ಹುಳಿಯಾರು ಪಟ್ಟಣದ ಶ್ರೀರೇಣುಕಾ ಎಲ್ಲಮ್ಮದೇವಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಚಿ.ನಾ.ಹಳ್ಳಿಯ ಬೆಳಸಿರಿ ಸೇವಾಟ್ರಸ್ಟ್ ವತಿಯಿಂದ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಯನ್ನು ವಿತರಿಸಲಾಯಿತು.
ಹುಳಿಯಾರಿನ ಶ್ರೀರೇಣುಕಾ ಎಲ್ಲಮ್ಮದೇವಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಚಿ.ನಾ.ಹಳ್ಳಿಯ ಬೆಳಸಿರಿ ಸೇವಾಟ್ರಸ್ಟ್ ವತಿಯಿಂದ ಶಾಲಾಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಯನ್ನು ವಿತರಿಸಲಾಯಿತು.
|
ಈ ವೇಳೆ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎಂ.ತ್ಯಾಗರಾಜ್ ಮಾತನಾಡಿ , ವಿದ್ಯಾರ್ಥಿಗಳ ಓದಿಗೆ ಪೂರಕವಾಗುವ ನಿಟ್ಟಿನಲ್ಲಿ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಿಸಿದ್ದು ಇವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವಂತೆ ತಿಳಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಟಿವಿ ವೀಕ್ಷಣೆಯ ಗೀಳು ಹೆಚ್ಚಿದ್ದು ಓದಿನಲ್ಲಿ ಹಿಂದುಳಿಯುತ್ತಿದ್ದಾರೆ. ವಿದ್ಯಾರ್ಥಿಗಳು ಅದಷ್ಟು ಟಿವಿಯ ಕಡೆ ಗಮನಗೊಡದೆ ಪ್ರತಿನಿತ್ಯ ಶಾಲೆಯಲ್ಲಿ ತಿಳಿಸುವ ವಿಚಾರಗಳನ್ನು ಅಭ್ಯಾಸಿಸಿ ಎಂದು ಕಿವಿಮಾತು ಹೇಳಿದರು.
ಈ ವೇಳೆ ಟ್ರಸ್ಟ್ ನ ಕಾರ್ಯದರ್ಶಿಹೆಚ್.ಟಿ.ರಾಜು, ಖಜಾಂಚಿ ಆರ್.ಗಂಗರಾಜು, ಎಸ್.ಬಿ.ಐ ಬ್ಯಾಂಕ್ ನ ಮಹೇಶ್ ,ಬೆಳಸಿರಿ ಟ್ರಸ್ಟ್ ನ ಸಿ.ಹೆಚ್.ನಾಗರಾಜ್, ಬೆಂಗಳೂರಿನ ಡಾ||ಜಿ.ಪುರುಷೋತ್ತಮ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ