ಹಳ್ಳಿಗಳಲ್ಲಿ ಇವತ್ತಿಗೂ ಗ್ರಾಮದೇವತೆ ಹಬ್ಬ ಎಂದ್ರೆ ಅದೇನೊ ಸಂಭ್ರಮ.ಪ್ರತಿ ವರ್ಷ ತಪ್ಪದೆ ಆಚರಿಸುವ ಜಾತ್ರೆಗಳಲ್ಲಿ ಒಂದೊಂದು ಊರಲ್ಲೂ ಒಂದೊಂದೊ ರೀತಿಯ ಆಚರಣೆ ಇರುತ್ತೆ.ಹೆಚ್ಚಿನ ಕಡೆ ಪ್ರಾಣಿ ಬಲಿ ಕೊಡುವುದು ಮಾಮೂಲು.
ಆದ್ರೆ ತುರುವೇಕೆರೆ ಸಮೀಪದ ಕೊಟ್ಟೂರನ ಕೊಟ್ಟಿಗೆ ಯಲ್ಲಿ ಗ್ರಾಮದೇವತೆಗಳ ಹಬ್ಬದಲ್ಲಿ ಮಡೆ ಉತ್ಸವದ ನಡೆಯುವಾಗ ಮಾಡುವ ಬಾಳೆಹಣ್ಣಿನ ಗುಡ್ಡೆ ಆಚರಣೆ ಮಾತ್ರ ವಿಶಿಷ್ಟವಾಗಿದ್ದು ಸುತ್ತಮುತ್ತಲ ಗ್ರಾಮಗಳಲ್ಲಿ ಭಾರೀ ಪ್ರಸಿದ್ಧಿ ಪಡೆದಿದೆ.
ಈ ಊರಲ್ಲಿ ಗ್ರಾಮ ದೇವರಾಗಿ ಮುತ್ತುರಾಯಸ್ವಾಮಿ ಹಾಗೂ ಕೊಲ್ಲಾಪುರದಮ್ಮ ಹಾಗೂ ಮುಳಕಟ್ಟಮ್ಮನನ್ನು ಗ್ರಾಮದೇವತೆಗಳನ್ನಾಗಿಯೂ ಆರಾಧಿಸುತ್ತಿದ್ದಾರೆ.
ಯುಗಾದಿ ಹಬ್ಬದ ನಂತರ ಒಂದು ವಾರಕ್ಕೆ ಗ್ರಾಮದಲ್ಲಿ ಗ್ರಾಮ ದೇವತೆಗಳ ಜಾತ್ರೆ, ರಥೋತ್ಸವ ನಡೆಯುತ್ತದೆ. ಈ ಬಾರಿ ಊರ ಹೊರಗಿರುವ ಮುಳಕಟ್ಟಮ್ಮನ ನೆಲೆದೇವಾಲಯಕ್ಕೆ ಪೀಠ ಪ್ರತಿಷ್ಠಾಪನೆ ಮಾಡಿದ್ದರಿಂದ ಚೈತ್ರ ಮಾಸದಲ್ಲಿ ನಡೆಯಬೇಕಿದ್ದ ಊರಹಬ್ಬ ಹಾಗೂ ಮಡೆ ಉತ್ಸವ ಮೊನ್ನೆ ನಡಿತು.
ಬೆಳಗ್ಗೆ ಗ್ರಾಮ ದೇವತೆಗಳಿಗೆ ಗಂಗಾಸ್ನಾನ, ಊರೊಳಗಿನ ದೇವಾಲಯದಲ್ಲಿ ಪೂಜೆ ನಂತರ ಮುಳಕಟ್ಟಮ್ಮನನ್ನು ಊರಾಚೆ 2 ಕಿ.ಮೀ. ದೂರದ ನೆಲೆ ದೇವಾಲಯಕ್ಕೆ ವಾದ್ಯದೊಂದಿಗೆ ಉತ್ಸವದಲ್ಲಿ ಕರೆದೊಯ್ಯಲಾಗುತ್ತದೆ. ಅಷ್ಟರಲ್ಲೆ ಊರಿನ ಪ್ರತಿ ಮನೆಯ ಎಲ್ಲಾ ಗ್ರಾಮಸ್ಥರು ನೆರೆದು ಅಲ್ಲೇ ಒಲೆ ಹಾಕಿ ದೇವಿಗೆ ಮಡೆ ಅನ್ನ ಸಿದ್ಧಪಡಿಸುತ್ತಾರೆ. ಅಷ್ಟರೊಳಗೆ ಪ್ರತಿ ಮನೆಯಿಂದ ತರುವ ಕನಿಷ್ಠ 3 ಬಾಳೆಗೊನೆ ಹಾಗೂ 9 ತೆಂಗಿನಕಾಯಿ ಯಿಂದ ಬಾಳೆಹಣ್ಣಿನ ಗುಡ್ಡೆ ಆಚರಣೆ ನಡೆಯುತ್ತೆ. . ಗುಡ್ಡೆಗಳಿಂದ ಗ್ರಾಮಸ್ಥರು ನೀಡಿದ ಬಾಳೆಹಣ್ಣು, ತೆಂಗಿನಕಾಯಿ ಮಡೆ ಅನ್ನಕ್ಕೆ ಹಾಕಿ ಬಡವರಿಗೆ ದಾನ ಮಾಡಿ ಮಿಕ್ಕ ಅನ್ನವನ್ನು ಪ್ರಸಾದ ರೂಪದಲ್ಲಿ ಮನೆಗೆ ತರುತ್ತಾರೆ. ಬಾಳೆಹಣ್ಣನ್ನು ಪರಸ್ಪರ ಬಾಗಿನ ನೀಡ್ತಾರೆ.ಅಲ್ಲಿಗೆ ಹಬ್ಬ ಮುಗಿಯುತ್ತೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ