ಹುಳಿಯಾರು ಪಟ್ಟಣದ ಕಾಮನಬಿಲ್ಲು ಫೌಂಡೇಷನ್ ವತಿಯಿಂದ ಪಟ್ಟಣದ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಉರ್ದು ಫ್ರೌಢಶಾಲೆ, ಇಂದಿರಾಗಾಂಧಿ ಪ್ರಾಥಮಿಕ ಶಾಲೆ, ಕನಕದಾಸ ಪ್ರಾಠಮಿಕ ಶಾಲೆ, ಕೇಶವಾ ವಿದ್ಯಾಮಂದಿರ, ಮಾರುತಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು.
ಶಾಲಾಮಕ್ಕಳು ತಾವು ಪಡೆದ ನೋಟ್ ಬುಕ್ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಹಾಗೂ ಉತ್ತಮವಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವ ಮೂಲಕ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತನ್ನಿ ಎಂದು ಫೌಂಡೇಷನ್ನ ಅಧ್ಯಕ್ಷ ಚನ್ನಕೇಶವ ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ವೇಳೆ ಫೌಂಡೇಷನ್ನ ಪದಾಧಿಕಾರಿಗಳಾದ ಸ್ಟುಡಿಯೋ ರವಿ, ಕಂಪನಹಳ್ಳಿ ಪ್ರಕಾಶ್, ಕೋಳಿಶ್ರೀನಿವಾಸ್, ಚೇತನ್,ಚನ್ನಬಸವಯ್ಯ,ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ