ಹುಳಿಯಾರು ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ಆಂಜನೇಯಸ್ವಾಮಿಯ ಕುಂಭಾಭಿಷೇಕ ಕಾರ್ಯ ಹಾಗೂ ೪೮ ದಿನದ ಮಂಡಲ ಪೂಜೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಮಲ್ಲಿಕಾರ್ಜುನದೇಶಿಕೇಂದ್ರ ಮಹಾಸ್ವಾಮಿ ಅವರ ಸಮ್ಮುಖದಲ್ಲಿ ಜರುಗಿತು.
ಕಂಪನಹಳ್ಳಿ ಆಂಜನೇಯಸ್ವಾಮಿಗೆ ಕುಂಭಾಭಿಷೇಕದ ಅಂಗವಾಗಿ ಮಾಡಿದ್ದ ವಿಶೇಷ ಅಲಂಕಾರ. |
ಕುಂಭಾಭಿಷೇಕದ ಅಂಗವಾಗಿ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೊಲ್ಲರಹಟ್ಟಿ ಕರಿಯಮ್ಮ ದೇವರುಗಳ ಉಪಸ್ಥಿತಿಯಲ್ಲಿ ಗಂಗಾಪೂಜೆ,ಪೂರ್ಣಕುಂಭಪೂಜೆ, ಮಹಾಗಣಪತಿ ಪೂಜೆ ನಡೆದು ನಂತರ ಆಂಜನೇಯಸ್ವಾಮಿಗೆ ಕುಂಭಾಭಿಷೇಕ ಹಾಗೂ ನೂತನ ಶಿಖರಕ್ಕೆ ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ನಡೆಸಲಾಯಿತು. ಮಹಾಮಂಗಳಾರತಿಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಂಪನಹಳ್ಳಿ,ಹುಳಿಯಾರು,ಕೆಂಕೆರೆ ಸುತ್ತಮುತ್ತಲಿನ ಭಾಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದರು.ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ