ಹುಳಿಯಾರು ಹೋಬಳಿಯ ಮೇಲನಹಳ್ಳಿ ಗ್ರಾಮದವರಾದ ನಿವೃತ್ತ ಪೊಲೀಸ್ ಕೆಂಚಪ್ಪನವರು ಈ ಬಾರಿಯ ಚುನಾವಣೆಯಲ್ಲಿ ೨೯೫ ಮತಗಳನ್ನು ಪಡೆದು ಗಾಣಧಾಳು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸುಮಾರು 70 ವರ್ಷ ವಯಸ್ಸಿನ ಕೆಂಚಪ್ಪ ಪೊಲೀಸ್ ಪೇದೆಯಾಗಿ ಜಿಲ್ಲೆಯ ಕೊರಟಗೆರೆ, ತಿಪಟೂರು, ಕ್ಯಾತಸಂದ್ರ, ತುಮಕೂರು, ಚಿಕ್ಕನಾಯಕನಹಳ್ಳಿ, ಸಿರಾ ಪೊಲೀಸ್ ಠಾಣೆಗಳಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ 5 ವರ್ಷದ ಹಿಂದೆ ಆಗಿ ನಿವೃತ್ತಿಯಾಗಿದ್ದರು. ನಂತರ ತಮ್ಮ ಸ್ವಗ್ರಾಮದ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಗಾಣಧಾಳು ಗ್ರಾಮ ಪಂಚಾಯಿತಿಯ ಮೇಲನಹಳ್ಳಿ ಕ್ಷೇತ್ರದಿಂದ ಎಸ್ ಸಿ ಮೀಸಲು ಸ್ಥಾನದಿಂದ ಆಯ್ಕೆಯಾಗಿದ್ದಾರೆ. ನನಗೆ ರಾಜಕೀಯ ಕ್ಷೇತ್ರ ಹೊಸದು ಆದರೆ ಗ್ರಾಮೀಣ ಭಾಗದ ಜನರ ಸೇವೆ ಮಾಡುವ ಹಂಬಲದಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ