ಹುಳಿಯಾರು ಪಟ್ಟಣದ ಒಂದನೇ ಬ್ಲಾಕ್ ನಿಂದ ಆಯ್ಕೆಯಾಗಿರುವ ಸದಸ್ಯ ಎಲ್.ಆರ್.ಚಂದ್ರಶೇಕರ್ ತಮ್ಮ ಬ್ಲಾಕ್ ನ ರಸ್ತೆ ಬದಿಯಲ್ಲಿ ಬಿದಿದ್ದ ತ್ಯಾಜ್ಯವನ್ನು ಜೆಸಿಬಿ ಬಳಸಿ ತೆಗೆದು ಹಾಕಿಸುವ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ.
ಒಂದನೇ ಬ್ಲಾಕ್ ನ ಗಾಂಧಿಪೇಟೆ ರಸ್ತೆ , ಮಾಜಿ ಛೇರ್ಮನ್ ವೆಂಕಟಾಚಲಪತಿ ಶೆಟ್ಟಿಯವರ ಮನೆಯ ರಸ್ತೆ, ವಿವೇಕಾನಂದ ರಸ್ತೆ ಸೇರಿದಂತೆ ಇನ್ನಿತರ ರಸ್ತೆ ಬದಿಯ ಚರಂಡಿಗೆ ಹೊಂದಿಕೊಂಡಂತೆ ರಾಶಿರಾಶಿ ಕಸ,ಕಡ್ಡಿ, ಮಣ್ಣು ಬಿದ್ದಿತ್ತು. ಅಲ್ಲದೆ ಚರಂಡಿ ಸ್ವಚ್ಚಗೊಳಿಸುವಾಗಿನ ತ್ಯಾಜ್ಯ ಸಹ ಚರಂಡಿ ಪಕ್ಕದಲ್ಲೇ ಹಾಕಿದ್ದು ರಸ್ತೆಯನ್ನು ಕಿರಿದಾಗಿಸಿತ್ತು. ಇದರಿಂದಾಗಿ ಇಲ್ಲಿ ಸಂಚರಿಸುವರಿಗೆ ಕಿರಿಕಿರಿಯಾಗುತ್ತಿತ್ತಲ್ಲದೆ ವಾಹನಗಳು ಸಂಚರಿಸಲು ಪರದಾಡುವಂತಾಗಿತ್ತು. ಚರಂಡಿ ಪಕ್ಕದಲ್ಲೇ ಇದ್ದ ಮಣ್ಣು ಚರಂಡಿಯಲ್ಲಿ ಬಿದ್ದು ನೀರು ನಿಂತು ದುರ್ವಾಸನೆ ಉಂಟುಮಾಡಿತ್ತು.
ಇಂತಹ ಹತ್ತಾರೂ ಸಮಸ್ಯೆಗಳನ್ನು ಕಂಡಿದ್ದ ಇದೇ ಬ್ಲಾಕ್ ನವರೇ ಆದ ಎಲ್.ಆರ್.ಚಂದ್ರಶೇಖರ್ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸಿ, ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ವೇಳೆ ಮತದಾರಿಗೆ ನೀಡಿದ ಭರವಸೆಯಂತೆ ಕಾರ್ಯಗಳನ್ನು ಮಾಡಿಸಲು ಮುಂದಾಗಿದ್ದಾರೆ. ಈ ಕಾರ್ಯ ಮಾಡಿಸಲು ಪಂಚಾಯ್ತಿಂದ ಬರುವ ಹಣವನ್ನು ಕಾದುಕೂತರೆ ತಡವಾಗುತ್ತದೆ ಅವರು ಹಣಕೊಡಲಿ ಬಿಡಲಿ ತಮ್ಮ ಖರ್ಚಿನಲ್ಲಿ ಕೆಲಸ ಮಾಡಿಸಲು ಹೊರಟಿರುವುದು ಅಲ್ಲಿನ ನಿವಾಸಿಗಳ ಪ್ರಶಂಸೆಗೆ ಕಾರಣವಾಗಿದೆ.
ಪಂಚಾಯ್ತಿಯ ೩೯ ಸದಸ್ಯರ ಪೈಕಿ ೩೦ಕ್ಕೂ ಅಧಿಕ ಮಂದಿ ಸದಸ್ಯರು ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ಬ್ಲಾಕ್ ಗಳನ್ನು ಮರೆತು ಅಧ್ಯಕ್ಷರ ಆಯ್ಕೆಯ ಹಿನ್ನಲೆಯಲ್ಲಿ ಪ್ರವಾಸ ಹೋಗಿ ಮೋಜಿನಲ್ಲಿದ್ದರೆ, ಇವರು ಇದರ ಗೋಜು ಬೇಡವೆಂದಿದ್ದಾರೆ. ಯಾರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಅಂತಹವರನ್ನು ಅಧ್ಯಕ್ಷರಾಗಿ ಮಾಡಬೇಕಿದ್ದು ಅಧ್ಯಕ್ಷ ಆಯ್ಕೆಯ ದಿನಾಂಕದಂದು ನೋಡವೆಂದು ತಮ್ಮ ಬ್ಲಾಕ್ ನಲ್ಲಿ ಪ್ರಮುಖವಾಗಿ ಆಗಬೇಕಾದ ಕಾರ್ಯಗಳತ್ತ ಗಮನ ಮಾಡಿದ್ದಾರೆ.
-----------
ಚುನಾವಣೆಯ ಪ್ರಚಾರದ ಸಮಯದಲ್ಲಿ ಮತದಾರರಿಗೆ ಮಾತುಕೊಟ್ಟಂತೆ ಕೆಲಸ ಮಾಡಿಸುತ್ತಿದ್ದು , ಮೊದಲು ತಮ್ಮ ಬ್ಲಾಕ್ ನ ಎಲ್ಲಾ ರಸ್ತೆ,ಚರಂಡಿಗಳನ್ನು ಸ್ವಚ್ಚಗೊಳಿಸಿ ನಂತರ ಪಟ್ಟಣದ ಎಲ್ಲಾ ಪ್ರಮುಖ ರಸ್ತೆ ಹಾಗೂ ಚರಂಡಿಯ ಸ್ವಚ್ಚತಾ ಕಾರ್ಯ ಮಾಡಿಸುವ ಗುರಿ ಹೊಂದಿದ್ದೇನೆ : ಗ್ರಾ.ಪಂ.ಸದಸ್ಯ ಎಲ್.ಆರ್.ಚಂದ್ರಶೇಖರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ