ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ಮಂಡಲ ಪೂಜಾ ಕಾರ್ಯಕ್ರಮ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ಜರುಗಿತು.
|
ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಡಲಪೂಜೆ ಅಂಗವಾಗಿ ಹೋಮ ನಡೆಸಲಾಯಿತು. |
|
ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿಗೆ ಮಂಡಲ ಪೂಜೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. |
ವಿನೋದಭಟ್ ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ ಗಂಗಾಪೂಜೆ, ಪೂರ್ಣಕುಂಭಪೂಜೆ,ಮಹಾಗಣಪತಿಪೂಜೆ, ಅಷ್ಟೋತ್ತರ, ಹೋಮ ಕಾರ್ಯ ಹಾಗೂ ಪೂರ್ಣಾಹುತಿ ನಡೆಯಿತು. ದೇವಾಲಯದ ಧರ್ಮದರ್ಶಿಗಳಾದ ವಾಸುದೇವಮೂರ್ತಿ ದಂಪತಿಗಳು ಪೂಜಾವಿಧಿವಿಧಾನ ನೆರವೇರಿಸಿದರು.ಮಹಾಮಂಗಳಾರತಿ ನಂತರ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದವಿನಿಯೋಗ ಕಾರ್ಯ ನಡೆಸಲಾಯಿತು. ಈ ವೇಳೆ ದೇವಾಲಯ ಸಮಿತಿಯವರು ಹಾಗೂ ಗೋಪಾಲಪುರದ ಸುತ್ತಮುತ್ತಲಿನ ಹಳ್ಳಿಯ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ