ಮಲೇರಿಯಾ ರೋಗ ಸಾಂಕ್ರಾಮಿಕ ರೋಗವಾಗಿದ್ದು,ಪ್ಲಾಸ್ಮೋಡಿಯಾ ಎಂಬ ಪರಾವಲಂಬಿ ಸೂಕ್ಷ್ಮಾಣು ಜೀವಿಯಾದ ಸೊಳ್ಳೆಯಿಂದ ಬರುವ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಅಗತ್ಯವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಎನ್.ಎಂ.ಶಿವಕುಮಾರ್ ತಿಳಿಸಿದರು.
ಅವರಿಂದು ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಸೊಳ್ಳೆಗಳ ನಿಂಯತ್ರಣಕ್ಕಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆರಿಗೆ ಮಾರ್ಗದರ್ಶನ ನೀಡಿ ಮಾತನಾಡುತ್ತಿದ್ದರು.
ಮಲೇರಿಯಾ ಮಾನವನನ್ನು ಬಹುವಾಗಿ ಕಾಡುವ ರೋಗವಾಗಿದ್ದು,ಎಚ್ಚರ ವಹಿಸಿದರೆ ನಿಯಂತ್ರಣ ಸುಲಭಸಾಧ್ಯ.ನಿಂತನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಬರುವ ರೋಗ ಇದಾಗಿರುವುದರಿಂದ,ಅವುಗಳ ನಾಶ್ಕಕೆ ಕೈಗೊಳ್ಳುವ ಮುಂಜಾಗ್ರತೆಯಿಂದ ರೋಗ ಹರಡುವುದನ್ನು ತಪ್ಪಿಸಬಹುದು..ಮುಖ್ಯವಾಗಿ ನಿಂತನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಮಾನವರಿಗೆ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ.ಸಿಬ್ಬಂದಿಯ ಕೊರತೆಯಿಂದ ಪಟ್ಟಣದಲ್ಲಿ ಇದುವರೆಗೆ ಪರಿಣಾಮಕಾರಿಯಾಗಿ ಸೊಳ್ಳೆಗಳ ನಿಯಂತ್ರಣ ಕಾರ್ಯವನ್ನು ಕೈಗೊಳ್ಳುವಲ್ಲಿ ಹಿನ್ನೆಡೆಯಾಗಿದ್ದು,ಗ್ರಾಮೀಣ ಭಾಗದ ಆಶಾ ಕಾರ್ಯಕರ್ತೆಯರ ಮೂಲಕ ಪಟ್ಟಣದ ೫೫೦೦ ಮನೆಗಳಿಗೆ ಭೇಟಿ ನೀಡಿ ನೀರಿಗೆ ದ್ರಾವಣ ಹಕಲಾಗುವುದು.
ಕಾಯರ್ಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ವೈದ್ಯಾಧಿಕಾರಿ ಸಿ.ಎಂ.ಜಗದೀಶ್‌ರವರು ಮಾತನಾಡಿ ಆಶಾ ಕಾಯರ್ಕರ್ತೆಯರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಎಂದು ನುಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ