ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಭಾನುವಾರ ರಾತ್ರಿ ಗಾಳಿ ಸಹಿತ ಮಳೆಯಾಗಿದ್ದು ಮಳೆಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದ್ದು ಸೋಮವಾರ ದಿನಪೂರ್ತಿ ಪಟ್ಟಣದಲ್ಲಿ ಕರೆಂಟ್ ಇಲ್ಲದೆ ಜನ ಪರದಾಡುವಂತಾಗಿತ್ತು.
ಮಂಗಳವಾರ ಗ್ರಾಮ ಪಂಚಾಯ್ತಿಯ ಚುನಾವಣೆಯ ಮತದಾನವಿದ್ದು ಸೋಮವಾರ ಮತಗಟ್ಟೆಗೆ ಆಗಮಿಸಿದ್ದ ಸಿಬ್ಬಂದಿಯವರು ವಿದ್ಯುತ್ ಇಲ್ಲದೆ ಪರದಾಡಿದರು. ಮೊಬೈಲ್ ಚಾರ್ಚ್ ಮಾಡಲು ಸಹ ವಿದ್ಯುತ್ ಇಲ್ಲದೆ ನೂರಾರು ಮೊಬೈಲ್ ಸ್ವಿಚ್ ಆಪ್ ಆಗಿದ್ದವು. ಕೆರೆಂಟ್ ಇಲ್ಲದ ಕಾರಣ ಪಟ್ಟಣದ ಕೆಲ ಹೊಟೆಲ್ ಗಳಲ್ಲಿ ವ್ಯವಹಾರವೂ ವಿರಳವಾಗಿದ್ದು, ಕೆಲ ಹೋಟೆಲ್ ನವರು ಬಾಗಿಲು ಮುಚ್ಚಿದ್ದರು. ವಿದ್ಯುತ್ ಇಲ್ಲದೆ ಮನೆಗಳಲ್ಲಿ ಬಳಕೆನೀರು ಹಾಗೂ ಕುಡಿಯುವ ನೀರಿಗಾಗಿ ಸಾರ್ವಜನಿಕರು ಯಾವಾಗ ಕರೆಂಟ್ ಬರುತ್ತೆಂದು ಜಾತಕಪಕ್ಷಿಯಂತೆ ಕಾಯುತ್ತಿದ್ದರು.
ಪಟ್ಟಣದಲ್ಲಿ ವಿದ್ಯುತ್ ಇಲ್ಲದೆ ಹಿಟ್ಟಿನಗಿರಣಿ, ಸಾಮಿಲ್, ಲೇತ್ ವರ್ಕ್ಸ್, ವೆಲ್ಡಿಂಗ್ ಶಾಪ್, ಪೆಟ್ರೋಲ್ ಬಂಕ್,ನಾರಿನ ಮಿಲ್, ಕುಡಿಯುವ ನೀರಿನ ಡಾಕ್ಟರ್ ವಾಟರ್ ಪ್ಲಾಂಟ್ ಸಹ ಸ್ಥಗಿತಗೊಂಡಿದ್ದವು.
ಸೋಮವಾರ ಸಂಜೆ ಕಳೆದರೂ ಸಹ ಕರೆಂಟ್ ಬಾರೆಯಿದ್ದು ಜನರನ್ನು ಕಂಗಾಲಾಗುವಂತೆ ಮಾಡಿತ್ತು. ರಾತ್ರಿಯೂ ಕರೆಂಟ್ ಬಾರದೆಯಿದ್ದರೆ ಏನು ಮಾಡುವುದು ಎಂಬ ಆತಂಕರ ಸಾರ್ವಜನಿಕರಲ್ಲಿ ಮನೆ ಮಾಡಿತ್ತು.
ಕೆ.ಬಿ.ಕ್ರಾಸ್ ನಿಂದ ಹುಳಿಯಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ದೊಡ್ಡ ವಿದ್ಯುತ್ ಲೈನ್ ಗೆ ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿ ಬಳಿಯ ವಿದ್ಯುತ್ ಕಂಬಕ್ಕೆ ಸಿಡಿಲು ಬಡಿದ ಪರಿಣಾಮ ಹುಳಿಯಾರಿಗೆ ಸಂಪರ್ಕ ಕಲ್ಪಿಸುವ ಲೈನ್ ತುಂಡಾಗಿದೆ. ತುಮಕೂರಿನಿಂದ ಕೆಲಸಗಾರರು ಬಂದಿದ್ದು ದುರಸ್ಥಿಕಾರ್ಯ ನಡೆಯುತ್ತಿದ್ದು ರಾತ್ರಿ ಒಳಗಾಗಿ ವಿದ್ಯುತ್ ವ್ಯವಸ್ಥೆ ಸರಿಯಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಕ್ಷನ್ ಅಫೀಸರ್ ಹೆಚ್.ಜಿ.ಮೂರ್ತಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ