ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಳೆಯ ಸದಸ್ಯರುಗಳ ಪೈಕಿ ೧೧ ಮಂದಿಯನ್ನು ಮಾತ್ರ ಪುರಸ್ಕರಿಸಿರುವ ಮತದಾರ ಹೊಸಮುಖಗಳಿಗೆ ಒತ್ತು ನೀಡಿರುವುದು ವಿಶೇಷವೆನಿಸಿದೆ. ಶೇಕಡವಾರು ಮತದಾನದಲ್ಲಿ ೧೨ ನೇ ಬ್ಲಾಕ್ ನಲ್ಲಿ ಶೇ.೯೨.೪ ರಷ್ಟು ಮತದಾನವಾಗಿರುವುದು ಗರಿಷ್ಟವಾಗಿದ್ದರೆ, ೮ ನೇ ಬ್ಲಾಕ್ ನಲ್ಲಿ ಶೇ.೭೧.೮೦ ಮತದಾನವಾಗಿರುವುದು ಕನಿಷ್ಟವಾಗಿದೆ.
ದಾಖಲೆ ಮತಗಳನ್ನು ಪಡೆದು ಆಯ್ಕೆಯಾದ ಬಡ್ಡಿಪುಟ್ಟರಾಜು(೬೭೭ಮತ) |
ಗರಿಷ್ಠ ಹಾಗೂ ಹೆಚ್ಚಿನ ಅಂತರದ ಮತ ಪಡೆದವರಲ್ಲಿ ೮ ನೇ ಬ್ಲಾಕಿನ ಎಸ್.ಪುಟ್ಟರಾಜು ದಾಖಲೆ ಮಾಡಿದ್ದು. ಇವರು ಸರಾಸರಿ ಶೇ.೯೨ ರಷ್ಟು ಮತಗಳಿಸಿದ್ದಾರೆ. ೮ನೇಬ್ಲಾಕಿನಲ್ಲಿ ಒಟ್ಟು ೭೩೬ ಮತ ಚಲಾವಣೆಯಾಗಿದ್ದು ಆ ಪೈಕಿ ಇವರು ೬೭೭ ಮತಗಳನ್ನು ಪಡೆದಿರುವುದು ದಾಖಲೆ ಎನ್ನಲಾಗಿದೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿದ್ಧರಾಜು (91) ಅವರಿಗಿಂತ 586 ಭಾರಿ ಅಂತರಗಳಷ್ಟು ಮತಗಳಿಂದ ಪಡೆದು ಜಯಗಳಿಸಿದ್ದಾರೆ.೧೦ ನೇಬ್ಲಾಕಿನ ಅಹಮದ್ ಖಾನ್ ಚಲಾವಣೆಯಾದ ೧೧೮೭ ಮತಗಳ ಪೈಕಿ ೩೮೧ ಮತಗಳಿಸುವ ಮೂಲಕ ಶೇ.೩೨.೦೯ ಮತಪಡೆದಿರುವುದು ಕನಿಷ್ಟವಾಗಿದೆ.
ಈ ಬಾರಿ ಆಯ್ಕೆಯಾಗಿರುವವರಲ್ಲಿ ಎಸ್.ಪುಟ್ಟರಾಜು, ಎಚ್.ಆರ್.ರಂಗನಾಥ್(ಧನುಷ್), ಡಿ.ಸಿದ್ದಗಂಗಮ್ಮ, ಪಟಾಕಿ ಶಿವಣ್ಣ, ಪುಟ್ಟಮ್ಮ, ಡಿಶ್ ಬಾಬು, ಎನ್. ಹೇಮಂತ್ ಕುಮಾರ್, ಹೆಚ್.ಎನ್. ರಾಘವೇಂದ್ರ, ಎಸ್.ಶಶಿಕಲಾ ,ಗೀತಾ ಅಶೊಕ್ ಬಾಬು ಹಾಗೂ ಅಹಮದ್ ಖಾನ್ ಅವರುಗಳು ಕಳೆದ ಚುನಾವಣೆಯಲ್ಲೂ ಸಹ ಸದಸ್ಯರಾಗಿ ಆಯ್ಕೆಯಾಗಿದ್ದರು.
ಕಳೆದ ಬಾರಿ ೩೩ ಸದಸ್ಯರ ಪೈಕಿ ೧೩ ಜನ ಮುಸ್ಲಿಂ ಸದಸ್ಯರೇ ಕೂಡಿದ್ದರೆ ಈ ಬಾರಿ ೩೯ ಸದಸ್ಯರುಗಳಲ್ಲಿ ಅವರುಗಳ ಸಂಖ್ಯೆ ೭ ಕ್ಕಿಳಿದಿದೆ. ಮಹಿಳಾ ಸದಸ್ಯರು ೨೦ ಮಂದಿ ಹಾಗೂ ಪುರುಷ ಸದಸ್ಯರು ೧೯ ಮಂದಿಯಿಂದ ಕೂಡಿದೆ.
ಒಟ್ಟು ೩೯ ಸದಸ್ಯರ ಒಂದು ಗ್ರಾಮ ಪಂಚಾಯ್ತಿಗೆ ಆಯ್ಕೆಯಾದವರು ಪಟ್ಟಿ ಹೀಗಿದೆ.
1ನೇ ಬ್ಲಾಕ್‌ನಲ್ಲಿ ಎಲ್.ಆರ್.ಚಂದ್ರಶೇಖರ್ (160 ಮತ), ಗಣೇಶ್ (125)
2ನೇ ಬ್ಲಾಕ್‌ನಲ್ಲಿ ಜಬೀಉಲ್ಲಾ (230), ಡಿ.ಸಿದ್ಧಗಂಗಮ್ಮ(158)
3ನೇ ಬ್ಲಾಕ್‌ನಲ್ಲಿ ಎಚ್.ಎಸ್.ಗೀತಾ (332), ನೂರ್‌ಜಾನ್‌ಬೀ (334), ರೇಣುಕಮ್ಮ (175)
4ನೇ ಬ್ಲಾಕ್‌ನಲ್ಲಿ ಎಚ್.ಆರ್.ಶಂಕರ್ (255), ಎಚ್.ಆರ್.ರಂಗನಾಥ್ (239)
5ನೇ ಬ್ಲಾಕ್‌ನಲ್ಲಿ ಎಸ್.ಎಸ್.ದಯಾನಂದ್ (419), ಗೀತಾಬಾಬು (50೩), ನಗೀನಾಬಾನು (257), ರಂಗಮ್ಮ (256)
6ನೇ ಬ್ಲಾಕ್‌ನಲ್ಲಿ ಕೋಳಿ ಶ್ರೀನಿವಾಸ್ (273), ರಾಘವೇಂದ್ರ (261), ಎಚ್.ಆರ್.ದುರ್ಗಮ್ಮ (169)
7ನೇ ಬ್ಲಾಕ್‌ನಲ್ಲಿ ಹೇಮಂತ್ ಕುಮಾರ್(307), ಪಟಾಕಿಶಿವಣ್ಣ (239), ಜೆ.ಇಂದ್ರಕಲಾ (201)
8 ನೇ ಬ್ಲಾಕ್‌ನಲ್ಲಿ ಎಸ್.ಪುಟ್ಟರಾಜು (677), ಕೆಂಪಮ್ಮ (254), ಮಾಮಾಜಿಗ್ನಿ (236), ಜಯಮ್ಮ (121)
9ನೇ ಬ್ಲಾಕ್‌ನಲ್ಲಿ ಕೆ.ಎಸ್.ಸುರೇಶ್ (362), ಬಿ.ಸಿ.ಬಿಂಧು (331), ಸೈಯದ್ ಶಫಿ (306),ಎಚ್.ಆರ್.ವೆಂಕಟೇಶ್(೨೯೨)
10ನೇ ಬ್ಲಾಕ್‌ನಲ್ಲಿ ಅಹಮದ್ ಖಾನ್(381), ಪುಟ್ಟಮ್ಮ (170), ಎನ್.ಜಾನಕಮ್ಮ (242), ಎಸ್.ಶಶಿಕಲಾ (246)
11ನೇ ಬ್ಲಾಕ್‌ನಲ್ಲಿ ಎಸ್.ಎಚ್.ಲತಾ(224), ಎಸ್.ಡಿ.ನಾಗರಾಜು (169)
12 ನೇ ಬ್ಲಾಕ್‌ನಲ್ಲಿ ಕುಮಾರಸ್ವಾಮಿ (391), ಚಂದ್ರಮ್ಮ (315)
13ನೇ ಬ್ಲಾಕ್‌ನಲ್ಲಿ ಜಬೀನ್ ತಾಜ್ (220), ಸುಭದ್ರಬಾಯಿ (324), ಚಂದ್ರಶೇಖರ ರಾವ್ (348), ವಿ.ಎನ್.ಶಿವಾಜಿ ರಾವ್ (314) ಜಯಗಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ