ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಅಯಾತಪ್ಪಿ ಬಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹುಳಿಯಾರು ಸಮೀಪದ ತಿಮ್ಮನಹಳ್ಳಿ ಬಳಿಯ ಪೆಟ್ರೋಲ್ ಬಂಕ್ ಬಳಿ ಸೋಮವಾರ ಘಟಿಸಿದೆ.
ಮೃತ ವ್ಯಕ್ತಿ ದೊಡ್ಡಬೆಳವಾಡಿ ಗ್ರಾಮದ ಮರಿಯಪ್ಪ(೪೦) . ಈತ ತನ್ನ ಕುಟುಂಬ ಸಮೇತ ತಿಮ್ಮನಹಳ್ಳಿಯ ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿದ್ದ್ಯ್, ಗೃಹಪ್ರವೇಶ ಮುಗಿಸಿಕೊಂಡು ಹಿಂತಿರುಗುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ರ್ಯಾಕ್ಟರ್ ಗೆ ಹತ್ತಿದ್ದಾನೆ. ರಸ್ತೆಯಲ್ಲಿ ಉಬ್ಬುತಗ್ಗು ಗುಂಡಿಗಳಿದಿದ್ದರಿಂದ ಟ್ಯಾಕ್ಟರ್ ಮೇಲಿದ್ದ ಈತ ಅಯಾತಪ್ಪಿ ಕೆಳಗೆ ಬಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಈತನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಸಿಪಿಐ ಮಾರಪ್ಪ, ಪಿಎಸೈ ಬಿ.ಪ್ರವೀಣ್ ಕುಮಾರ್ ಭೇಟಿನೀಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ