮತಗಟ್ಟೆಯ ಸಿಬ್ಬಂದಿಯವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ