ಹುಳಿಯಾರು ಗ್ರಾಮ ಪಂಚಾಯ್ತಿಯ ಸದಸ್ಯರಾಗಿ ಸತತ ಮೂರನೇ ಬಾರಿ ಆಯ್ಕೆಯಾಗುವ ಮೂಲಕ ೮ ನೇ ಬ್ಲಾಕ್ ನ ಬಡ್ಡಿಪುಟ್ಟರಾಜು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಬಡ್ಡಿಪುಟ್ಟಣ್ಣ ಎಂದೇ ಖ್ಯಾತಿ ಪಡೆದಿರುವ ಇವರು ೨೦೦೫ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ೨೦೧೦ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಎಲ್ಲಾ ಸದಸ್ಯರಿಗಿಂತ ಹೆಚ್ಚು ಮತಗಳನ್ನು ತಮ್ಮ ತೆಕ್ಕೆಗೆ ಹಾಕಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಪಂಚಾಯ್ತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ೮ ನೇ ಬ್ಲಾಕ್ ನಲ್ಲಿ ಒಟ್ಟು ೧೦೨೫ ಮತದಾರರಿದ್ದು ೭೩೬ ಮತದಾರರು ಮತ ಚಲಾವಣೆ ಮಾಡಿದ್ದರು. ಈ ಪೈಕಿ ಚಲಾವಣೆಯಾದ ಮತಗಳಲ್ಲಿ ೬೭೭ ಮತಗಳನ್ನು ಪಡೆಯುವ ಮೂಲಕ ಗ್ರಾ.ಪಂ. ಇತರ ಎಲ್ಲಾ ಸದಸ್ಯರಿಗಿಂತ ಹೆಚ್ಚು ಮತ ಪಡೆದ ಅಭ್ಯರ್ಥಿಯಾಗಿದ್ದಾರೆ.ಇವರ ಪ್ರತಿ ಸ್ಪರ್ಧಿಯಾಗಿದ್ದ ಸಿದ್ದರಾಮಯ್ಯ(೯೧ಮತ) ಹಾಗೂ ಸೈಯದ್ ಹಮೀದ್(೭೧ಮತ) ಪಡೆಯಲಷ್ಟೇ ಶಕ್ತರಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ