ಹುಳಿಯಾರು ಹೋಬಳಿ ತಿರುಮಲಾಪುರದಲ್ಲಿ ಭಾನುವಾರದಂದು ಸುರಿದ ಗಾಳಿ ಸಹಿತ ಮಳೆಗೆ ಮನೆಯೊಂದರ ಗೋಡೆಕುಸಿದರೆ ಮತ್ತೊಂದು ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟ್ ಗಳು ಹಾರಿದ್ದು ಸಾವಿರಾರು ರೂ ನಷ್ಟವಾಗಿದೆ.
ತಿರುಮಲಾಪುರದ ಟಿ.ಎನ್.ಸತ್ಯನಾರಾಯಣ ಅವರು ಹೊಲದಲ್ಲಿ ಕಟ್ಟಿಕೊಂಡಿದ್ದ ಮನೆಯ ಛಾವಣಿಯ ೧೦ ಕ್ಕೂ ಅಧಿಕ ಶೀಟ್ ಗಳು ಗಾಳಿಯ ರಭಕ್ಕೆ ಹಾರಿ ನೆಲಕ್ಕೆ ಬಿದ್ದು ಪುಡಿಯಾಗಿ ಸೂರಿನ ಸಮಸ್ಯೆ ತಲೆದೋರಿದೆ..ಅದೇ ದಿನ ರಾತ್ರಿ ಗ್ರಾಮದಲ್ಲಿನ ಟಿ.ಎನ್.ನರಸಿಂಹಮೂರ್ತಿ ಅವರ ಮನೆಯ ಗೋಡೆ ಸಹ ಕುಸಿದು ಬಿದ್ದಿದೆ. ಮನೆಯ ಹೊರಭಾಗಕ್ಕೆ ಗೋಡೆ ಬಿದಿದ್ದರಿಂದ ಮನೆ ಒಳಗೆ ಮಲಗಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಗ್ರಾಮಲೆಕ್ಕಿನ ಸುಬ್ಬರಾಯಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ