ಹುಳಿಯಾರು ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಬುಧವಾರದಂದು ಮೊಡೆಮ್ ಕೆಟ್ಟು ಹೋದ ಪರಿಣಾಮ ನೆಟ್ ವರ್ಕ ಸಮಸ್ಯೆ ಉಂಟಾಗಿ ಯಾವುದೇ ವಹಿವಾಟು ನಡೆಯದೆ ಬ್ಯಾಂಕ್ ಗೆ ಬಂದ ಗ್ರಾಹಕರು ವಾಪಸ್ಸ್ ಹಿಂತಿರುಗುವಂತಾಗಿತ್ತು.
ಕಳೆದೊಂದು ವಾರದ ಹಿಂದೆ ಪಟ್ಟಣದಲ್ಲಿ ಮಳೆ ಸುರಿದಾಗ ಸಿಡುಲುಂಟಾದ ಪರಿಣಾಮ ಪಟ್ಟಣದಲ್ಲಿನ ಕೆಲ ಬಿಎಸ್.ಎನ್.ಎಲ್ ಮೊಡೆಮ್ ಗಳು ಸ್ಥಗಿತಗೊಂಡಿದ್ದವು. ಅಂತೆಯೇ ಬ್ಯಾಂಕ್ ಗಳಲ್ಲೂ ಸಹ ಅಂದಿನಿಂದಲೂ ನೆಟ್ ವರ್ಕ್ ಸಮಸ್ಯೆ ಉಂಟಾಗುತ್ತಿತ್ತು. ಕೆಲ ಸಮಯ ನೆಟ್ ವರ್ಕ್ ಸಿಗುತ್ತಿದ್ದು ಮತ್ತೆ ನೆಟ್ ವರ್ಕ್ ಇಲ್ಲದಂತಾಗುತ್ತಿತ್ತು. ಬ್ಯಾಂಕ್ ಗೆ ಅಳವಡಿಸಿದ್ದ ಬಿಎಸ್.ಎಲ್.ಎಲ್ ಮೊಡಮ್ ಬುಧವಾರದಂದು ಸಂಪೂರ್ಣವಾಗಿ ಕೆಟ್ಟು ಹೋಗಿದ್ದರ ಪರಿಣಾಮವಾಗಿ ನೆಟ್ ವರ್ಕ್ ಸಿಗದೆ ಕಂಪ್ಯೂಟರ್ ಗಳೆಲ್ಲಾ ಸ್ಥಗಿತಗೊಂಡು, ಸಿಬ್ಬಂದಿಯವರು ಕೈಕಟ್ಟಿಕೂರುವಂತಾಗಿತ್ತು.
ಎಂದಿನಂತೆ ಹಣಕಟ್ಟಲು, ಬಿಡಿಸಲು ಹಾಗೂ ಆಕೌಂಟ್ ಮಾಡಿಸಲು ಬಂದ ಗ್ರಾಹಕರು ಯಾವುದೇ ಕೆಲಸವಾಗದೆ ವಾಪಸ್ಸ್ ಹಿಂತಿರುಗುವಂತಾಯಿತು. ಮಧ್ಯಾಹ್ನದ ವೇಳೆಗೆ ಸರಿಯಾಗುತ್ತದೆನೋ ಎಂದು ಕೆಲ ಗ್ರಾಹಕರು ಕಾದು ಕುಳಿತರೂ ಸಹ ಯಾವುದೇ ಪ್ರಯೋಜವಾಗಲಿಲ್ಲ.
ಬ್ಯಾಂಕ್ ನಲ್ಲಿ ಅಳವಡಿಸಿದ್ದ ಮೊಡೆಮ್ ಕೆಟ್ಟುಹೋಗಿರುವ ಬಗ್ಗೆ ತಾವು ಮೇಲಾಧಿಕಾರಿಗಳಿಗೆ ತಿಳಿಸಿದ್ದು ಸರಿ ಪಡಿಸುವ ಕಾರ್ಯ ಮಾಡಿಸುತ್ತಿದ್ದೇವೆ. ಮಳೆ, ಸಿಡಿಲು ಹಾಗೂ ಮೊಡಮುಸುಕಿದ ವಾತಾವರಣದಿಂದಾಗಿ ಈ ಸಮಸ್ಯೆಯಾಗಿದ್ದು ಶೀಘ್ರವೇ ಸರಿಪಡಿಸುತ್ತೇವೆ. ಎಂದಿನಂತೆ ವಹಿವಾಟು ನಡೆಯಲಿದ್ದು ಗ್ರಾಹಕರು ಸಹಕರಿಸುವಂತೆ ಶಾಖೆಯ ವ್ಯವಸ್ಥಾಪಕ ವಿಜಯ್ ಕುಮಾರ್ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ