ಹುಳಿಯಾರು ಹೋಬಳಿಯ ಚಿಕ್ಕಬಿದರೆ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಪರಿಸರ ಮಾಹಿತಿ ಕಾರ್ಯಾಗಾರ ಜರುಗಿತು.
ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳಲ್ಲಿ ಇಂದಿಗೂ ಪರಿಸರ ಸಂರಕ್ಷಣೆಯ ಮಹತ್ವ ಅರಿಯದಿರುವುದು ವಿಷಾದನೀಯ ಎಂದರು. ಹಳ್ಳಿಗಳಲ್ಲಿ ಇಂದು ಕೆರೆಕಟ್ಟೆಗಳು ಮಾಯವಾಗಿ ಪ್ರತಿಯೊಬ್ಬರು ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದು , ಜೀವಜಲ ಬತ್ತಿದಲ್ಲಿ ಗತಿಯೇನು ಯೋಚಿಸದಿರುವುದು ದುರಂತ. ಇಲ್ಲಿ ಗುಡ್ಡಕ್ಕೆ ಬೆಂಕಿ ಇಟ್ಟರು ಪ್ರಶ್ನಿಸದೆ, ಮರಕಡಿದರೂ ಕೇಳದೆ ಪರಿಸರ ನಾಶದ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಈ ಬಗ್ಗೆ ಸ್ವಯಂಸೇವಾ ಸಂಘಟನೆಗಳು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು. ಶಾಲೆಯ ಕಾರ್ಯದರ್ಶಿ ಚಿಕ್ಕಬಿದರೆ ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ರಾಮಲಿಂಗಯ್ಯ,ಒಕ್ಕೂಟದ ಅಧ್ಯಕ್ಷ ಮುದ್ದಣ್ಣ, ಕೃಷಿ ಅಧಿಕಾರಿ ಗೋಪಿ, ಮೇಲ್ವಿಚಾರಕ ಸುರೇಶ್ ಸೇರಿದಂತೆ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ