ಎಲ್ಲೆಡೆ ಕುತೂಹಲ ಮೂಡಿಸಿದ್ದ ಹುಳಿಯಾರು ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದಿದ್ದು , ಇಷ್ಟು ದಿನ ಯಾರು ಗೆಲ್ಲುತ್ತಾರೆ, ಸೋಲುತ್ತಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಮುಂಜಾನೆ ೮ ಗಂಟೆಯಿಂದ ಚಿ.ನಾ.ಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಮತಎಣಿಕೆ ಪ್ರಾರಂಭವಾಗಿದ್ದು ಸಂಜೆಯಾದರೂ ಮತಎಣಿಕೆ ಮುಂದುವರೆದಿತ್ತು. ಹುಳಿಯಾರಿನ ಒಟ್ಟು ೧೩ ಬ್ಲಾಕ್ ಗಳಿಗೆ ೧೬೨ ಮಂದಿ ಸ್ಪರ್ಧಿಸಿದ್ದರಿಂದ ಸಂಜೆ ೬ ರವರೆಗೆ ೮ ಬ್ಲಾಕ್ ನ ಮತಎಣಿಕೆ ಮಾತ್ರ ಮುಗಿದಿತ್ತು.
ಹುಳಿಯಾರು ಗ್ರಾ.ಪಂ.ಯ ವಿವಿಧ ಬ್ಲಾಕ್ ಗಳ ಮತ ಎಣಿಕೆ ಕಾರ್ಯ ಚಿ.ನಾ.ಹಳ್ಳಿಯಲ್ಲಿ ಶುಕ್ರವಾರ ನಡೆಯಿತು. |
1 ನೇ ಬ್ಲಾಕ್ ನ ೨ ಸ್ಥಾನಕ್ಕೆ ( ಎಸ್.ಸಿ ೧ , ಸಾಮಾನ್ಯ ೧ ) ಒಟ್ಟು ೧೮ ಮಂದಿ ಸ್ಪರ್ಧಿಸಿದ್ದು ಎಲ್.ಆರ್.ಚಂದ್ರಶೇಖರ್ (160ಮತ, ಸಾಮಾನ್ಯ ) ಹಾಗೂ ಗಣೇಶ್ (125 ಮತ, ಎಸ್.ಸಿ) ಜಯಗಳಿಸಿದ್ದಾರೆ. 2 ನೇ ಬ್ಲಾಕ್ ನ ೨ ಸ್ಥಾನಕ್ಕೆ (ಸಾಮಾನ್ಯ ,ಬಿಸಿಎಂ-ಎ ಮಹಿಳೆ) ಒಟ್ಟು ೯ ಮಂದಿ ಸ್ಪರ್ಧಿಸಿದ್ದು ಸೈಯ್ಯದ್ ಜಬೀಉಲ್ಲಾ (230 ಮತ, ಸಾಮಾನ್ಯ ) ಸಿದ್ದಗಂಗಮ್ಮ (158 ಮತ ಬಿಸಿಎಂ-ಎ) ಗೆದ್ದರೆ. 3 ನೇ ಬ್ಲಾಕ್ ನ ೩ ಸ್ಥಾನಕ್ಕೆ( ಎಸ್.ಸಿ ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ) ಒಟ್ಟು ೧೨ ಮಂದಿ ಸ್ಪರ್ಧಿಸಿದ್ದು ಗೀತಾ (332), ನೂರ್ ಜಾನ್ ಬೀ (235), ರೇಣುಕಮ್ಮ (175) ವಿಜೇತರಾಗಿದ್ದಾರೆ. 4 ನೇ ಬ್ಲಾಕ್ ನ ೨ ಸ್ಥಾನಕ್ಕೆ (ಬಿಸಿಎಂ-ಎ , ಸಾಮಾನ್ಯ) ಒಟ್ಟು ೬ ಮಂದಿ ಸ್ಪರ್ಧಿಸಿದ್ದು ಶಂಕರ್ (255) ಧನುಷ್ ರಂಗನಾಥ್ (238) ಜಯಗಳಿಸಿದ್ದಾರೆ. 6 ನೇ ಬ್ಲಾಕ್ ನ ೩ ಸ್ಥಾನಕ್ಕೆ(ಬಿಸಿಎಂ-ಎ , ಸಾಮಾನ್ಯ ಮಹಿಳೆ, ಸಾಮಾನ್ಯ) ಒಟ್ಟು ೧೦ ಮಂದಿ ಸ್ಪರ್ಧಿಸಿದ್ದು ಕೋಳಿಶ್ರೀನಿವಾಸ್ (273), ರಾಘವೇಂದ್ರ (26೦), ಎಚ್.ಅರ್.ದುರ್ಗಮ್ಮ (169), 7 ನೇ ಬ್ಲಾಕ್ ನ ೩ ಸ್ಥಾನಕ್ಕೆ (ಬಿಸಿಎಂ-ಎ, ಸಾಮಾನ್ಯ, ಸಾಮಾನ್ಯ ಮಹಿಳೆ) ಒಟ್ಟು ೧೦ ಮಂದಿ ಸ್ಪರ್ಧಿಸಿದ್ದು ಪಟಾಕಿಶಿವಣ್ಣ (239), ಹೇಮಂತ್ (307), ಜೆ.ಇಂದ್ರಕಲಾ (201), ೮ ನೇ ಬ್ಲಾಕ್ ೪ ಸ್ಥಾನಕ್ಕೆ (ಸಾಮಾನ್ಯ, ಸಾಮಾನ್ಯ ಮಹಿಳೆ, ಬಿಸಿಎಂ-ಎ ಮಹಿಳೆ, ಬಿಸಿಎಂ-ಬಿ ಮಹಿಳೆ)ಒಟ್ಟು ೯ ಮಂದಿ ಸ್ಪರ್ಧಿಸಿದ್ದು ಪುಟ್ಟರಾಜು ಬಡ್ಡಿ (677), ಕೆಂಪಮ್ಮ (254), ಮಾಮಾಜಿಗ್ನಿ (236), ಜಯಮ್ಮ (121) ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿ ನಡೆದಿದ್ದ ೫ ನೇ ಬ್ಲಾಕ್ ನಲ್ಲಿ ಇಬ್ಬರೂ ಸ್ಪರ್ಧಿಗಳು ಸಮಾನವಾಗಿ ಮತಪಡೆದಿದ್ದಾರೆಂದು ಘೋಷಣೆಯಾಗುತ್ತಿದ್ದಂತೆ ಇಡಿಸಿ ಮತದ ಗೊಂದಲವೇರ್ಪಟ್ಟು ಮರು ಎಣಿಕೆಗೆ ಮುಂದಾಗಿದ್ದಾರೆ.
ಹುಳಿಯಾರು ಗ್ರಾಮ ಪಂಚಾಯ್ತಿಯ ಪ್ರಥಮವಾಗಿ ಪ್ರಕಟಗೊಂಡ ಎರಡನೇ ಬ್ಲಾಕ್ ನ ಅಭ್ಯರ್ಥಿ ಸೈಯದ್ ಜಬೀಉಲ್ಲಾ ಅವರು ತಮ್ಮ ಬೆಂಬಲಿಗರೊಂದಿಗೆ ಸಂಭ್ರಮಿಸಿದ ಕ್ಷಣ. |
ಇನ್ನುಳಿದ ಬ್ಲಾಕ್ ಗಳ ಮತಎಣಿಕೆ ಸಂಜೆಯ ನಂತರವೂ ಮುಂದುವರೆದಿದ್ದು ರಾತ್ರಿ ವೇಳೆಗೆ ಫಲಿತಾಂಶ ಹೊರಬೀಳಲಿದೆ.. ವಿಜೇತರಾಗಿದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಂತಮ್ಮ ಬ್ಲಾಕ್ ಗಳಲ್ಲಿ ಮೆರವಣಿಗೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಹುಳಿಯಾರು ಗ್ರಾ.ಪಂ.ಯ ಸದಸ್ಯರಾಗಿ 6 ನೇ ಬ್ಲಾಕ್ ನಿಂದ ಇದೇ ಪ್ರಥಮಬಾರಿಗೆ ಆಯ್ಕೆಯಾದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೋಳಿ ಶ್ರೀನಿವಾಸ್ ಅವರನ್ನು ಕರವೇ ಕಾರ್ಯಕರ್ತರು ಅಭಿನಂಧಿಸಿದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ