ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ನಡೆದ ಗ್ರಾಮಪಂಚಾಯಿತಿ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲು ನಿಗದಿ ಪ್ರಕ್ರಿಯೆ
ಯಾವುದೇ ಒತ್ತಡಗಳಿಗೂ ಮಣಿದಿಲ್ಲ- ಜಿಲ್ಲಾಧಿಕಾರಿ
----------------------------------
ತಾಲೂಕಿನ ೨೮ ಗ್ರಾಮಪಂಚಾಯತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಚಿಕ್ಕನಾಯಕನಹಳ್ಳಿಯ ಎಸ್‌ಎಲ್‌ಎನ್ ಚಿತ್ರಮಂದಿರದಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮಾತನಾಡಿದ ಇಂದಿನ ಆಯ್ಕೆ ಪ್ರಕ್ರಿಯೆಯು ಯಾವುದೇ ಒತ್ತಡ ಮತ್ತು ಶಿಫಾರಸುಗಳಿಗೆ ಒಳಗಾಗಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಅನ್ಯಾಯವಾಗಬಹುದೆಂಬ ಆತಂಕ ಯಾರಿಗೂ ಬೇಡ. ಎಲ್ಲರಿಗೂ ಅಧಿಕಾರದ ಆಸೆ ಇರುತ್ತದಾದರೂ ದೊರಕುವುದಿಲ್ಲ. ಕೆಲವರಿಗೆ ಅದೃಷ್ಟ ಹಾಗೂ ಸಂವಿಧಾನದ ಕಾನೂನು ಮೂಲಕ ಅವಕಾಶಗಳು ಸಿಗುತ್ತವೆ.
ತಾಲೂಕಿನ ಗ್ರಾಮಪಂಚಾಯತಿಗಳ ಅಧ್ಯಕ್ಷರು -ಉಪಾಧ್ಯಕ್ಷರ ಮೀಸಲು ನಿಗದಿ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ, ತಹಸೀಲ್ದಾರ್ ಕಾಮಾಕ್ಷಮ್ಮ ಮುಂತಾದವರಿದ್ದರು. |
ಎಲ್ಲ ವರ್ಗದವರಿಗೂ ಸಮಾನ ಅವಕಾಶ ದೊರೆಯಬೇಕೆಂಬ ಆಶಯದಿಂದ ಮೀಸಲು ನಿಗದಿ ಮಾಡುವಾಗ ಈ ಹಿಂದೆ ಬಂದಿರುವ ಮೀಸಲು ವರ್ಗವನ್ನು ಕೈಬಿಟ್ಟು ಆಯ್ಕೆ ಮಾಡಲಾಗಿದ್ದು ಇದರಿಂದ ಪದೇ ಪದೆ ಮೀಸಲು ಸೌಲಭ್ಯ ಪಡೆದವರೇ ಪಡೆಯುವುದಕ್ಕೆ ಅವಕಾಶವಿರುವುದಿಲ್ಲ
. ಚುನಾವಣಾ ಆಯೋಗದ ಮಾನದಂಡದಂತೆ ೨೮ ಗ್ರಾಮಪಂಚಾಯತಿಗಳಲ್ಲಿ ೧೪ ಮಹಿಳೆಯರಿಗೆ(೫೦%) ಪರಿಶಿಷ್ಟ ಜಾತಿಗೆ ೬( ೨೧%) ಪರಿಶಿಷ್ಟ ಪಂಗಡಕ್ಕೆ ೩ (೧೦%)ಹಿಂದುಳಿದ ವರ್ಗ, ಎ , ೪(೧೪%) ಹಾಗೂ ಹಿಂದುಳಿದ ವರ್ಗ, ಬಿ ೧,(೪%) ಮೀಸಲು ನಿಗದಿ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಪಕ್ಷಪಾತ ಮಾಡದೆ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆಯನ್ನು ನಿಮ್ಮ ಮುಂದೆ ಮಾಡಲಾಗುತ್ತದೆ ಎಂದರು.
ತಾಲೂಕಿನ ಗ್ರಾಮಪಂಚಾಯತಿಗಳ ಅಧ್ಯಕ್ಷರು -ಉಪಾಧ್ಯಕ್ಷರ ಮೀಸಲು ನಿಗದಿ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ, ತಹಸೀಲ್ದಾರ್ ಕಾಮಾಕ್ಷಮ್ಮ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ